ಈ ಹೂವ ಹೆಸರು ನಿಮ್ಮಿಚ್ಚೆಯಂತೆ

Author : ಪರಿಮಳ ಜಿ. ಕಮತರ್

Pages 120

₹ 100.00
Year of Publication: 2017
Published by: ನಿವೇದಿತಾ ಪ್ರಕಾಶನ
Address: ನಂ. 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು
Phone: 9972129376

Synopsys

‘ಈ ಹೂವ ಹೆಸರು ನಿಮ್ಮಿಚ್ಚೆಯಂತೆ’ ಕವಿತೆಗಳ ಸಂಕಲನವು ಕವಿ ಪರಿಮಳ ಅವರ ನೆನಪುಗಳು, ಭಾವನೆಗಳು, ಕನಸುಗಳ ಪ್ರತಿರೂಪ ಎನಿಸಬಹುದು.

ಇಲ್ಲಿಯ ಕವಿತೆಗಳಲ್ಲಿ ಹೂವನ್ನು ಹೆಣ್ಣಿಗೆ ಸಮೀಕರಿಸಿಕೊಂಡು ನೋಡುವ ದೃಷ್ಟಿಕೋನ ಭಿನ್ನವಾಗಿದೆ. ಏಕೆಂದರೆ, ನಾನೊಂದು ಹೂವು/ ಕುಂಡದಲಿ ಬಂದಿಯಾದ/ನಸುನಗುವ ಹೂವು (ಹೂ ಹೂವ ಹೆಸರು ನಿಮ್ಮಿಚ್ಚೆಯಂತೆ) ಎನ್ನುತ್ತಲೇ ಹೂವಿನ ಸಹಜ ಗುಣವನ್ನು ಮೀರುತ್ತಾ ’ಮುಟ್ಟಿದರೆ ಮುನಿಯದ/ ಹಿಸುಕಿದರೆ ನಾಶವಾಗದ/ ಜಗ್ಗಿದರೆ/ಪಕಳೆಯೂ ಕೀಳದ/ ಗಟ್ಟಿ ತೊಗಲಿನ/ಖುಷಿ ಕೊಡುವ ನಾನು- ಹೂವು’ ಎಂದು ಹೇಳುತ್ತಲೇ ತನ್ನೊಳಗಿನ ದೃಢತೆಯನ್ನು ದಾಖಲಿಸುತ್ತಾರೆ. ಇಂತಹ ಹಲವಾರು ಕವಿತೆಗಳು ಇಲ್ಲಿವೆ.

About the Author

ಪರಿಮಳ ಜಿ. ಕಮತರ್

ಕವಯಿತ್ರಿ, ಕಥೆಗಾರ್ತಿ ಮತ್ತು ಅನುವಾದಕಿ ಪರಿಮಳ ಜಿ. ಕಮತರ್ ಅವರು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ‘ ಈ ಹೂವ ಹೆಸರು ನಿಮ್ಮಿಚ್ಚೆಯಂತೆ’ ಇವರ ಕವಿತಾ ಸಂಕಲನದ ಹೆಸರು. ...

READ MORE

Related Books