ಸಂತೆಯೊಳಗೊಬ್ಬ

Author : ಸತೀಶ ಹೆಚ್. ಆರ್

Pages 98

₹ 100.00




Year of Publication: 2021
Published by: ಸೃಷ್ಟಿ ಪಬ್ಲಿಕೇಷನ್ಸ್
Address: ತರಿಕೆರೆ-577228, ಚಿಕ್ಕಮಂಗಳೂರು ಕರ್ನಾಟಕ
Phone: 9036627129

Synopsys

`ಸಂತೆಯೊಳಗೊಬ್ಬ’ ಕೃತಿಯು ಸತೀಶ್ ಹೆಚ್. ಆರ್ ಅವರ ಕವನಸಂಕಲನವಾಗಿದೆ. ಕೃತಿಯ ಕುರಿತು ನಾರಾಯಣ ಕಂದಗಲ್ ಅವರು, `ತನ್ನೊಳಗೆ ಆಸೆ ದುರಾಸೆಗಳೆಂಬ ಜೇಡರ ಬಲೆಯನ್ನು ನೇಯ್ದು , ತನಗೆ ತಾನೇ ಅದರಲ್ಲಿ ಸಿಲುಕಿಕೊಂಡು ವಿಲಿವಿಲಿ ಒದ್ದಾಡುತ್ತಿರುವುದು ಇಂದಿನ ಜನರ ಮನಸ್ಥಿತಿ. ಇಂತದ್ದರಲ್ಲಿ ಪ್ರೀತಿ, ಸ್ನೇಹ ವಿಶ್ವಾಸಗಳು ಮಾರುಕಟ್ಟೆಯಲ್ಲಿ ಪುಕ್ಕಟೆ ಸಿಕ್ಕರೂ ಕೊಳ್ಳಲಾರದ ದುಸ್ಥಿತಿಯಲ್ಲಿ ಮನುಷ್ಯನಿದ್ದಾನೆ. ಕೊಂಡರೂ ಅವುಗಳನ್ನು ಉಳಿಸಿಕೊಳ್ಳುವ ಆತ್ಮವಿಶ್ವಾಸ ಹೊಂದಿಲ್ಲ ಎಂಬ ಆಶಯದೊಂದಿಗೆ ‘ಸಂತೆಯೊಳಗೊಬ್ಬ’ ಕವನ ಅರ್ಥಪೂರ್ಣವಾಗಿ ಮೂಡಿಬಂದಿದೆ. ಮಾನವನ ದುರಾಸೆಯ ಕೊಡಲಿ ಪೆಟ್ಟಿಗೆ ನಲುಗಿ ನಾಶವಾದ ಕಾಡು, ಪರಿಣಾಮವಾಗಿ ಮಳೆ ಬಾರದೆ ಭೂತಾಯಿ ಕೊರಗಿ ಕರಗಿ ಕಂಗಾಲಾದ ಧಾರುಣ ಸ್ಥಿತಿಯ ಚಿತ್ರಣ ‘ಸಂಕುಲ’, ‘ನಶ್ವರ’ ಕವಿತೆಯಲ್ಲಿದೆ. ಜಾತಿ, ಧರ್ಮ, ಮದ, ಮತ್ಸರ, ಅಜ್ಞಾನ-ಅಂಧಕಾರ, ನ್ಯಾಯ-ನೀತಿ, ಸತ್ಯ-ಶಾಂತಿಯಂತಹ ಸೂಕ್ಷ್ಮ ವಿಚಾರಗಳು ಕವಿಯನ್ನು ಅತೀವವಾಗಿ ಬಾಧಿಸಿದಂತಿವೆ. ಅಂತೆಯೆ ‘ನನ್ನ ಮಾತು ಮೌನವಾಗಿದೆ’, ‘ಹೀಗೊಂದು ಸತ್ಯ’, ‘ಮಹಾತ್ಮ’ ದಂತಹ ಅದ್ಭುತ ಕವನಗಳು ಕವಿಯ ಎದೆಯಾಳದಿಂದ ಮೂಡಿಬಂದಿವೆ. ಮೌಲ್ಯ ಪತನಗೊಂಡ ಪಾತಾಳ ಸೇರಿದ ಇಂದಿನ ಸಂದರ್ಭಕ್ಕೆ ಈ ಕವನಗಳು ಸಕಾಲಿಕವೆನಿಸಿವೆ. ‘ಕಣ್ಣೊಳಗಿನ ಬೆಳಕು’ ಕೃತಿಯ ಸಾಲುಗಳು ಕವಿಯ ಭಾವುಕತೆಗೆ ಸಾಕ್ಷಿಯಾಗಿವೆ. ತನಗಾಗಿ ಜೀವನವನ್ನೆ ತೇಯ್ದ ತಾಯಿಯ ಬಗೆಗೆ ಅಪಾರವಾದ ಗೌರವ, ಅಭಿಮಾನ ಇಲ್ಲಿ ವ್ಯಕ್ತವಾಗಿದೆ. ಗೊಡ್ಡು ಸಂಪ್ರದಾಯವನ್ನು ತಿರಸ್ಕರಿಸುವ ‘ಅನಿವಾರ್ಯ’ ಕವನ ಸಮಾಜದ ಕೊಂಕು -ಡೊಂಕು ಮಾತುಗಳೊಡನೆ ಬದುಕು ಕಟ್ಟಿಕೊಂಡು, ಪ್ರೀತಿಯನ್ನು ಧಾರೆ ಎರೆದ ಹೆಣ್ಣಿನ ಚಿತ್ರಣವಿರುವ ‘ಹೆಣ್ಣು’ ಕವನವು, ಉಚಿತ ಪದ ಸಂಯೋಜನೆಯೊಂದಿಗೆ ಸಶಕ್ತವಾಗಿ ಮೂಡಿ ಬಂದಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಸತೀಶ ಹೆಚ್. ಆರ್

ಸತೀಶ ಹೆಚ್. ಆರ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೌಳಹಿರಿಯೂರು ಗ್ರಾಮದವರು. ತರೀಕೆರೆಯಲ್ಲಿ ವಾಸವಿದ್ದಾರೆ. ಆದರೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕರೆಕಲ್ ಕ್ಯಾಂಪ್ ನಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಾಗಿದ್ದಾರೆ. ಕನ್ನಡ ವಿಶ್ವವಿದ್ಯಾಲಯದಿಂದ ಎಂಎ ಕನ್ನಡ, ಕುವೆಂಪು ವಿಶ್ವ ವಿದ್ಯಾಲಯದಿಂದ ಬಿಎಡ್ ಪದವೀಧರರು. ರಾಜ್ಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ನಲಿಕಲಿ ಹಾಗೂ ಇತರ ವಿಷಯಗಳಲ್ಲಿ ತರಬೇತಿ ಪಡೆದು ತಾಲೂಕು, ಜಿಲ್ಲಾ, ಹಾಗೂ ವಿಭಾಗ ಮಟ್ಟದ ಶಿಕ್ಷಕರಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಿರುತ್ತಾರೆ. ಅವರ ಕತೆ, ಕವಿತೆ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಕೃತಿಗಳು ...

READ MORE

Related Books