ವಿಷಾದಯೋಗ

Author : ಸತೀಶ ಕುಲಕರ್ಣಿ

₹ 30.00




Year of Publication: 1994
Published by: ವೈಶಾಖ‌ ‌ಪ್ರಕಾಶನ
Address: ಬೆಂಗಳೂರು

Synopsys

ವಿಷಾದ‌ ‌ಯೋಗ‌ ‌-ಸತೀಶ ಕುಲಕರ್ಣಿ ಅವರ ಕವನ‌ ‌ಸಂಕಲನ,‌ ‌ಒಟ್ಟು‌ ‌58‌ ‌ಕವಿತೆಗಳಿವೆ.‌ ‌ ನಿಸರ್ಗ, ವ್ಯವಸ್ಥೆ, ಸಾಮಾಜಿಕ ವಿದ್ಯಮಾನಗಳನ್ನು ಆಧರಿಸಿ ಬರೆದ ಕವಿತೆಗಳು ವಸ್ತು ವೈವಿಧ್ಯತೆಯಿಂದ ಗಮನ ಸೆಳೆಯುತ್ತವೆ. ಸಾಹಿತಿ-ವಿಮರ್ಶಕ ‌ಡಾ.‌ ‌ಕೆ.ವ್ಹಿ.‌ ‌ತಿರುಮಲೇಶ‌ ‌ಮುನ್ನುಡಿ ಹಾಗೂ ಲೇಖಕಿ ‌ಲತಾ‌ ‌ರಾಜಶೇಖರ,‌ ‌ಮೈಸೂರು‌ ‌ ‌ಬೆನ್ನುಡಿ‌ ‌ಬರೆದಿದ್ದು ವಿಷಯ ವಸ್ತು, ಕಾವ್ಯಾಂಶದಿಂದ ಕವಿತೆಗಳು ಸಮೃದ್ಧವಾಗಿರುವುದಾಗಿ ಪ್ರಶಂಸಿಸಿದ್ದಾರೆ.

About the Author

ಸತೀಶ ಕುಲಕರ್ಣಿ
(13 July 1951)

ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ.  ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ.   ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ...

READ MORE

Related Books