ತುಂತುರು ಹನಿಗಳು

Author : ಸಪ್ನ ದಿನಕರ್

Pages 87

₹ 50.00
Year of Publication: 2019
Published by: ಸಪ್ನ ಪ್ರಕಾಶನ
Address: # ಧ್ಯಾನ ಎಂಟರ್ ಪ್ರೈಸೆಸ್, ಎ.ಐ. ಕಾಂಪ್ಲೆಕ್ಸ್, ಸಹಸ್ರ ಲಿಂಗೇಶ್ವರ ದೇವಸ್ಥಾನ ಬಳಿ, ಉಪ್ಪಿನಂಗಡಿ-574241
Phone: 7259887117

Synopsys

ಲೇಖಕಿ ಸಪ್ನಾ ದಿನಕರ ಅವರ ಹನಿಗವಿತೆಗಳ ಸಂಕಲನ-ತುಂತುರು ಹನಿಗಳು. ಸಾಹಿತಿ ಡಾ. ಕಾಸರಗೋಡು ಅಶೋಕಕುಮಾರ ಅವರು ಕೃತಿಗೆ ಮುನ್ನುಡಿ ಬರೆದು ‘ಇವರ ಹೆಚ್ಚಿನ ಹನಿಗವನಗಳು ಪ್ರೀತಿ-ಪ್ರೇಮ, ವಿರಹ, ನಿರೀಕ್ಷೆಗಳನ್ನು ವಿಷಯ ವಸ್ತುಗಳಾಗಿಸಿಕೊಂಡಿವೆ. ಕಾವ್ಯ ಕಟ್ಟುವ ಹಾಗೂ ಹೇಳುವ ಕಲೆ ಇವರಿಗಿದೆ ಸಿದ್ಧಿಸಿದೆ. ಇಲ್ಲಿಯ ಹನಿಗವನಗಳು ಕಟ್ಟಿಕೊಂಡ ರೆಕ್ಕೆಗಳಲ್ಲ; ಅವು ಹುಟ್ಟಿಕೊಂಡ ರೆಕ್ಕೆಗಳು. ಹಾಗಾಗಿ, ಇವು ಎತ್ತರಕ್ಕೆ ಹಾರಬಲ್ಲವು’ ಎಂದು ಹನಿಗವನಗಳನ್ನು ಹಾಗೂ ಕವಯತ್ರಿಯನ್ನು ಪ್ರೋತ್ಸಾಹಿಸಿದ್ದಾರೆ.

About the Author

ಸಪ್ನ ದಿನಕರ್

ಸಪ್ನ ದಿನಕರ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಗಂಡಿಯವರು. ಅಮೃತ ಪ್ರಕಾಶ ಪತ್ರಿಕೆಯ ಅಂಕಣಕಾರರು. ತಮ್ಮದೇ ಯು ಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ತಮ್ಮದೇ ಹಾಡುಗಳ ಅಲ್ಬಂ ರಚಿಸಿದ್ದಾರೆ. ಕರ್ನಾಟಕ ವ್ಯಂಗ್ಯ ಚಿತ್ರ ಸಾಹಿತ್ಯಕಲಾ ಮಾಧ್ಯಮ ಏರ್ಪಡಿಸಿದ ಚಿತ್ರ ಕವನ ಸ್ಪರ್ಧೆಯಲ್ಲಿ ಸತತ ಎರಡನೇ ಬಾರಿಯೂ ಮೆಚ್ಚುಗೆ ಪಡೆದಿದ್ದಾರೆ. ಕೃತಿಗಳು: ತುಂತರು ಹನಿಗಳು, ಸಪ್ನಲೋಕ (ಇವು ಕವನ ಸಂಕಲನಗಳು) ...

READ MORE

Related Books