ಗಾಳಿಯ ಮಡಿಲು

Author : ಸಿದ್ದು ಸತ್ಯಣ್ಣವರPublished by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ಎಮ್ಮಿಗನೂರು, ಬಳ್ಳಾರಿ- 583 113
Phone: 9480353507

Synopsys

ಲೇಖಕ ಸಿದ್ದು ಸತ್ಯಣ್ಣವರ್ ಅವರ ಕಾವ್ಯ ಕೃತಿ ʻಗಾಳಿಯ ಮಡಿಲುʼ. ಪುಸ್ತಕದ ಬೆನ್ನುಡಿಯಲ್ಲಿ ನಟರಾಜ್‌ ಹುಳಿಯಾರ್ ಅವರು “ಒಂದು ಮಧ್ಯಾಹ್ನ ಸಿದ್ದು ಸತ್ಯಣ್ಣವರ್ ಧಾರವಾಡದ 'ಸಂಗಾತ' ಆಫೀಸಿನಲ್ಲಿ ಇದ್ದಕ್ಕಿದ್ದಂತೆ ತಮ್ಮ 'ಕನ್ನಡಿ' ಎಂಬ ಪದ್ಯ ಓದಿದರು. ಆ ಪದ್ಯದೊಳಗಿನ ನಿರೂಪಕ ಛಿದ್ರಗೊಂಡ ಸ್ವಂತದ ಚಿತ್ರಗಳನ್ನು ಕಾಣಲೆತ್ನಿಸಿದ್ದ ರೀತಿಯಲ್ಲಿ ಸತ್ಯ ಹುಡುಕುವ, ನಿಜವನ್ನು ಕಾಣುವ ತುಡಿತ ಸ್ಪಷ್ಟವಾಗಿ ಕಾಣುತ್ತಿತ್ತು. ಇದು ಅವರ ಇತರ ಕೆಲವು ಪದ್ಯಗಳಲ್ಲೂ ಮುಂದುವರಿದಿದೆ. ಸುದ್ದಿ ಸಾರುವ ದೃಶ್ಯಮಾಧ್ಯಮದಲ್ಲಿ ನಿತ್ಯ ಹೆಣಗಾಡುವ ಸಿದ್ದು ಥಠದ ಗೆಳೆಯರು ಪದ್ಯ, ಕತೆಗಳೊಂದಿಗೆ ಸೆಣಸುವ ಈ ಪರಿ ಇಂಥ ಎಳೆಯರ ಜೀವನ್ಮರಣದ ಪ್ರಶ್ನೆ ಕೂಡ. ಯಾಕೆಂದರೆ, ಹೇಗಾದರೂ ಸರಿ, ಮಾತನ್ನು ಬಳಸಲೇಬೇಕಾದ ಒತ್ತಡದಲ್ಲಿರುವ ಇಂಥ ವೃತ್ತಿಜೀವಿ ಗೆಳೆಯರ ಒಳ ಮಾತುಗಳು ಹಾಗೂ ಖಾಸಗಿ ಪಿಸುಮಾತುಗಳೇ ಈ ಪದ್ಯಗಳು. ಈ ಪದ್ಯಲೋಕ ಸಿದ್ದುವನ್ನು ಹಲ ಬಗೆಯಲ್ಲಿ ಕಾಪಾಡಿದೆ: ಭಾವನೆ, ತಾಕಲಾಟ, ನೈತಿಕ ಹಿಂಜರಿಕೆ, ದುಕು, ಸೆಡವು, ಒಳಬದುಕು ಹಾಗೂ ಸುತ್ತಲ ಬದುಕಿನ ಕಟುವಿಮರ್ಶೆ... ಇವೆಲ್ಲಕ್ಕೂ ಇರುವ ಮಾಧ್ಯಮ ಪದ್ಯವೊಂದೇ. ಈ ಹಾದಿಯಲ್ಲಿ ಮೈದಾಳಿರುವ 'ಗಾಳಿಯ ಮಡಿಲು' ಸಂಕಲನದಲ್ಲಿ ಹಲವು ಆಕರ್ಷಕ ಪದ್ಯಗಳು, ಪಂಕ್ತಿಗಳು, ಕಾಯ ಮಿಂಚುಗಳಿವೆ. ಎಲ್ಲ ದಿಕ್ಕಿನ ಕನ್ನಡ ಪ್ರತಿಭೆಗಳನ್ನು ಹೆಕ್ಕಿ ಬೆಳಕಿಗೆ ತರುವ ಪಲ್ಲವ ವೆಂಕಟೇಶ್ ಗದಗದ ಡಂಬಳದ ಕಡೆಯ ಸಿದ್ದು ಥರದ ಹತ್ತಾರು ಹೊಸ ಕವಿಗಳ ಕಾವ್ಯೋತ್ಸಾಹ ಬತ್ತದಂತೆ ಪೊರೆಯುತ್ತಿರುವುದು ಕನ್ನಡ ಸಂಸ್ಕೃತಿಯನ್ನು ರೂಪಿಸುವ ಸದ್ದಿಲ್ಲದ ಸುಂದರ ಕಾಯಕವೂ ಹೌದು” ಎಂದು ಹೇಳಿದ್ದಾರೆ.

About the Author

ಸಿದ್ದು ಸತ್ಯಣ್ಣವರ

ಸದ್ಯ ಧಾರವಾಡದ ನಿವಾಸಿಯಾಗಿರುವ ಕವಿ ಸಿದ್ದು ಸತ್ಯಣ್ಣವರ ಪತ್ರಕರ್ತರೂ ಹೌದು. ಮೂಲತಃ ಗದಗಿನವರಾದ ಸಿದ್ದು ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಹಾನದಿಯ ಹರಿವಿನ ಗುಂಟ’ ಎಂಬ ಪ್ರವಾಸ ಕಥನ ಪ್ರಕಟವಾಗಿದೆ. ಹಾಗೆಯೇ ಕನಸ ಬೆನ್ನತ್ತಿ ನಡಿಗೆ’ ಕವನ ಸಂಕಲನ ಮತ್ತು ’ಹೊಲ ಅಪ್ಪ ಮತ್ತು ನಾನು’ ಎನ್ನುವ ಕೃತಿಗಳು ಪ್ರಕಟಗೊಂಡಿವೆ. ...

READ MORE

Related Books