ತರಂಗಿಣಿ

Author : ಡಿ. ಪದ್ಮನಾಭ

Pages 84

₹ 100.00




Year of Publication: 2022
Published by: ಹೆಚ್. ಎಸ್. ಆರ್. ಎ ಪ್ರಕಾಶನ
Address: ಬೆಂಗಳೂರು.

Synopsys

ಲೇಖಕ ಡಿ. ಪದ್ಮನಾಭ ಅವರ ಆರನೆಯ ಕೃತಿ "ತರಂಗಿಣಿ" ಕವನಸಂಕಲ. ನಾಡಿನ ಹೆಸರಾಂತ ಕವಿ ದೊಡ್ಡರಂಗೇಗೌಡರು ಈ ಕೃತಿಗೆ ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ. ಅಲ್ಲದೆ ಕವಿ ಹರಿನರಸಿಂಹ ಉಪಾಧ್ಯಾಯರು ಬೆನ್ನುಡಿ ಮಾತುಗಳನ್ನು ಬರೆದಿದ್ದಾರೆ. ಕವಯತ್ರಿ ಲತಾ.ಕೆ. ಎಸ್ ಹೆಗಡೆ ಆಶಯನುಡಿಗಳಿಂದ.ಅಲಂಕರಿಸಿದ್ದಾರೆ. ಮುನ್ನುಡಿಯ ಮಾತುಗಳಲ್ಲಿರುವಂತೆ, ಕವಿ ಡಿ. ಪದ್ಮನಾಭ ಅವರ ‘ಕಾವ್ಯತರಂಗಿಣಿ’ ನವನವೋನ್ಮೇಶಶಾಲಿನಿಯಾಗಿದೆ. ಅದು ಲೀಲಾಜಾಲವಾಗಿ ಸಾಹಿತ್ಯವಾಹಿನಿಯಾಗಿದೆ. ಈ ಸಂಕಲನದ ಎಲ್ಲ ಕವನಗಳೂ ಲಯಬದ್ಧವಾಗಿ ಗೇಯತೆಯಿಂದ ಕೂಡಿವೆ.ಪುಟ್ಟ ಪುಟ್ಟ ಪದ್ಯಗಳು ಭಾವಗೀತೆಗಳಾಗಿ ಕವಿ ಕನ್ನಡಿಗರ ಕಣ್ಮಣಿ ಆಗಲಿದ್ದಾರೆ ಎಂಬುದಾಗಿ ಹೇಳಿದ್ದಾರೆ.

About the Author

ಡಿ. ಪದ್ಮನಾಭ
(06 February 1966)

ಕವಿ ಡಿ. ಪದ್ಮನಾಭ ಅವರು ಮೈಸೂರಿನಲ್ಲಿ 1966 ಫೆಬ್ರುವರಿ 06 ರಂದು ಜನಿಸಿದರು. ಅವರ ‘ಹೂಬನ’ ಕವನ ಸಂಕಲನ ಇತ್ತಿಚೆಗೆ ಪ್ರಕಟವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಿಂದಿ ರತ್ನ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಆಸ್ಥೆ ಉಳ್ಳವರು. ‘ಸಂತೋಷ-ಸಂದೇಶ’, ‘ಭಾವಲಹರಿ’ ಕವನ ಸಂಕಲನಗಳು ಹಾಗೂ ‘ಭಾವಸರಿತೆ’ ಕಥಾಸಂಕಲನ ಪ್ರಕಟವಾಗಿವೆ. ...

READ MORE

Related Books