ಹೊಸ ಅಕ್ಷರ

Author : ಬೊಮ್ಲಾಪುರ ನಂಜುಂಡ

Pages 88

₹ 70.00
Year of Publication: 2013
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ.
Phone: 9141833556

Synopsys

ಬೊಮ್ಮಾಪುರ ನಂಜುಂಡ ಅವರು ಸ್ವಭಾವತ: ಕವಿಮನೋಧರ್ಮದವರು. ಸಂತೆಯ ಶಬ್ದದ ನಡುವೆ ನಿಂತು ಸಂತನಂತೆ ತಮ್ಮ ತನವನ್ನು ಕಾಪಾಡಿಕೊಂಡು, ಕಾವ್ಯ ಜಗತ್ತಿನಲ್ಲಿ ವಿಹರಿಸುತ್ತಿರುವವರು. ಕನ್ನಡ-ಸಂಸ್ಕೃತ ಎರಡೂ ಭಾಷೆಯ ಸಾಹಿತ್ಯದಲ್ಲಿ ಅಧ್ಯಯನ ಮಾಡಿರುವ ಶ್ರೀಯುತರು, ಕಾವ್ಯ ಜಗತ್ತಿನ ಛಂದೋಲಯದ ಬಗ್ಗೆ ನಿಖರವಾದ ಅರಿವು ಉಳ್ಳವರು. ಭಾಷೆಯ ಬಳಕೆಯಲ್ಲಿ ಸದಾ ಎಚ್ಚರವಿಟ್ಟುಕೊಂಡು ನಾಜೂಕಾಗಿ ಕಾವ್ಯ ರಚಿಸಬಲ್ಲರು. " ಹೊಸ ಅಕ್ಷರ" ದ ಮೂಲಕ ಅವರು ಕವಿಯಾಗಿ ಭರವಸೆ ಮೂಡಿಸುತ್ತಾರೆ. ಪುಟ್ಟ ಕವಿತೆಯಿಂದ ದೀರ್ಘರಚನೆಯವರೆಗೆ  ಅವರ ಬರಹ ವಿಸ್ತರಿಸಿಕೊಳ್ಳಬಲ್ಲದು. ಅನಿಯತಲಯದೊಂದಿಗೆ ನಿಯತಲಯದ ರಚನೆಗಳು ಇಲ್ಲಿವೆ. ನಿಯತಲಯದ ಇಂಥ ಕವಿತೆಗಳನ್ನು ಭಾವಗೀತೆಯಾಗಿ ಹಾಡಬಹುದು. ಮಾತು ಕವಿತೆಯಾಗಿ ಹಾಡಾಗಿ ಓದುಗರ ಹೃದಯದಲ್ಲಿ ನೆಲೆ ನಿಲ್ಲಬಹುದು.

Related Books