ಮುಕುಟಮಣಿ

Author : ದೊಡ್ಡರಂಗೇಗೌಡ

Pages 60

₹ 160.00
Year of Publication: 2017
Published by: ಸಮರ್ಥ ಪ್ರಕಾಶನ
Address: # 966 ಲಕ್ಷೀ ನರಸಿಂಹ ನಿಲಯ, 6 ನೇ ಮುಖ್ಯ ರಸ್ತೆ, ವಿ.ವಿ ನಗರ ಎಚ್. ಎಂ. ಟಿ, ಲೇಔಟ್, ಆರ್‍. ಟಿ ನಗರ ಪೋಸ್ಟ್, ಬೆಂಗಳೂರು

Synopsys

ಕವಿ ಡಾ. ದೊಡ್ಡರಂಗೇಗೌಡ ಅವರ ಕವನ ಸಂಕಲನ- ಮುಕುಟಮಣಿ. ಕೃತಿಗೆ ಮುನ್ನುಡಿ ಬರೆದ ಹಿರಿಯ ಪತ್ರಕರ್ತ ಡಾ. ಬಾಬು ಕೃಷ್ಣಮೂರ್ತಿ ಅವರು, ಈ ಕವನಗಳಲ್ಲಿ ಕವಿ ದೇಶಭಕ್ತನಾಗಿ ಮಿಂಚುತ್ತಾನೆ. ಇಲ್ಲಿ ಸಮಾಜದ ದುರ್ದಸೆಗಾಗಿ ಮರುಗುವ; ಭೂಮಿ ಪುತ್ರನಾಗಿ ದುಡಿಮೆಯನ್ನು ಆರಾಧಿಸುವ; ಇಂದಿನ ನಗರ ಜೀವನದಿಂದ ರೋಸಿ ಹೋಗಿ ಬೇಸರಪಡುವ; ಪ್ರಕೃತಿಯ ವೈಭವವನ್ನು ಆಸ್ವಾದಿಸಿ ಭಾವಪರವಶನಾಗಿ ಹಾಡುವಂಥ; ವಿಶ್ವಮಾನವತೆಯ ಸಂದೇಶ ಸಾರುವ ಕವನಗಳಿವೆ. ಕವಿ ದೊಡ್ಡರಂಗೇಗೌಡರು ಯುವಜನತೆಗೆ ಸಮಾಜವನ್ನು ಸರಿ ಪಡಿಸುವಂತೆ ಕರೆ ನೀಡುತ್ತಾರೆ. ಅವರ ಮಾತುಗಳೆಲ್ಲವೂ ದೇಶ ಕಟ್ಟಬೇಕೆನ್ನುವ ಕಿವಿಮಾತು ಹೇಳುತ್ತವೆಯೇ ಹೊರತು ಸಮಾಜವನ್ನು ಒಡೆಯುವ, ಜನರಲ್ಲಿ, ದ್ವೇಷದ ಕಿಚ್ಚನ್ನು ಹಚ್ಚುವ ಅಥವಾ ದೌರ್ಜನ್ಯ ದಮನಗಳನ್ನು ಪ್ರೋತ್ಸಾಹಿಸುವ ನೈತ್ಯಾತ್ಮಕ ವಿಚಾರಗಳಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

 

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Related Books