ಕಾವ್ಯ ಮಂಜರಿ

Author : ನಾಗವೇಣಿ ಹೆಗಡೆ

Pages 96

₹ 90.00
Year of Publication: 2017
Published by: ವೆಂಕಟ್ರಮಣ ಪ್ರಕಾಶ‌ನ.
Address: ವೆಂಕಟ್ರಮಣ.ಜಿ.ಹೆಗಡೆ, ಹೆಗ್ಗರ್ಸಿಮನೆ. ಪೋ : ಮತ್ತಿಗಾರ್, ತಾ : ಶಿರಸಿ , ( ಉತ್ತರ ಕನ್ನಡ ) , ಪಿನ್ : 581450

Synopsys

ಕಾವ್ಯ ಮಂಜರಿ. ಲೇಖಕಿ ನಾಗವೇಣಿ ಹೆಗಡೆ ಅವರು ವೈವಿಧ್ಯತೆಗಳಿಂದ ಕಟ್ಟಿದ ಮಾಲಿಕೆಯಿದು. ಒಂದೊಂದು ಕವಿತೆಯ ಆಶಯ ಒಂದೊಂದು ತೆರನಾಗಿದೆ.ಇದೊಂದು ಚಂದದ ಕವನ ಸಂಕಲನ.ಇದರಲ್ಲಿ ಕ್ಲಿಷ್ಟತೆಯಾಗಲಿ,ಧ್ವನಿಗಳಾಗಲಿ ಕಾಡುವುದಿಲ್ಲ ಬದಲಿಗೆ ಬಿಚ್ಚು ವಾಕ್ಯಗಳಿಂದ ಭಾವಗಳನ್ನು  ಸೆಳೆಯುವ ಅಂಶಗಳು ಬಹಳಷ್ಟಿವೆ. ವಿವಿಧ ವಿಷಯವಸ್ತುಗಳನ್ನೊಳಗೊಂಡ ಕೃತಿ ಇದು. ಇಡೀ ಸೃಷ್ಟಿಯ ವ್ಯಾಪಾರವೇ ಇಲ್ಲಿ ವಿಷಯವಾಗಿರುವುದು ವಿಶೇಷ.ಕವಿತೆಗಳಲ್ಲಿ ತಾತ್ವಿಕತೆ, ಪಾತ್ರ ವೈವಿಧ್ಯತೆ , ಅಸ್ತಿತ್ವದ ಹುಡುಕಾಟ , ಭಾವದ ತೀವ್ರತೆಗಳೂ ಸುಲಭಗ್ರಾಹ್ಯವಾಗಿ ಸರಳವಾಗಿ ಓದಿಸಿಕೊಳ್ಳುತ್ತವೆ. ಈ ಸಂಕಲನ ಭಾವಪ್ರಧಾನ, ಆತಂಕ , ಸಮಾಜದರ್ಶನ, ನಿಸರ್ಗ ದರ್ಶನ , ರಾಜ್ಯ , ರಾಷ್ಟ್ರಾದಿಗಳ ಬಗೆಗೆ ಎಚ್ಚರಿಕೆಯ ಸಂದೇಶ, ತಾಯಿ   ಕರುಣೆ , ಅಪ್ಪನ ನಿರ್ವಾಜ್ಯ , ಪ್ರೀತಿ ಹೀಗೆ ವಿವಿಧ ಮಗ್ಗಲುಗಳಿಗೆ ಹೊರಳುತ್ತ ಸಾಗುತ್ತದೆ. ಇಲ್ಲಿನ ಕವಿತೆಗಳಲ್ಲಿ ಕಠಿಣ ಧೋರಣೆಗಳು ಕಾಣುವುದಿಲ್ಲ .ಸೌಮ್ಯತೆ ಈ ಸಂಕಲನದ ವೈಶಿಷ್ಟ್ಯ. ಕಾವ್ಯಮಂಜರಿ ಹೆಣ್ಣು, ಮಕ್ಕಳು , ವೃದ್ಧಾಪ್ಯ, ವೈಧವ್ಯ , ಶೋಷಣೆ , ಅಸೂಯೆ , ಅಹಂಕಾರ , ಪ್ರೀತಿ , ನಿವೇದನೆ , ವಿರಹ, ಆಧ್ಯಾತ್ಮ , ರೀತಿ - ನೀತಿ, ದಾಂಪತ್ಯ , ದೇಶ ಪ್ರೇಮ, ಸ್ವದೇಶಿ ಮಂತ್ರ , ರೈತನ ಬಗೆಗಿನ ಕಳಕಳಿಯಿಂದ ಕೂಡಿದ ಕವನ ಸುಮಗುಚ್ಛ....

About the Author

ನಾಗವೇಣಿ ಹೆಗಡೆ

ಕವಯತ್ರಿ ನಾಗವೇಣಿ ಹೆಗಡೆ ಅವರು ಮೂಲತಃ ಶಿರಸಿಯ ಹೆಗ್ಗರ್ಸಿಮನೆ ಗ್ರಾಮದವರು. ಜನಿಸಿದ್ದು ಶಿರಸಿಯ ಬೊಮ್ಮನಹಳ್ಳಿಯಲ್ಲಿ. ತಂದೆ ಕಮಲಾಕರ, ತಾಯಿ ಸುನಂದಾ. ಗೃಹಿಣಿಯ ಹೊಣೆಗಾರಿಕೆ ಮಧ್ಯೆಯೂ ಫ್ಯಾಷನ್ ಡಿಸೈನ್ ಸೇರಿದಂತೆ ಸಾಹಿತ್ಯದಲ್ಲೂ ವಿಶೇಷ ಆಸಕ್ತರು. ಮೊದಲಿನಿಂದಲೂ ಕರಕೌಶಲಗಳಲ್ಲಿಆಸಕ್ತರು. ಮಾತ್ರವಲ್ಲ; ಭರ್ಚಿಎಸೆತ, ರೀಲೆ, ವಾಲಿಬಾಲ್ , ಕಬ್ಬಡ್ಡಿಗಳಲ್ಲೂ ಬಹುಮಾನ ವಿಜೇತರು. ನಾಡಿನ ಹಲವಾರು ಪತ್ರಿಕೆಗಳಲ್ಲಿಇವರ ಕಥೆ-ಕವನಗಳು  ಪ್ರಕಟಗೊಳ್ಳುತ್ತಿವೆ. `ಕಣ್ಣು'  ಪತ್ರಿಕೆಯ ಶಿರಸಿ ಉಪಸಂಪಾದಕಿ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಕಾವ್ಯಮಂಜರಿ (ಕವನ ಸಂಕಲನ-2018), ಅಗ್ನಿದಿವ್ಯ (ಕವನ ಸಂಕಲನ( 2021), ಒಲವ ಹಂಚುವ ಮುದುಕಿ(ಮಕ್ಕಳ ಕಾದಂಬರಿ-2021, ವಿನಯವಾಣಿ ...

READ MORE

Related Books