ಮಸಾಲೆ ಮಂಡಕ್ಕಿ

Author : ಸುಂದರ್ ರಾಜ್ ಟಿ. ಎಸ್

Pages 72

₹ 80.00
Year of Publication: 2019
Published by: ಸ್ನೇಹ ಬುಕ್ ಹೌಸ್
Address: ನಂ.165, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು- 560050
Phone: 9845031335

Synopsys

ಸುಂದರ್ ರಾಜ್ ಟಿ.ಎಸ್ ಅವರ ಅಣಕು ಹಾಡುಗಳ ಸಂಕಲನ ‘ಮಸಾಲೆ ಮಂಡಕ್ಕಿ’. ಈ ಕೃತಿಯಲ್ಲಿ ವಿವಿಧ ರೀತಿಯ ಕವಿತೆಗಳು ಇವೆಯಾದರೂ ಇದು ಪ್ರಮುಖವಾಗಿ ಅಣಕುಹಾಡುಗಳ ಸಂಕಲನವೇ ಆಗಿದೆ. ಅಣಕುಹಾಡು ನಾವೆಲ್ಲ ಬಲ್ಲಂತೆ ಪ್ರಸಿದ್ಧ ಹಾಗೂ ಜನಪ್ರಿಯ ಕವಿತೆಯೊಂದನ್ನು ಅನುಸರಿಸಿ ಬರೆದ ವಿಡಂಬನಾತ್ಮಕ ರಚನೆ. ಇದು ಕಚಗುಳಿಯಿಟ್ಟು ನಗಿಸುವ ಸದುದ್ದೇಶದ ಕವನ ಸಂಕಲನ. ಸುಂದರ್ ರಾಜ್ ಅವರಿಗೆ ಛಂದಸ್ಸು ಮತ್ತು ಲಯದ ಮೇಲೆ ಒಳ್ಳೆಯ ಹಿಡಿತವಿರುವುದು ಇಲ್ಲಿಯ ಎಲ್ಲ ಗೇಯಗೀತೆಗಳಲ್ಲೂ ಎದ್ದು ತೋರುತ್ತದೆ.

About the Author

ಸುಂದರ್ ರಾಜ್ ಟಿ. ಎಸ್

ಸುಂದರ್ ರಾಜ್ ಟಿ.ಎಸ್ ಅವರು ಹುಟ್ಟಿದ್ದು, ಬೆಳೆದಿದ್ದು, ಬಿ.ಎಸ್ಸಿ ವರೆಗೆ ಓದಿದ್ದು ಭದ್ರಾವತಿಯಲ್ಲಿ. ಆನಂತರ ಭದ್ರಾ ಜಲಾಶಯ ಯೋಜನೆಯಲ್ಲಿದ್ದು, ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರದಿಂದ ಕೈಗಾರಿಕಾ ರಾಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿ, ಉದ್ಯೋಗಕ್ಕಾಗಿ ಹೈದರಾಬಾದ್ ಗೆ ತೆರಳಿದರು. ಅಲ್ಲಿ 15 ವರ್ಷ ಕಾಲ ವಿವಿಧ ರಾಸಾಯನಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ ನಂತರ 2005ರಿಂದ ಸ್ವಂತ ಉದ್ಯಮ ಆರಂಭಿಸಿದರು. ಕೈಗಾರಿಕೆಗಳಲ್ಲಿ ಉಪಯೋಗಿಸುವ ಇಂಧನಗಳ ಕ್ಷಮತೆ ಹೆಚ್ಚಿಸುವ ರಾಸಾಯನಿಕಗಳ ಸಂಶೋಧನೆ, ತಯಾರಿಕೆ, ಮಾರಾಟಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಸುಮಾರು 28 ವರ್ಷಗಳಿಂದ ಹೈದರಾಬಾದಿನಲ್ಲೇ ವಾಸಿಸುತ್ತಿದ್ದಾರೆ. ಶಾಲಾ ದಿನದಿಂದಲೂ ಪ್ರಬಂಧ, ಕಥೆ, ಕವನ, ಹಾಡು ಬರೆಯುವ ಹವ್ಯಾಸದ ಇವರು ...

READ MORE

Related Books