ಚಿತ್ರಸೃಷ್ಟಿ

Author : ಸಾಲಿ ರಾಮಚಂದ್ರರಾಯ

Pages 221




Year of Publication: 1948
Published by: ಉಡುಪಿ ಭೀಮರಾಯ ಬೀಡಿ
Address: ಮಂಗಳವಾರ ಪೇಟೆ, ಧಾರವಾಡ

Synopsys

ಕವಿ ಸಾಲಿ ರಾಮಚಂದ್ರರಾಯರ ಕವನಗಳ ಸಂಗ್ರಹ-ಚಿತ್ರಸೃಷ್ಟಿ. ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು ಬರೆದ ಮುನ್ನುಡಿಯಲ್ಲಿ ‘ಸಾಲಿ ಅವರ ಕವಿತೆಗಳೆಂದರೆ ಕವಲುದಾರಿಗಳ ಕೈಕಂಬವಿದ್ದಂತೆ. ಅವರ ಲೇಖನಿ ಹಳೆಯ ದಾರಿಗೂ ಚಾಚಿದೆ. ಹೊಸ ದಾರಿಗೂ ಚಾಚಿದೆ. ಅವರ ಕಾವ್ಯದೇವಿಯು ಇಂದಿನ ಕನ್ನಡಕ್ಕೆ ಒಪ್ಪುವಂತೆ ಪ್ರಾಯದಲ್ಲಿ ಹೊಸ ಬಳೆ ಆದರೂ ಠೀವಿಯಲ್ಲಿ ಒಂದು ಬಣ್ಣಕ್ಕೆ ಹಳಬಳು. ಅವಳಿಗೆ ಹಳೆಯ ಛಂದಸ್ಸುಗಳು ಉಡುಗೆ ಮೆಚ್ಚು, ಪ್ರಾಸದ ತೊಡುಗೆಯಲ್ಲಿ ನೆಚ್ಚು, ಇಲ್ಲಿಯ ಕವಿತೆಗಳು ನೈಸರ್ಗಿಕವಾದ ಪ್ರೇಮದಿಂದ ತುಂಬಿ ತುಳುಕಾಡುತ್ತವೆ. ಬಾಹ್ಯಸೃಷ್ಟಿಯನ್ನು ತಮ್ಮ ಭಾವ ದೃಷ್ಟಿಯಿಂದ ನೋಡುತ್ತವೆ. ಭಾವಸ್ವರ್ಗದ ಸಮಾಧಿಯಲ್ಲಿ ಹೊಕ್ಕ ಯೋಗಿಯಂತೆ ಅವು ಆನಂದದ ಅನುಭವ ನೀಡುತ್ತವೆ ಎಂದು ಮನದುಂಬಿ ಪ್ರಶಂಸಿಸಿದ್ದಾರೆ.

ಈ ಸಂಕಲನದ ಒಟ್ಟಂದವಾಗಿ ಪ್ರಕಟಗೊಂಡಿರುವ ಸುಮಾರು 50 ಪುಟದಷ್ಟು ಸಾಲಿ ರಾಮಚಂದ್ರರಾಯರು, ಅವರ ಕಾವ್ಯ ಹಾಗೂ ಸಾಹಿತ್ಯ ಸೃಷ್ಟಿ ಕುರಿತಂತೆ ಅದ್ಭುತವಾದ ಲೇಖನ ರೂಪದ ಪರಿಚಯವಿದೆ. ಇಂದಿನ ಕನ್ನಡ ಸಾಹಿತ್ಯ, ಸಾಲಿ ಅವರ ಕವನಗಳು, ಸಂಕಲನದ ಅಗತ್ಯ, ಸಂಪಾದನಾ ಕಾರ್ಯ, ಕವಿಯೂ-ಕಾವ್ಯವೂ, ಕಾವ್ಯಸೃಷ್ಟಿ, ಪ್ರಕೃತಿ ಗೀತೆಗಳು, ರಾಷ್ಟ್ರೀಯ ಕವನಗಳು, ಸಂಕೀರ್ಣ ಕವನಗಳು, ತಿಲಾಂಜಲಿ ಹೀಗೆ ಕವಿ ಸಾಲಿ ಅವರ ಅಗಾಧ ವ್ಯಕ್ತಿತ್ವ ಹಾಗೂ ಸಾಹಿತ್ಯ ವಿರಾಟ ಸ್ವರೂಪವನ್ನು ಈ ಪರಿಚಯಾತ್ಮಕ ಲೇಖನ ಸುಂದರವಾಗಿ ಕಟ್ಟಿಕೊಟ್ಟಿದೆ.

About the Author

ಸಾಲಿ ರಾಮಚಂದ್ರರಾಯ
(10 October 1888 - 31 October 1978)

’ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ, ಕನ್ನಡದ ಕಲ್ಲೆನಗೆ ಶಾಲಗ್ರಾಮ ಶಿಲೆ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಕನ್ನಡದ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಕನ್ನಡದ ಮೊದಲ ವಿಲಾಪಗೀತೆ ರಚಿಸಿದ ಹಿರಿಮೆ ಅವರದು. ನವೋದಯದ ಆರಂಭದ ದಿನಗಳಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಗೆ ಮುಂದಾಗಿದ್ದ ಸಾಲಿಯವರು ಎರಡು ಕಾಂಡಗಳನ್ನು ಪ್ರಕಟಿಸಿದ್ದರು. ಅದಕ್ಕೆ ಬಂದ ’ಸಾಲಿ ರಾಮಾಯಣ’ ಎಂಬ ಟೀಕೆಯಿಂದ ಬೇಸತ್ತು ನಂತರದ ಸಂಪುಟಗಳನ್ನು ಪ್ರಕಟಿಸಲು ಹಿಂದೇಟು ಹಾಕಿದರು. ನಂತರದ ದಿನಗಳಲ್ಲಿ ಅಪ್ರಕಟಿತ ರಾಮಾಯಣದ ಹಸ್ತಪ್ರತಿಗಳು ಗೆದ್ದಲುಗಳಿಗೆ ಆಹಾರವಾದಾಗ ತೀವ್ರ ನೋವು ಅನುಭವಿಸಿದರು. ಅವರ ಸಮಗ್ರ ಕವಿತೆಗಳನ್ನು ಡಾ. ...

READ MORE

Related Books