ಯಾವ ಶಹರು ಯಾವ ಬೆಳಕು

Author : ಎಚ್.ಎಸ್. ಶಿವಪ್ರಕಾಶ್

Pages 112

₹ 120.00
Year of Publication: 2021
Published by: ಅಂಕಿತ ಪುಸ್ತಕ
Address: 53, ಶ್ಯಾಮ್‍ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080- 2661 7100

Synopsys

‘ಯಾವ ಶಹರು ಯಾವ ಬೆಳಕು’ ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಅವರ ಕವನ ಸಂಕಲನ. ಈ ಕೃತಿಗೆ ಮೆಕ್ಸಿಕೋ ಬರಹಗಾರ್ತಿ ಮರ್ಲೀನ್ ಬೆನ್ನುಡಿ ಬರೆದಿದ್ದಾರೆ. ‘ಎಚ್.ಎಸ್. ಶಿವಪ್ರಕಾಶರ ಕಾವ್ಯವನ್ನು ಪ್ರವೇಶಿಸುವುದೆಂದರೆ ಬದುಕಿನ ಆಧ್ಯಾತ್ಮಿಕತೆ, ಪ್ರಕೃತಿ, ಪ್ರೇಮಗಳ ಆಳಗಳ ತುದಿಯ ತನಕ ಹೋಗುವ ಧೈರ್ಯ ಮಾಡುವುದು. ಇಲ್ಲಿನ ಜಾಗಗಳು, ದನಿಗಳು ಮೌನದಿರುಳುಗಳಲ್ಲಿ ಮರೆತು ಹೋದವರನ್ನು ಕೂಗಿಕರೆಯುತ್ತಾವಾದರೂ ಅದರಾಚೆಗಿನ ಪ್ರಜ್ಞಾವಂತ ಹೃದಯಗಳಲ್ಲಿರುವ ವಿವೇಕವು ಏಕಾಕಿತನದಲ್ಲಿ ಒಂದು ಶಬ್ದವನ್ನು ಬೆಳಕಿನ ಒಂದು ಪದ್ಯವನ್ನು, ಸಾಂತ್ವನವನ್ನು ಹುಡುಕುವವರ ಆತ್ಮಗಳನ್ನು ಹಿತವಾದ ಪಿಸುಮಾತಿನಂತೆ ಸ್ಪರ್ಶಿಸುತ್ತವೆ ಎನ್ನುತ್ತಾರೆ ಮರ್ಲೀನ್ . ಜೊತೆಗೆ ಈ ರೀತಿಯಲ್ಲಿ ಭಾರತದ ಈ ಮಹಾನ್ ಕವಿಯ ಕವಿತೆಗಳು ಶಾಂತ ಅಲೆಗಳಂತೆ ಪಿಸಪಿಸನೆ ಮರ್ಮರಿಸಿದರೂ ಗುಡುಗಿನ ಶಕ್ತಿ ಮತ್ತು ವೇಗದಿಂದ ನೆನಪಿನಲ್ಲಿ ಸದಾ ನೆಲೆಸುತ್ತವೆ. ಇತಿಹಾಸದ ಕ್ಷಣಗಳನ್ನು, ದೇವತೆಗಳನ್ನು ಸಿದ್ಧಪುರುಷರನ್ನು ತನ್ನ ಕಾವ್ಯಾತ್ಮಕ ಉಸಿರಿನಿಂದ ನೆನಪಿಸುತ್ತಾ ನಮ್ಮ ಮಾನವ ಪರಿಸ್ಥಿತಿಯ ನಡುವೆಯೂ ಗಗನವನ್ನು ಸೋಕುವ ಕಲಮದ ಗಂಧದಂತೆ ನಾವೂ ಅನಂತತೆಯನ್ನು ಮುಟ್ಟಬಹುದೆಂದು ಸೂಚಿಸುತ್ತದೆ ಎನ್ನುತ್ತಾರೆ.

