ನಾ..ನೀ ಕೇವಲ ಎರಡಕ್ಷರವಲ್ಲ

Author : ಪ್ರಕಾಶ್‌ ಡಂಗಿ

Pages 92

₹ 120.00
Year of Publication: 2018
Published by: ವಿಶ್ವಖುಷಿ ಪ್ರಕಾಶನ
Address: ವಿಶ್ವನಿಲಯ, #D1-20 ಸೆಕ್ಟರ್‌ ನಂ.16 ನವನಗರ, ಬಾಗಲಕೋಟೆ-587103
Phone: 9448394321

Synopsys

ಲೇಖಕ ಪ್ರಕಾಶ ಡಂಗಿ ಎರಡನೇ ಕವನ ಸಂಕಲನ - ನಾ..ನೀ ಕೇವಲ ಎರಡಕ್ಷರವಲ್ಲ. ಪ್ರೀತಿ, ಪ್ರೇಮ, ಗೆಳತಿಯ ಸಾಮಿಫ್ಯಕ್ಕೆ ಕೃತಜ್ಙತೆ ಹೇಳುವ ಕವಿತೆಗಳನ್ನೊಳಗೊಂಡಿದೆ. ಲೇಖಕ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಬರೆದ ಮುನ್ನುಡಿಯಲ್ಲಿ,ʻ ಅನುಭವಿಸುವವರಿಗೆ ಪ್ರೀತಿಯ ಗಾಢತೆ, ಅಗಾಧತೆ ಅನಂತ, ಅಪಾರ, ಅನುಪಮ. ಅಂಥ ಪ್ರೇಮ ಪ್ರವಾಹದ ಸೆಳವಿನಿಂದ ಹೊರಬರಲು ಆ ಹೊಳೆಯಲ್ಲಿ ಸ್ವಲ್ಪ ಕಾಲ ಈಸಬೇಕು, ಕೈ ಬೀಸಬೇಕು, ಕೈ ಹಿಡಿಯಬೇಕು; ತಣಿಯಬೇಕು, ದಣಿಯಬೇಕು; ಕೊನೆಗೆ ಆ ಪ್ರೀತಿ ಕರುಣಿಸುವ ಪರಿಣಾಮಕ್ಕೆ ಮಣಿಯಬೇಕು. ಲೇಖಕ ಈಗ ಇಂತಹ ಸೆಳೆತದಲ್ಲಿ ಕೈ ಬಡಿಯುತ್ತಿದ್ದಾರೆ. ಅದರ ಫಲವಾಗಿ ತಮಗೆ ದಕ್ಕಿದ  ಹೀಚು ಹಣ್ಣು ಕಸುಕು ಸಿಹಿ ಕಹಿ ಮಧುರ ಮಿಶ್ರ ರುಚಿಗಳ ರಸಾಯನ ʻನಾ..ನೀ ಕೇವಲ ಎರಡಕ್ಷರವಲ್ಲʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಪ್ರಕಾಶ್‌ ಡಂಗಿ
(22 July 1976)

ಲೇಖಕ ಪ್ರಕಾಶ್‌ ಡಂಗಿ ಅವರು ಬಾಗಲಕೋಟೆಯಲ್ಲಿ ದಂತ ವೈದ್ಯರು. ವಿಶ್ವಖುಷಿ ಪ್ರಕಾಶನದ ಪ್ರಕಾಶಕರು, ಸಾಹಿತ್ಯ, ಫೋಟೋಗ್ರಫಿ ಇವರ ಹವ್ಯಾಸಗಳು. ಆಕಾಶವಾಣಿಯಲ್ಲಿ ಕವಿತೆ ವಾಚಿಸಿದ್ದಾರೆ,. ಇವರ ಹಲವಾರು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು: ಅವಳ ನೆನಪಲ್ಲಿ (ಕವನ ಸಂಕಲನ- 2016), ನಾ..ನೀ ಕೇವಲ ಎರಡಕ್ಷರವಲ್ಲ (ಕವನ ಸಂಕಲನ-2018), ಅಯ್ದು ರುಪಾಯಿ ಮತ್ತು ಇತರ ಕತೆಗಳು ( ಕಥಾ ಸಂಕಲನ-2021) ...

READ MORE

Related Books