ಶತಮಾನದ ಗಾನ

Author : ಕಯ್ಯಾರ ಕಿಞ್ಣಣ್ಣ ರೈ

Pages 320

₹ 70.00
Year of Publication: 1986
Published by: ಕವಿತಾ ಕುಟೀರ
Address: ಪೆರಡಾಲ, ಕಾಸರಗೋಡು. 671551

Synopsys

’ಶತಮಾನದ ಗಾನ’ ಕಯ್ಯಾರ ಕಿಞ್ಞಣ್ಣ ರೈ ಅವರ ಪ್ರಕಟಿತ ಮತ್ತು ಅಪ್ರಕಟಿತ ಕವನಗಳ ಸಂಕಲನ. ಅವರ ’ಶ್ರೀಮುಖ’ ದಿಂದ ಹಿಡಿದು ’ಪಂಚಮಿ’ ಮತ್ತು ಹೊಸ ಕವನಗಳನ್ನು ಇಲ್ಲಿ ಕೊಡಲಾಗಿದೆ.

ಇಲ್ಲಿ ನೂರಕ್ಕೂ ಮಿಕ್ಕಿದ ಕವನಗಳಿರುವುದರಿಂದ, ಆ ಸಂಖ್ಯಾಸಂಕೇತವಾಗಿಯೂ, ಈ ಶತಮಾನದ ಕಾಲಾವಧಿ, ಕವಿಯ ಬದುಕಿಗೆ ನೀಡಿದ ನೋವು ನಲಿವುಗಳ ಅಭಿವ್ಯಕ್ತಿಯದ್ಯೋತಕವಾಗಿಯೂ ಕೃತಿಗೆ ‘ಶತಮಾನದ ಗಾನ ಎಂಬ ಹೆಸರು ಸಂದಿದೆ. ಕವನಗಳನ್ನು  ಭಾವ-ಜೀವ, ಪ್ರಗತಿ ಪಥ, ಪ್ರಕೃತಿ ಪ್ರೀತಿ, ನಾಡು ನುಡಿ, ಕಥನ ಕವನ, ತತ್ವ ಸತ್ವ, ಚತುರ್ದಶಿ, ಮುಂತಾದ ಭಾಗಗಳಲ್ಲಿ ಹಂಚಲಾಗಿದೆ.

About the Author

ಕಯ್ಯಾರ ಕಿಞ್ಣಣ್ಣ ರೈ
(08 June 1915 - 09 August 2015)

 ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ, ಅಖಿಲಭಾರತ ಮಟ್ಟದಲ್ಲಿ ಜರುಗಿದ 66 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915ರ ಜೂನ್ 8 ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದೆ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಸಹ ಹೋರಾಟ ಮಾಡಿದವರು.. ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನು ರಚಿಸಿದ್ದಾರೆ. ಕಾರ್ನಾಡ ಸದಾಶಿವರಾವ, ...

READ MORE

Related Books