ಮಾತಿಗಿಳಿದ ಹಣತೆ

Author : ಶಶಿರೇಖಾ ನಾಗೇಶ(ಮಾನಸ ಗಂಗೆ)

Pages 86

₹ 90.00
Year of Publication: 2021
Published by: ಕಾಚಕ್ಕಿ ಪ್ರಕಾಶನ
Address: # 72,ದೈವ ಕೃಪ ಡಿ ಗ್ರೂಫ್‌ ಬಡಾವಣೆ ಕೆ. ಆರ್.‌ ಎಸ್‌ ಅಗ್ರಹಾರ ಕುಣಿಗಲ್-‌572130
Phone: 8660788450

Synopsys

ಲೇಖಕಿ ಶಶಿರೇಖಾ ನಾಗೇಶ್ ಅವರ  ಕವನ ಸಂಕಲನ-ʼಮಾತಿಗಿಳಿದ ಹಣತೆʼ. ಈ ಕವಿತೆಗಳು ಧರಿಸುವ ರೂಪ ಮತ್ತು ತೊಡುವ ಭಾವವೇ ವಿಸ್ಮಿತ. ಮಾತಿಗಿಳಿದ ಹಣತೆಯಲ್ಲಿ ಇರುವ ಸಂವಾದವನ್ನು ಗಮನಿಸಿದಾಗ, ಸೂಕ್ಷವಾದ ಮನಸ್ಸೊಂದರ ಒಳತೋಟಿ ಪದವಾಗಿ ಒಡೆವ ಪರಿ ಇಲ್ಲಿ ಭಿನ್ನವಾಗಿದೆ. ಇಲ್ಲಿನ ಬಹುತೇಕ ಸಾಲುಗಳು ರೋಮ್ಯಾಂಟಿಕ್‌ ಮತ್ತು ವಿಸ್ಮಯ ಎನ್ನುವುದಕ್ಕಿಂತ ಬಾಳಿನ ಜೊತೆ ಎಡತಾಕಿದ ಉಸಿರಿನ ಪಲಕುಗಳಂತಿವೆ. ಕವಯಿತ್ರಿ ಭಾವಗಳ ತೀವ್ರತೆಯನ್ನು ಅತ್ಯಂತ ಸಂಯಮದಿಂದ ನಿರ್ವಹಿಸಿ ಕವಿತೆಯ ರೂಪವನ್ನು ಕಸೂರಿ ರೀತಿಯಲ್ಲಿ ಹೆಣೆದಿದ್ದಾರೆ. ಸಂವಾದದ ರೀತಿಯಲ್ಲಿರುವ ಇಲ್ಲಿನ ರಚನೆಗಳು ಓದುಗರನ್ನು ಚಿಂತನೆಯ ಅನುಸಂಧಾನಕ್ಕೆ ಆಹ್ವಾನಿಸುತ್ತದೆ.

About the Author

ಶಶಿರೇಖಾ ನಾಗೇಶ(ಮಾನಸ ಗಂಗೆ)
(01 March 1998)

ಲೇಖಕಿ ಶಶಿರೇಖಾ ನಾಗೇಶ ಅವರು ಮೂಲತಃ ಬೆಂಗಳೂರಿನವರು. ಕಾವ್ಯ ನಾಮ ಮಾನಸಗಂಗೆ. ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿರುವ ಅವರು ನೇಕಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರಸ್ತುತ, ತುಮಕೂರು ಜಿಲ್ಲೆಯ ತಿಪಟೂರಿನವರು.  ಕೃತಿಗಳು: ಹಣತೆ (ಕವನ ಸಂಕಲನ)    ...

READ MORE

Related Books