ಭಾವನೌಕೆಯನೇರಿ

Author : ಸೌಜನ್ಯ ದತ್ತರಾಜ

Pages 128

₹ 200.00




Year of Publication: 2022
Published by: ಅದಮ್ಯಾ ಪ್ರಕಾಶನ 
Address: ಜಿ-6, ಗುಲ್ ಮೊಹರ್ ಬ್ಲಾಕ್, ಹರವಿಜಯ ವ್ಯಾಲಿ ವ್ಯೂ ಅಪಾರ್ಟ್ಮೆಂಟ್ಸ್, ರವಿ ಹಿಲ್ ವ್ಯೂ ಲೇಔಟ್, ಇಟ್ಟಮಡು, ಬನಶಂಕರಿ, 3ನೆಯ ಸ್ಟೇಜ್, ಬೆಂಗಳೂರು - 560085
Phone: 9986806272

Synopsys

"ಭಾವನೌಕೆಯನೇರಿ..." ಕೃತಿಯು ಸೌಜನ್ಯ ದತ್ತರಾಜ ಅವರ ಕವನಸಂಕಲನವಾಗಿದೆ. ಈ ಕವನಸಂಕಲನದ ಕುರಿತು ಕವಿ ಕಥೆಗಾರ ಡಾ. ಅಜಿತ್ ಹರೀಶಿ ಅವರ ಮಾತುಗಳು ಹೀಗಿವೆ: ವಿವಿಧ ಕಲಾ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಸೌಜನ್ಯ ದತ್ತರಾಜ ಅವರು ಪ್ರಥಮ ಕವನ ಸಂಕಲನವನ್ನು ಹೊರತರುತ್ತಿದ್ದಾರೆ. ತೀವ್ರವಾದ ಪ್ರೇಮ, ವಿರಹ ಮತ್ತು ನೆನಪುಗಳನ್ನು ಒಳತಿರುಳಾಗಿಸಿಕೊಂಡ ಕವಿತೆಗಳು ಹಾಗೂ ಕೆಲವು ಬೇರೆ ಬೇರೆ ವಸ್ತುಗಳನ್ನೊಳಗೊಂಡ ಕವಿತೆಗಳು ಇಲ್ಲಿವೆ. ಹೆಚ್ಚಿನವು ಹೆಣ್ಮನಸಿನ ಹಂಬಲ, ತಲ್ಲಣ, ಕಂಪನಗಳನ್ನು ಧ್ವನಿಸುತ್ತವೆ. 'ಅಪಾರ್ಟ್ಮೆಂಟಿನ ಕಾಂಪೌಂಡು', 'ದುಡಿಯುತ್ತಲೇ ಹೋದ', 'ಇದ್ದೇ ಇರುತ್ತಾರೆ' ಇಂಥ ಕೆಲವು ಕವನಗಳು ಬದುಕಿನ ವಿಪರ್ಯಾಸ, ವಿಡಂಬನೆಗಳನ್ನು ಚಿತ್ರಿಸುತ್ತವೆ. 'ಅರಿವು', 'ಹೂವು' ಮತ್ತು ಕೆಲವು ಕವನಗಳಲ್ಲಿ ತಾತ್ತ್ವಿಕತೆಯ ನೆರಳೂ ಇದೆ. ಇವುಗಳನ್ನೆಲ್ಲ ಯಾವುದೇ ಬಂಡಾಯ, ಘೋಷಣೆಗಳಿಲ್ಲದೇ ಕವಯತ್ರಿ ವಿನೀತವಾಗಿಯೇ ಹೇಳಿದ್ದಾರೆ. ಕವಿತೆಗಳಲ್ಲಿ ಬರುವ ಚಂದ್ರ, ಸೂರ್ಯ, ಭೂಮಿ, ಬಾನು, ಕೃಷ್ಣ ರಾಧೆಯರ ರೂಪಕ ಹಾಗೂ ಉಪಮೆಗಳೂ ಸೌಮ್ಯ ಭಾವದಲ್ಲಿಯೇ ಇವೆ. ಇದು ಸೌಜನ್ಯರ ಸೂಕ್ಷ್ಮತೆ, ಸಂವೇದನಾಶೀಲತೆ ಹಾಗೂ ಬದುಕಿನ ಪ್ರತಿಯೊಂದು ಕ್ಷಣದ ಆಸ್ವಾದನಶಕ್ತಿಯನ್ನು ಸಾಬೀತುಪಡಿಸುತ್ತದೆ. ಎಲ್ಲಿಯೂ ಅತಿ ಆಡಂಬರದ ಭಾರವಿಲ್ಲದೇ, ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕವಿತೆಗಳ ಮೂಲಗುಣ ಸಹಜತೆ ಮತ್ತು ಸರಳತೆ. ಅದೇ ಇಲ್ಲಿನ ಕವಿತೆಗಳ ಸೌಂದರ್ಯ ಕೂಡ. ಒಂದೇ ಭಾವವು ಹತ್ತಾರು ಕವಿತೆಗಳನ್ನು ಸೃಜಿಸಬಲ್ಲುದೆಂಬುದಕ್ಕೆ ನಿದರ್ಶನವಾಗಿಯೂ ಕೆಲವು ಕವಿತೆಗಳು ನಿಲ್ಲುತ್ತವೆ. ಕವಿತೆಗಾಗಿ ಹಾತೊರೆಯುತ್ತ, ತಪಗೈಯುತ್ತ, ಕವಿತೆಯ ಇರುವಿಕೆಯಲ್ಲೇ ಮೋಕ್ಷ ಕಾಣುವೆನೆನ್ನುವ ಸೌಜನ್ಯ ಅವರು 'ಭಾವ ನೌಕೆಯನೇರಿ' ಪಯಣ ಹೊರಟಿದ್ದಾರೆ ಎನ್ನುತ್ತಾರೆ.

