ಅಕ್ಷೀ ಎಂದಿತು ವೃಕ್ಷ

Author : ವಿಕ್ರಮ್ ಹತ್ವಾರ್

Pages 92

₹ 75.00




Year of Publication: 2014
Published by: ಅಭಿನವ ಪ್ರಕಾಶನ
Address: 1ನೇ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು.560040
Phone: 9448804905, 080-23505825

Synopsys

ವಿಕ್ರಾಮ್ ಹತ್ವಾರ್ ಅವರ ಕವನಗಳ ಸಂಕಲನ.  'ಗಾಳಿ ಬೀಸಿದಾಗೊಮ್ಮೆ ಅಕ್ಷೀ...ಎಂದಿತು ವೃಕ್ಷ!?..  ಉದ್ದುದ್ದ ಬೀಳುವ ಫೇಸ್‌ಬುಕ್ಕಿನ ಹಿಕ್ಕೆ, ಮುಚ್ಚಿಹಾಕುತಿದೆ ಎಲ್ಲರ ಕನ್ನಡಿಗಳ... “ಕಂಡಿದ್ದು ಅಲೆಗಳು ಮಾತ್ರ ಕಡಲು ಕಾಣಿಸಲೇ ಇಲ್ಲ'... ಇಂಥ ಹೊಸ ಉಲಿಗಳಲ್ಲಿ ಉಸಿರಾಡುತ್ತಿರುವ ರಚನೆಗಳನ್ನು ಓದುತ್ತ ಒಂದು ಬೇಶರತ್ ಚಡಪಡಿಕೆ ಮತ್ತು ಮಾರ್ದವ ನಮ್ಮನ್ನು ಆವರಿಸಿಕೊಂಡು ಬಿಡುವಂತಿದೆ. 'ಪದ್ಮಾಸನಕ್ಕೆ ಪದ್ಯ ಎಟುಕಬಹುದೆ?' ಎಂದು ಭೋಳೆಯಾಗಿ ಕೇಳುತ್ತಲೇ ನಿನ್ನ ಕವಿತೆ, 'ಬಿರಿದ ಹೂವೆಲ್ಲ ನೆಲಕ್ಕುರುಳಿದ ಮೇಲೂ ಆಕಾಶವನ್ನೇ ನೋಡುತ್ತಿವೆ...ಅರಳಿದ್ದೆಲ್ಲಾ ಲೋಕವಿಮುಖ' ಎಂದು ಉದ್ಗರಿಸುತ್ತದೆ... "ಅವಳ ಆಲಿಂಗನದಲಿ ಮೊಲೆಗಳು ಮಾಯವಾಗಿದ್ದವು' - ಎನ್ನುವ ದಿಗ್ಗಾಂತ ಕಂಗಳೇ “ಕರಿಮಣಿಯ ಸುತ್ತ ಇರುವ ಬರೀ ಸೇಪ್ಟಿ ಪಿನ್ನುಗಳನ್ನು ಕಾಣುತ್ತವೆ.

ಬೆನ್ನುಡಿಯಲ್ಲಿ ಜಯಂತಕಾಯ್ಕಿಣಿಯವರು ಅಭಿಪ್ರಾಯ ಪಡುವಂತೆ  ’ನಿನ್ನಾಧರದಲಿ ನಾನು ಹುಣ್ಣಿಮೆಯನು ಮಿಂದ ಚಿಟ್ಟೆ'ಎಂದು ಕುಣಿಯುವ ಜೀವವೇ 'ತುತ್ತತುದಿ ಉನ್ನತ್ತದಲು, ಬೆನ್ನು ಭುಜ ನೇವರಿಸುವ ತಾಯಿಕರುಳ'ನ್ನು ಮನಗಾಣುತ್ತದೆ. ಕವಿತೆ ಒಂದು ಚಲನೆ...ಆಕಾರದಿಂದ ನಿರಾಕಾರದೆಡೆಗೆ...ಅಲೆಗಳಿಂದ ನೀರವದ ನೆಲೆಯೆಡೆಗೆ, ಹೋಮಿಯೊಪಥಿಯಂತೆ ಕಾವ್ಯವೂ ಒಂದು Constitutional remedy; ವಿಶಾಲದೆಡೆಗೆ ನಮ್ಮನ್ನು ತೆರೆಯುವ ಪುಟ್ಟ ಕೀಲಿ ಕೈಗಳ ಗುಚ್ಛವೇ ಈ ಕೃತಿ.’

 

About the Author

ವಿಕ್ರಮ್ ಹತ್ವಾರ್

ವಿಕ್ರಮ್ ಹತ್ವಾರ್ ತಮ್ಮ ಮೊದಲ ಕಥಾಸಂಕಲನಕ್ಕೆ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪಡೆದವರು. ಕುಂದಾಪುರ ಮೂಲದವರಾದ ವಿಕ್ರಮ್, ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಜೀರೋ ಮತ್ತು ಒಂದು, ಅಕ್ಷೀ ಎಂದಿತು ವೃಕ್ಷ, ನೀ ಮಾಯೆಯೋಳಗೋ ಹಾಗೂ ಹಮಾರಾ ಬಾಜಾಜ್ ಎಂಬ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books