ತಥಾಗತನಿಗೊಂದು ಪದ್ಮಪತ್ರ

Author : ಆನಂದ ಋಗ್ವೇದಿ

Pages 160

₹ 125.00




Year of Publication: 2019
Published by: ಸಾಧನ ಪಬ್ಲಿಕೇಷನ್
Address: ನಂ. 15/16, ಶಿವಕಾಂಪ್ಲೆಕ್ಸ್, ಡಾ. ರಾಜ್ ಪ್ರತಿಮೆ ಎದುರು, ಬಳೇಪೇಟೆ ಮುಖ್ಯರಸ್ತೆ, ಬೆಂಗಳೂರು- 53

Synopsys

‘ತಥಾಗತನಿಗೊಂದು ಪದ್ಮಪತ್ರ’ ಲೇಖಕ ಆನಂದ ಋಗ್ವೇದಿ ಅವರ ಕವನ ಸಂಕಲನ. ಈ ಕೃತಿಗೆ ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು ಬೆನ್ನುಡಿ ಬರೆದಿದ್ದಾರೆ. ಆನಂದ ಋಗ್ವೇದಿ ತಮ್ಮ ನಿರಂತರ ಪರಿಶ್ರಮದಿಂದ ತಮ್ಮದೇ ಆದ ಬಿಗಿಯಾದ ಕಾವ್ಯ ಭಾಷೆ ಮತ್ತು ಆ ಭಾಷೆಯ ಒಡಲಿಂದಲೇ ಉದ್ಭವಿಸುವ ಸಹಜ ಲಯಗಾರಿಕೆಯನ್ನು ರೂಢಿಸಿದ್ದಾರೆ ಎನ್ನುತ್ತಾರೆ ವೆಂಕಟೇಶ ಮೂರ್ತಿ. ಎಂಥ ಎದೆಯಾಳದ ಅನುಭೂತಿಯನ್ನೂ ಅನಾಯಾಸವಾಗಿ ಹೊರಕ್ಕೆಳೆವ ಶಕ್ತಿಯನ್ನು ಅವರ ಈ ನುಡಿಗಟ್ಟು ಪಡೆದುಕೊಂಡಿದೆ.ಜೊತೆಗೆ ಎಂಥದ್ದೇ ಕರುಳು ಬಗೆವ ಅನುಭವವನ್ನೂ ಅದರ ಒಳ ಮುರಿವುಗಳ ಸಮೇತ ಗ್ರಹಿಸಿ ಭಾಷಾ ರೂಪಕ್ಕೆ ರೂಪಾಂತರಿಸುವ ತಳಮುಳುಗಿನ ಕಾವ್ಯನಿಷ್ಠೇ ಅವರಿಗಿದೆ ಎಂದು ಪ್ರಶಂಶಿಸಿದ್ದಾರೆ.

About the Author

ಆನಂದ ಋಗ್ವೇದಿ
(24 May 1974)

ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ-  ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.  ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ.  ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...

READ MORE

Related Books