ಇಂಚರ

Author : ಎಂ.ಜಿ. ದೇಶಪಾಂಡೆ

Pages 112

₹ 80.00




Year of Publication: 2009
Published by: ಶ್ರೀಹರಿ ಪ್ರಕಾಶನ
Address: # 15-03-102, ಲಕ್ಷ್ಮಿ ಆಲಯ, ರಾಂಪೂರೆ ಕಾಲೊನಿ, ಬಿವಿಬಿ ಕಾಲೇಜು ರಸ್ತೆ, ಬೀದರ-585401
Phone: 8971067233

Synopsys

ಡಾ. ಎಂ.ಜಿ. ದೇಶಪಾಂಡೆ ಅವರ ಹನಿಗವನಗಳ ಸಂಕಲನ-ಇಂಚರ. ಇಲ್ಲಿಯ ಹನಿಗವನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ .ಪುಟ್ಟ ಪುಟ್ಟ ಹನಿಗವನಗಳು ಮನಸ್ಸಿಗೆ ಮುದನೀಡುತ್ತವೆ. ಬಿರುಗಾಳಿ ಬಿಸಿಲುಗಳ ಅಬ್ಬರವಿಲ್ಲ ತಾನೇ ಎಂದೂ ಕಾಡಲಿಲ್ಲ ಅಮ್ಮ ನಿನ್ನ ಮಡಿಲಿನ ಪ್ರೀತಿಯಲ್ಲಿ.. ತಾಯಿಯ ಕುರಿತ ಈ ಚಿಕ್ಕದಾದ ಹನಿಗವನ ತಾಯಿಯ ಮಮತೆಯನ್ನು ಎತ್ತಿ ತೋರುತ್ತದೆ. ನಾನು ಎಣ್ಣೆ ನೀನು ಬತ್ತಿ ಪ್ರೀತಿಯೆಂಬುದು ಪ್ರಜ್ವಲಿಸಿತು ಮಿಲನದಲ್ಲಿ ಜ್ಯೋತಿಯಾಗಿ ಹೊತ್ತಿ..ಇಂಥ ಚುಟುಕಾದ ಹನಿಗವನಗಳು ಈ ಸಂಕಲನದಲ್ಲಿವೆ. ಒಟ್ಟಾರೆ ಪ್ರೀತಿ ಪ್ರೇಮ, ಬದುಕಿನ ಅನೇಕ ವಿಷಯಗಳು ಹನಿಗವನಗಳಾಗಿ ಮೂಡಿಬಂದಿವೆ’ ಎಂದು ಕವಿಗಳು ಅಭಿಪ್ರಾಯಪಟ್ಟಿದ್ದಾರೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books