ನವೋನ್ಮೇಷ

Author : ಬಿ.ಆರ್. ಲಕ್ಷ್ಮಣರಾವ್

Pages 140

₹ 130.00




Year of Publication: 2020
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು.
Phone: 08026617100

Synopsys

ಕವಿ ಬಿ.ಆರ್‌. ಲಕ್ಷ್ಮಣರಾವ್‌ ಅವರ ಒಂಬತ್ತನೇ ಕವನ ಸಂಕಲನ ‘ನವೋನ್ಮೇಷ’. ಕೃತಿಯ ಕುರಿತು ಚಿಂತಾಮಣಿ ಕೊಡ್ಲೆಕೆರೆ ಅವರು ಮುನ್ನುಡಿಯಲ್ಲಿ ಬರೆಯುತ್ತಾ ‘ನವನವೋನ್ಮೇಷ, ಹೊಸತು ಹೊಸತಾಗಿ ಅರಳುವುದು, ಹೊಸ ಹೊಳಹು, ಹೊಸ ಹೊಸ ಭಾವಗಳನ್ನು ಸಂತತವಾಗಿ ಕಾಣುವುದು,ಕಟ್ಟುವುದು..ಪ್ರತಿಭೆಯ ಮುಖ್ಯ ಲಕ್ಷಣವೆಂದು ಕಾವ್ಯಮೀಮಾಂಸಕರು ಗುರುತಿಸಿದ್ದಾರೆ. ಆರಂಭದಿಂದಲೂ ಅದು ಈ ಕವಿಯ ಕಾವ್ಯದ ಗುಣವಾಗಿದೆ. ಈ ನವನವೀನತೆಯೇ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಪ್ರಸ್ತುತ ಸಂಕಲನವೂ ಅವರ ಕಾವ್ಯಪ್ರತಿಭೆಯ ನವೋನ್ಮೇಷಕ್ಕೆ ಸಾಕ್ಷಿಯಾಗಿದೆ. "ಆನು ಒಲಿದಂತೆ ಹಾಡುವೆ" ಇದು ಬಿ.ಆರ್.ಲಕ್ಷ್ಮಣರಾವ್ ಅವರ ಕಾವ್ಯದೃಷ್ಟಿ. ಅವರ ಸಂವೇದನೆಗಳ ಸಾಚಾತನ ಮತ್ತು ಅನುಭವಗಳ ಪ್ರಾಮಾಣಿಕತೆ ನಿಸ್ಸಂದೇಹವಾದುದು. ಅದು ಆತ್ಮವಂಚನೆಯನ್ನೊಲ್ಲದು. ಹಾಗಾಗಿ ಅವರ ಕಾವ್ಯದಲ್ಲಿ ಕಪಟದ ಸಾಲುಗಳಿಲ್ಲ. ಕಳೆದ ಐವತ್ತು ವರ್ಷಗಳಿಂದ ಅವರು ಕಾವ್ಯಸೃಷ್ಟಿಯಲ್ಲಿ ತೊಡಗಿದ್ದಾರೆ. ಅವರನ್ನು ಸೀಮಿತ ಆಶಯಗಳ ಕವಿ ಎಂದವರಿದ್ದಾರೆ. ಅಂಥ ಸಂದರ್ಭಗಳಲ್ಲಿ ಕವಿ ಅತ್ಯಂತ ವಿನಮ್ರವಾಗಿ ತಮ್ಮದು ಒಂದು ಪುಟ್ಟ ಕೈತೋಟ ಎಂದು ಹೇಳಿಕೊಂಡಿದ್ದಾರೆ. ಪುರುಷೋತ್ತಮನ ರೂಪರೇಖೆಯಲ್ಲ , ಮಧ್ಯಮವರ್ಗದ ಶ್ರೀಸಾಮಾನ್ಯ ಪಟ್ಟ ಪಾಡು, ಅವನ ಹುಟ್ಟುಹಾಡು ಲಕ್ಷ್ಮಣರಾಯರ ಕಾವ್ಯ’ ಎಂದಿದ್ದಾರೆ.

About the Author

ಬಿ.ಆರ್. ಲಕ್ಷ್ಮಣರಾವ್
(09 September 1946)

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...

READ MORE

Related Books