ಮೌನದೊಳಗಣ ಭಾವ

Author : ನಾರಾಯಣಸ್ವಾಮಿ ವಿ.

Pages 90

₹ 100.00
Year of Publication: 2021
Published by: ಆಶಾ ಪ್ರಕಾಶನ
Address: ಬಂಡಹಟ್ಟಿ, ಮಾಸ್ತಿ ಹೋಬಳಿ ಮಾಲೂರು ತಾಲೂಕು, ಕೋಲಾರ ಜಿಲ್ಲೆ.
Phone: 9880932972

Synopsys

ಲೇಖಕ ನಾರಾಯಣಸ್ವಾಮಿ ವಿ. ಅವರ ಕೃತಿ ‘ಮೌನದೊಳಗಣ ಭಾವ’. ಕೃತಿಗೆ ಬೆನ್ನುಡಿ ಬರೆದ ಮಂಜುಳಾ ಭಾರ್ಗವಿ ‘'ಗುಡಿಯೊಳಗೆ 'ಎನ್ನುವ ಕವಿತೆಯನ್ನು ಪ್ರಶ್ನೆಯಾಗಿಟ್ಟು ಕೊಂಡು, ಅವಲೋಕನ ಮಾಡಹೊರಟರೆ, ಉಳಿದೆಲ್ಲ ಕವಿತೆಗಳು ಅದಕ್ಕೆ ಉತ್ತರವೆಂಬಂತೆ ಭಾಸವಾಗುವುದು ಸತ್ಯ. ಪ್ರತಿ ಕವಿತೆಯಲ್ಲೂ ಕೂಡ ಒಂದು ಸಮಾಜಮುಖಿ ವಿಶೇಷ ಕಾಳಜಿಯನ್ನು, ಕವಿಗಳು ಹೊಂದಿರುವುದನ್ನು ನಾವು ಕಾಣಬಹುದು. ಹುಟ್ಟೂರ ಬಗೆಗಿನ ಹಂಬಲವನ್ನು ಪ್ರತಿ ಉಸಿರಾಟದಲ್ಲೂ ನೆನೆಯುವ ಇವರು, ಶಾಲಾ ದಿನಗಳಿಂದ ಹಿಡಿದು ತಮ್ಮ ಇದುವರೆಗಿನ ನೋವಿನ ಹೋರಾಟದ ಬದುಕನ್ನು ನೆನೆಯುವಂತೆ ಕಾಣುವುದು ಒಂದು ಸೋಜಿಗವೇ ಸರಿ. ಇಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರವೆಂಬಂತೆ ನ್ಯಾಯ, ನಿಷ್ಠೆ, ಬಡವ, ಬಲ್ಲಿದ, ಊರು, ಕೇರಿ, ಪ್ರಕೃತಿ, ದೇವರು, ತಾಯಿ, ಆಧುನಿಕತೆ ಹೀಗೆ ಹತ್ತು ಹಲವು ಭಾವಗಳಿಗೆ ನೈತಿಕ ನೆಲೆಗಟ್ಟಿನಲ್ಲಿ ಮೌನದಿಂದಲೇ ಉತ್ತರಿಸುತ್ತಾ ಹೋಗುವ ಕವಿತೆಗಳು ಮುಂದಿನ ಯುವ ಪೀಳಿಗೆಯವರಿಗೆ ಒಂದು ಮಾರ್ಗದರ್ಶನದ ಬೆಳಕಾಗಿ ಮೂಡಿಬರಲಿ ಮತ್ತು ಅವರ ಮುಂದಿನ ಕನಸುಗಳು ನನಸಾಗಲಿ’ ಎಂದು ಪ್ರಶಂಸಿಸಿ, ಹಾರೈಸಿದ್ದಾರೆ. 

About the Author

ನಾರಾಯಣಸ್ವಾಮಿ ವಿ.
(21 July 1977)

ನಾರಾಯಣಸ್ವಾಮಿ.ವಿ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಬಂಡಹಟ್ಟಿ ಗ್ರಾಮದವರು. ತಂದೆ ವೆಂಕಟರಮಣಪ್ಪ, ತಾಯಿ ಚಿಕ್ಕಪಾಪಮ್ಮ. ಮಾಲೂರಿನ ಪ್ರಥಮದರ್ಜೆ ಕಾಲೇಜಿನಲ್ಲಿ  ಬಿ.ಎ , ಹಾಗೂ ತುಮಕೂರಿನ ವಿದ್ಯೋದಯಾ ಕಾನೂನು ಕಾಲೇಜಿನಲ್ಲಿ  ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ.ಹಲವಾರು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಹಿತ್ಯಕ್ಕಾಗಿ ಚೆಳಕು ಸಂಸ್ಥೆಯಿಂದ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಯನ್ನು ಮತ್ತು ಮಂದಾರ ಸಾಂಸ್ಕೃತಿಕ  ವೇದಿಕೆ ಬೀದರ್ ಇವರಿಂದ ರಾಜ್ಯಮಟ್ಟದ ಕಾವ್ಯ ಚೂಡಾಮಣಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.  ಕೃತಿ: ಮೌನದೊಳಗಣ ಭಾವ ...

READ MORE

Related Books