ಖಾಕಿಯೊಳಗಿನ ಕನಸುಗಳು

Author : ಶಿವಕುಮಾರ ದಂಡಿನ

Pages 94

₹ 70.00




Year of Publication: 2018
Published by: ಶ್ರೀ ಮಾತಾ ಪ್ರಕಾಶನ

Synopsys

ವಿವಿಧ ಕವಯತ್ರಿಯರು ಬರೆದಿರುವ ಕವಿತೆಗಳ ಸಂಕಲನ. ಶಿವಕುಮಾರ ದಂಡಿನ ಅವರ ಸಂಪಾದಕತ್ವದಲ್ಲಿ ಬಂದಿದೆ. 'ಖಾಕಿಯೊಳಗಿನ ಕನಸುಗಳು' ಮೂವತ್ತೈದು ಉದಯೋನ್ಮುಖ ಕವಯತ್ರಿಯರ ಎಪ್ಪತ್ತನಾಲ್ಕು ಪದ್ಯಗಳ ಸಂಗ್ರಹ. ಕಾನೂನನ್ನು ರಕ್ಷಿಸುವ ಬಿಡುವಿರದ ನಿತ್ಯ ಕರ್ತವ್ಯದಲ್ಲಿ ನಿರತರಾಗಿರುವ ಈ ಮಹಿಳೆಯರು ತಮ್ಮ ಮನೋಗತ ಭಾವಾಲೋಚನೆಗಳಿಗೆ ಮಾತಿನ ಸಮವಸ್ತ್ರವನ್ನು ತೊಡಿಸಿ ಕವಾಯತು ಮಾಡಿಸಿರುವುದು ಅಚ್ಚರಿಯೊಂದಿಗೆ ಹೆಮ್ಮೆಯನ್ನೂ ಮೂಡಿಸುತ್ತದೆ. ಇಲ್ಲಿನ ಪದ್ಯಗಳು ಬಹು ಪಾಲು ಅಭ್ಯಾಸ ಮಟ್ಟದ ರಚನೆಗಳು, ಹೆಚ್ಚಿನವು ಹನಿಗವಿತೆಗಳ ವರ್ಗಕ್ಕೆ ಸೇರಿದಂಥವು. ಅಲ್ಲಲ್ಲಿ ಮಿಂಚಿಸಿರುವ ಆಲೋಚನೆಗಳು ಪಬುದ್ಧವೆನ್ನಿಸಿದರೂ ಒಟ್ಟಾರೆಯಾಗಿ ಪರಿಶೀಲಿಸಿದಾಗ ಇನ್ನೂ ಹೆಚ್ಚಿನ ಪರಿಪಕ್ವತೆ, ಬಿಗಿಬನ್ನಿ, ಛಂದೋವೈವಿಧ್ಯ ಅಗತ್ಯವೆನ್ನಿಸುತ್ತದೆ. ಹೀಗಿದ್ದೂ, ನೇರ ಹಾಗೂ ಅಸಂದಿಗ್ಧ ನುಡಿಗಾರಿಕೆಯ ಬಳಕೆ ಮತ್ತು ಅನಿರೀಕ್ಷಿತವಾಗಿ ಅನುಭವಕ್ಕೆ ಬರುವ ಚಮತ್ಕಾರಿಕ ಚಮಕ್‌ಗಳು ಇಲ್ಲಿನ ಕವಯತ್ರಿಯರ ಬಗೆಗೆ ಆಶಾವಾದ ತರಿಸುತ್ತವೆ. ಪೊಲೀಸ್ ಪೋಷಾಕು ಧರಿಸಿದರೂ ಬೆಚ್ಚಗಿನ ಮಾರ್ದವತೆ, ಮೃದುತ್ವಗಳನ್ನು ಕಾಪಾಡಿಕೊಂಡು ಸಂವೇದನಾಶೀಲರಾಗಿರುವುದು ಹಾಗೂ ಹಲವರು ಅಂತಃಕರಣಪೂರ್ವಕ ಭಾವೋದ್ವಾರಗಳನ್ನು ಹೊಮ್ಮಿಸಿರುವುದು ಪ್ರಶಂಸನೀಯವೆನ್ನಿಸುತ್ತದೆ. ಎಂದು ಕೆ.ಎಸ್‌. ನಿಸಾರ್‌ ಅಹಮದ್‌ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಶಿವಕುಮಾರ ದಂಡಿನ

ಶಿವಕುಮಾರ ದಂಡಿನ ಅವರು ವೃತ್ತಿಯಲ್ಲಿ ಪೊಲೀಸ್‌ ಅಧಿಕಾರಿ. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಕವನ ಸಂಕಲನಗಳು: ಮೋಹದ ಪಥವೂ ಇಹಲೋಕದ ರಿಣವೂ, ಖಾಕಿಯೊಳಗಿನ ಕನಸುಗಳು. ...

READ MORE

Related Books