ಇಲ್ಲಿ ಜೋಗುಳ, ಸೋಕು, ಎರಡು ಸೊನ್ನೆಗಳು, ಎಲ್ಲಿ ಬೇಕಾದರೂ ಹೀಗಾಗಬಹುದು, ನುಡಿಯ ನುಡಿ, ಗೊತ್ತಾಗಿದೆ ಈಗ ನನಗೆ, ಹೊಗಲುಬಿಡು ನಿನ್ನ ಹೃದಯವನ್ನು, ಶಿಶಿರವೇ ನನ್ನ ಋತು, ವಿಶ್ವರಂಗಭೂಮಿ ದಿನಾಚರಣೆಗೊಂದು ಕವಿತೆ, ಬುದ್ಧಗುರು ಅಂಗುಲಿಮಾಲನಿಗೆ ಹೇಳಿದ್ದು, ಬರುತ್ತೇನೆ ನಗರವೆ, ಥೀಬ್ಸ್ ನಗರಸ್ಥರಿಗೆ ತೈರ್ಸಿಯೆಸ್ ನೀಡಿದ ಎಚ್ಚರಿಕೆ, ಮೀದಿಯಾ ಪರಿಚ್ಛೇದ, ಕವಯತ್ರಿ ನಿದ್ದೆ ಹೋದಾಗ, ಹರಿದ ಸೀರೆ, ಮಹಾಕಾಳೀಸ್ತವರತ್ನ, ನಿಲುಗಡೆ, ರಿಯೋ ದಿ ಜೆನೆರೋದ ಏಸೂ ಮೂರ್ತಿ, ಕಪ್ಪುನದಿ, ಏಳು ಶಿವಪ್ರಕಾಶ ಏಳು, ಗುರುವಾಕ್ಕು-1, ಯಾವ ಷಹರು, ಯುಗಾದಿ ಹಿಂದಿನ ಸಂಜೆ, ಯಾಕೆ ಕವಿತೆ ಬರೆಯುವೆ, ಗೊಂಬೆ ಕತೆ, ತವರು, ಎಷ್ಟು ದೂರ ಹೋಗಬೇಕು ನಿನ್ನ ತೀರದಿಂದ, ಒಂದಾನೊಂದು ಕಾಲ, ಮಗಳಿಗೆ ಪಾಠ, ಯಾಯಾವ ರೂಪವನು ನಾನು ತಾಳಿದ್ದರೆ, ಕಾಡಿಗ್ಹೋದ ಪುಟ್ಟಿ, ಒಂದು ಗ್ರೀಕ್ ಪ್ರೇಮಕವಿತೆ, ಗದಗದ ತೋಂಟದಾರ್ಯರಿಗೆ ವಿದಾಯ, ವಿನ್ ಡಾರ್ ಎಂಬ ವಿಜ್ಞಾನಿಯ ಬೀಭತ್ಸ ಪ್ರಯೋಗ, ನಾನು ಬೆಕ್ಕಾದಾಗ, ತೆಲಮಂಕಾಗೆ, ಸಾಸಿವೆ, ಒಂದು ವಿರೂಪಿಕೆ, ಮೌನವಿಜ್ಞಾನ, ಸೇಬು ಮತ್ತು ವಿಲ್ಯಂ ಟೆಲ್, ಗಡಂಗು, ಬುದ್ಧ: ಸ್ವರಾದಿ ನಮನ, ಆ ಕವಯತ್ರಿ, ನನ್ನ ಆ ನಿದ್ದೆಯಿಂದ, ಬಾಬಾ ಸಾಹೇಬರ ದೀಕ್ಷಾಭೂಮಿ, ಭೂಕಂಪವಂತೆ, ನಿನ್ನ ತೀರ, ಓದಿಸಿಯೂಸ್ ಉವಾಚ, ಮತ್ತೊಂದು ಸ್ವಪ್ನನೌಕೆ, ಮಳೆ ಕೊಸ್ಟಾರಿಕಾದ ಸ್ಯಾನ್ ಹೋಸೆಯಲ್ಲಿ - ಸೇರಿದಂತೆ ಕಳಚಿಡು ನಿನ್ನ ಜೋಡುಗಳನ್ನು ಎಂಬ 51 ಕವನಗಳು ಸಂಕಲನಗೊಂಡಿವೆ.

About the Author

ಎಚ್.ಎಸ್. ಶಿವಪ್ರಕಾಶ್
(15 June 1954)

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...

READ MORE

Related Books