ಸಖೀಗೀತ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 104

₹ 75.00




Year of Publication: 1937
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಬೇಂದ್ರೆಯವರ 30 ಕವನಗಳ ಸಂಗ್ರಹ ’ಸಖಿಗೀತ’. ಸಖಿಗೀತ ಎಂಬುದು ಈ ಕವನ ಸಂಗ್ರಹದ ಸಖ್ಯದ ಅಖ್ಯಾನ ಕವನ. ಉಳಿದ 29 ಕವಿತೆಗಳಲ್ಲಿ 12 ಸ್ತ್ರೀಭಾವದ ಮುಖಗಳನ್ನು ವಿವರಿಸಿದರೆ 7 ಕವನಗಳು ನಿಸರ್ಗ ವರ್ಣನೆಯನ್ನು ಕುರಿತದ್ದಾಗಿವೆ. 10 ಕವನಗಳು ಉಳಿದ ವಿಷಯಕ್ಕೆ ಸಂಭಂದಿಸಿದವುಗಳಾಗಿವೆ. ಸಖಿಗೀತದಲ್ಲಿ ಕವಿ ಬೇಂದ್ರೆಯವರ ಜೀವನ ಕಥೆಯ ಹಂದರದಲ್ಲಿ ಸುಖ ದುಃಖದ ಹಂಬನ್ನು ಹಬ್ಬಿ ಬಿಡಲಾಗಿದೆ. ಸಖಿಗೀತದ ಕಾವ್ಯನಾಯಕನು ತನ್ನ ಸಖಿಗಾಗಿ ತಮ್ಮ ಜೀವನದ ಪೂರ್ವಭಾಗದ ಸ್ಮ್ರತಿಗಳನ್ನು ಹಾಡಲು ಆರಂಭಿಸುತ್ತಾನೆ. ಮದುವೆಯ ದಿನದ ಸಂಜೆಯ ನೆನಪಿನೊಂದಿಗೆ ಪ್ರಾರಂಭವಾಗುತ್ತದೆ. ಆರಂಭದ ಹುಮ್ಮಸ್ಸು, ಶೋಭನದ ಶುಭಾವರ್ಣದಲ್ಲಿ ವಿವಾಹಿತ ಪ್ರಣಯವು ಪ್ರಸ್ತಾವನೆ ಹಾಕುವುದು. ನಂತರ ಸಂಕಟದ ಪರ್ವ, ಮನೋವ್ಯಥೆಯ ಸತ್ವಪರಿಕ್ಷೆಯ ಕಾಲ. ಕಷ್ಟಕ್ಕೂ ಒಂದು ಸುಖದ ಮುಖವಿತ್ತು. ಕನ್ನಡ ದೇಶಕ್ಕೆ ನಾಯಕನು ಬರುವುದರೊಂದಿಗೆ ಪೂರ್ವಾನುರಾಗ ಮುಗಿಯುತ್ತದೆ. ಸಖಿಗೀತವು ಅರ್ಧಕ್ಕೆ ನಿಂತಿದೆ. ”ಪ್ರೇಮ ಪರಮಾತ್ಮನಿಗೆ ಈ ಮಾತಿನ ನೈವೇದ್ಯವು. ನಿವೇದಿತವಾಗಿ ಪ್ರೀತಿಯ ಪ್ರಸಾದವು ನನಗೆ ದೊರೆತರೆ ಜೀವಿತಕೆ ಧನ್ಯತೆಯ ಮುದ್ರೆ ಬೀಳುವುದೆಂದು ನನ್ನ ಹಂಬಲ’ ಎನ್ನುವ ಕವಿ, ಮುಂದಿನ ಭಾಗ ಯಾವಾಗ ಬರೆಯಲಾಗುವುದೋ, ಬರೆಯುವೆನೋ ಎಂದು ಹೇಳಲಾರೆ ಎಂದಿದ್ದಾರೆ. ಗುರುದೇವ ರವಿಂದ್ರನಾಥ ಟಾಗೊರರನ್ನು ಕುರಿತ ಗುರುದೇವ ಕವಿತೆ, ಮಾಯಕಿನ್ನರಿ, ಶಾಂತಕವಿಗಳ ವಿಶ್ರಾಂತಿ, ಹೂತದ ಹುಣಸೆ, ಹುಬ್ಬಳ್ಳಿಯವ, ನಲ್ಲ ನಲ್ಲೆಯ ಲಲ್ಲೆ, ಚಿಗರಿ ಗಂಗಳ ಚೆಲುವಿ, ಪುಟ್ಟ ವಿಧವೆ ತರಹದ ಜನಪ್ರಿಯ ಕವಿತೆಗಳು ಈ ಸಂಕಲನದಲ್ಲಿವೆ. ಬೇಂದ್ರೆಯವರು ಬರೆಯಲು ಉದ್ದೇಸಿದ್ದ ತಲೆದಂಡ ನಾಟಕದ ತುಂಬಿ ಬಂದಿತ್ತ ಎಂಬ ಕವಿತೆಯಿದೆ. ಮೇಲ್ನೊಟಕ್ಕೆ ಕ್ಷುಲ್ಲಕ ಎನಿಸುವಂತಹ ರವದಿಯನ್ನು ಕೂಡ ಕವಿ ಕವಿತೆಯಾಗಿಸಿದ್ದಾರೆ. ಸಖಿಗೀತ ಬೇಂದ್ರೆಯವರ ಆತ್ಮಕಥನಾತ್ಮಕ ಕಾವ್ಯಗುಚ್ಚ. ತನ್ನ ವಿಶಿಷ್ಟತೆಯಿಂದಾಗಿಯೇ ಗಮನ ಸೆಳೆಯುತ್ತದೆ. ಕಾವ್ಯಪ್ರಿಯರನ್ನು ಬೆರಗುಗೊಳಿಸಿದೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books