ಊರು -ಬಳಗ

Author : ರುದ್ರಪ್ಪ ಹನಗವಾಡಿ

Pages 76

₹ 90.00
Year of Publication: 2013
Published by: ಪ್ರೊ.ಬಿ.ಕೆ.ಟ್ರಸ್ಟ್‌
Address: ಸಂತೋಷ್‌ ನಗರ, ಅಟ್ಟೂರು, ಯಲಹಂಕ ಬೆಂಗಳೂರು-560064
Phone: 9739032600

Synopsys

ಊರು -ಬಳಗ ರುದ್ರಪ್ಪ ಹನಗವಾಡಿ ಅವರ ಎರಡನೇ ಕವನ ಸಂಕಲನವಾಗಿದೆ. ’ನಾನು ಕಥೆ ಕವನ ಮತ್ತು ಜನಪರ ಹೋರಾಟಗಳ ಏಳು ಬೀಳುಗಳ ಬಗ್ಗೆ ಸ್ನೇಹಿತರೊಡನೆ ಚರ್ಚಿಸುತ್ತಾ ಇರುವಾಗ, ಬರೆದ ಕವನಗಳನ್ನು ಓದಿದಾಗ, "ನೀನ್ಯಾಕೆ ಅವುಗಳನ್ನು ಪ್ರಕಟಿಸಬಾರದು" ಎಂದು ಕೇಳುತ್ತಿದ್ದ ಸ್ನೇಹಿತರ ಮಾತಿನಲ್ಲಿ ನಂಬಿಕೆ ಬಂದು ಮೊದಲು 2010ರಲ್ಲಿ ಸೆಳೆತ' ಕವನ ಸಂಕಲವನ್ನು, ಈಗ ಊರು ಬಳಗವನ್ನು ಪ್ರಕಟಿಸುವ ಧೈರ್ಯ ಮಾಡಿದ್ದೇನೆ’ ಎಂದು ರುದ್ರಪ್ಪ ಹನಗವಾಡಿ ಹೇಳಿದ್ದಾರೆ. ಕಾವ್ಯಕ್ಕೆ ಬೇರೆಯೇ ಒಂದು ಸ್ಪಶ್ ನೀಡಬಲ್ಲ ರೂಪಕಗಳು ಇಲ್ಲಿನ ಕವಿತೆಗಳಲ್ಲಿವೆ.

About the Author

ರುದ್ರಪ್ಪ ಹನಗವಾಡಿ

ರುದ್ರಪ್ಪ ಹನಗವಾಡಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಬಳಿಕ ಕರ್ನಾಟಕ ಆಡಳಿತ ಸೇವೆಯಲ್ಲೂ ಸೇವೆ ಸಲ್ಲಿಸಿದ್ದಾರೆ. 'ಸೆಳೆತ' - ಕವನ ಸಂಕಲನ 2010 'ಊರು – ಬಳಗ' ಕವನ ಸಂಕಲನ 2013 ವಿವಿಧ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ‘ಎಲೆ ಮುಗಿಲ ಬೆಳಕು' ಕವನ ಸಂಕಲನ 2021, 'ಋಣದ ಗಣಿ' ಆತ್ಮಕಥೆ 2021, ಇವರ ಕೃತಿಗಳು. ಸಂಪಾದನೆ: ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಬಿ.ಆರ್.ಪಿ. 'ದಶಮಾನ' ಸಂಚಿಕೆ 1979 .ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ 'ಅಭಿವೃದ್ಧಿ' ವಿಶೇಷ ಸಂಚಿಕೆ ...

READ MORE

Related Books