 

About the Author

ಸೌಜನ್ಯ ದತ್ತರಾಜ

ಲೇಖಕಿ ಸೌಜನ್ಯ ದತ್ತರಾಜ ಅವರು ಹದಿನೇಳು ವರ್ಷಗಳ ಕಾಲ ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಪ್ತ ಸಮಾಲೋಚನಾ ತರಬೇತಿಯನ್ನೂ ಪಡೆದಿರುತ್ತಾರೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಫ್ರಿಲಾನ್ಸರ್ ಬರಹಗಾರರೂ ಆಗಿದ್ದಾರೆ. ಸಿನಿಮಾ, ನಾಟಕ ಮತ್ತು ಪುಸ್ತಕಗಳ ಕುರಿತು ಪರಿಚಯಾತ್ಮಕ ಲೇಖನಗಳನ್ನು ಬರೆಯುತ್ತಿರುತ್ತಾರೆ. ಇವರು ಬರೆದ ಕಥೆಗಳು 'ತರಂಗ', 'ಮಂಗಳ', 'ವಿಶ್ವವಾಣಿ' ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 2014ರ 'ಕನ್ನಡಪ್ರಭ' ದೀಪಾವಳಿ ವಿಶೇಷಾಂಕದ ಸಣ್ಣ ಕಥಾ ಸ್ಪರ್ಧೆಯಲ್ಲಿ ಬಹುಮಾನವನ್ನೂ ಗಳಿಸಿದ್ದಾರೆ. ಕಥೆ, ಕವಿತೆ, ಮಕ್ಕಳಿಗಾಗಿ ನಾಟಕಗಳನ್ನೂ ಬರೆದಿರುವ ಇವರು, ಇತ್ತೀಚಿನ ದಿನಗಳಲ್ಲಿ ವಿಷುವಲ್ ಮೀಡಿಯಾದಲ್ಲಿ ಚಿತ್ರಕಥೆ, ಸಂಭಾಷಣೆಗಳನ್ನು ...

READ MORE

Related Books