ಅಕ್ಷಯ ಕಾವ್ಯ

Author : ಕೆ.ವಿ. ತಿರುಮಲೇಶ್‌

Pages 480

₹ 350.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

'ಅಕ್ಷಯ ಕಾವ್ಯ' ಕೆ. ವಿ. ತಿರುಮಲೇಶರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ತಂದುಕೊಟ್ಟ ಕೃತಿ. ಪುಸ್ತಕದ ಬಗ್ಗೆ ತಿರುಮಲೇಶ್ ಹೇಳಿರುವುದು ಹೀಗೆ:

'ಇದೇನು ಗುಚ್ಛವೊ ಕಾವ್ಯವೋ ಎಂದರೆ ನನ್ನ ಹತ್ತಿರ ಉತ್ತರವಿಲ್ಲ, ಪಾತ್ರಗಳು ಸನ್ನಿವೇಶಗಳು ಜೈಲಿಗಳು ವ್ಯಾಕರಣದ ಪುರುಷವಾಚಕ ಕಾಲವಾಚಕ ಇತ್ಯಾದಿಗಳು ಬದಲಾಗುತ್ತ ಇವುಗಳ ಮೇಲಿಂದ ಕತೆಗಳ ಪ್ರತ್ಯೇಕಿಸುವ ಹಾಗೂ ಇಲ್ಲಿ ಸಮಗ್ರವಾದೊಂದು ವಸ್ತುವಿಲ್ಲ. ಇತಿ ಎಂದರೆ ನೇತಿ ಸತಿ ಎನ್ನುತ್ತದೆ ಆದ್ದರಿಂದ ಇದು ಅಖಂಡವಲ್ಲ. ಏಚಿ ಒಂದಷ್ಟು ಸ್ಥಳದಲ್ಲಿ ಭಗವಾನ್ ಬುದ್ಧನ ಸಂದರ್ಭದಲ್ಲಿ ಒಂದು ತರ ಮರುಕಳಿಕೆಯನ್ನು ಕಾಣಬಹುದಾದರೂ ಅಷ್ಟಕ್ಕೆ ಇದನ್ನು ಬೌದ್ಧವೆನ್ನುವುದೂ ಸರಿಯಾಗದು. ಇದೊಂದು ಬಂದಲ್ಲಗೇ ಮರಳುವ, ಮರಆದರೂ ತಿಳಿಯದ ಲೆಜಲಿಂಟಿನಂತೆ ನನ್ನ ಸುತ್ತಿಸಿದೆ. ಒಮ್ಮೆ ಜನ್ಮಭೂಮಿ ಕಾರಡ್ಕದಲ್ಲಿ ಕತೆಯ ಯಲ್ಲಿ ಸುತ್ತಿಸಿದ ಹಾಗೆ ದಾರಿಹೋಕರನು ಅಮೆರಿಕ ಮತ್ತು ಅರಜ್ಞ ಕೊನೆಯಲ್ಲಿ ಮೊದಲಿಲ್ಲ.

ಸೂತ್ರಬದ್ಧತೆ ಸುಸಂಬದ್ಧತೆ ಕ್ರಮಬದ್ಧತೆ ಮುಂತಾದ ಯಾವುದೇ ಬದ್ಧತೆಗಳನ್ನು ಈ ಕಾವ್ಯ ಪರಿಪಾಲಿಸಿದ್ದಕ್ಕಿಂತ ಉಲ್ಲಂಘಿಸಿದ್ದೇ ಹೆಚ್ಚು ಆದ್ದರಿಂದ ಸಾಲು ಸಾಲುಗಳ ನಡುವೆ ಕಂದಕಗಳು -ಆರಿಜವಾದ ಕಂದಕಗಳು. ಆದರೂ ಇಲ್ಲೆಲ್ಲಾ ಅಮಾನುಷ ಪ್ರಪಂಚವಿಲ್ಲ, ಎಲ್ಲವೂ ಮಾನುಷವೇ ಎಲ್ಲರೂ ಮನುಷ್ಯರೇ ಕಾವ್ಯಕ್ತಿಯಯ ಒಳಹೊರಗಣ ಸೀಮೆಗಳ ಮಿತಿಗಳ ಸ್ಪರ್ಶಿಸುತ್ತಲು ಹಿಂತೆಗೆಯುತ್ತಲು ಮುಗಿಯದ ಕ್ರಿಯೆ ಸದ್ಯ ಇದೊಂದೇ ಸಾಧ್ಯ.'

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Awards & Recognitions

Related Books