ಅಶೀರನ ಕವನಗಳು

Author : ಎಂ. ಅಶೀರುದ್ದೀನ್ ಮಂಜವಾಡಿ

Pages 100

₹ 120.00
Year of Publication: 2019
Published by: ಸಂವೇದನಾ ಪ್ರಕಾಶನ
Address: #7, ಎಸ್‌ಆರ್‌ಕೆ ಗಾರ್ಡನ್‌, ಜಯನಗರ ಪೂರ್ವ, ಬೆಂಗಳೂರು-560041

Synopsys

ದೇಶಪ್ರೇಮ, ಪ್ರೀತಿ, ಮತಾಂದತೆ, ಕುಟುಂಬ ಈ ಎಲ್ಲಾ ವಿಷಯ ವಸ್ತುಗಳಿಗೆ ಕವನಗಳ ಮೂಲಕ ಧ್ವನಿನೀಡಿದವರು ಅಶೀರುದ್ದೀನ್. ಅಶೀರನ ಕವಿತೆಗಳಲ್ಲಿ ಇಂದಿನ ವಾಸ್ತವ ಸಮಾಜದ ತಲ್ಲಣಗಳು, ತಾವು ಕಂಡ ಕನಸಿನ ಸಮಾಜ, ಕುಟುಂಬದ ಪರಿಕಲ್ಪನೆ, ಮಂದಿರ, ಮಸೀದಿ ಚರ್ಚ್‌‌ಗಳ ವ್ಯತ್ಯಾಸ ಹಾಗೂ ಸೌಹಾರ್ದತೆ ಇವರೆಲ್ಲವೂ ಮಿಳಿತವಾಗಿವೆ. ಮಂತಾತರವನ್ನು ಪ್ರಶ್ನಿಸಿರುವ ಕವಿಯು ಸಮಾಜದ ಆಗೂ ಹೋಗುಗಳಿಗೆ ಮಿಡಿದಿರುವುದು ಕವನಗಳಲ್ಲಿ ಕಂಡು ಬರುತ್ತದೆ. 

About the Author

ಎಂ. ಅಶೀರುದ್ದೀನ್ ಮಂಜವಾಡಿ
(28 April 1989)

ಕವಿ ಅಶಿರುದ್ದೀನ್ ಮಂಜವಾಡಿ ಅವರು 1989 ಏಪ್ರಿಲ್ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ಸಾರ್ತಬೈಲ್ ಎಂಬ ಊರಿನಲ್ಲಿ ಜನಿಸಿದರು.  ಮಂಜನಾಡಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕಾಸರಗೋಡಿನಲ್ಲಿ ಪದವಿ ಶಿಕ್ಷಣವನ್ನು ಪಡೆದರು. ಪ್ರಸ್ತುತ ಖಾಸಗಿ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂಕ್ ಡಬ್ಬಿ,ಕಾಂ ವೆಬ್‌ಸೈಟ್‌ನ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕವಿತೆಗಳು ಹಲವು ಪತ್ರಿಕಗಳಲ್ಲಿ ಪ್ರಕಟವಾಗಿವೆ.  ಮುಸ್ಲಿಂ ಲೇಖಕರ ಸಂಘ, ಕೋಮು ಸೌಹಾರ್ದ ವೇದಿಕೆ, ಮೇಲ್ತನೆ ಬ್ಯಾರಿ ಸಂಘ ಇನ್ನೀತರ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ...

READ MORE

Related Books