ನಾ ಕಂಡ ಲೋಕ

Author : ಭೀಮಾಂಬಿಕಾ ವಿ. ನೂಲ್ವಿ

Pages 80

₹ 50.00




Year of Publication: 2017
Published by: ಸಿದ್ಧಲಿಂಗವಿಜಯ ಪ್ರಕಾಶನ
Address: ನೂಲ್ವಿ ಜಿನ್ ಕಂಪೌಂಡ್ ನವನಗರ ಗಜೇಂದ್ರಗಡ 582114 ಜಿ: ಗದಗ
Phone: 8970381649

Synopsys

ನಾ ಕಂಡ ಲೋಕ' -ಭೀಮಾಂಬಿಕಾ ವಿ. ನೂಲ್ವಿ ಅವರ ಮೊದಲ ಕವನ ಸಂಕಲನ. ವಸ್ತು ವೈವಿಧ್ಯತೆಯಿಂದ ಕೂಡಿರುವ ಕವನಗಳ ಪೈಕಿ ವಚನಗಳೂ ಸೇರಿವೆ. ಕೃತಿಗೆ ಬರೆದ ಮುನ್ನುಡಿಯಲ್ಲಿ ಸಾಹಿತಿ ಐ. ಎ. ರೇವಡಿ ‘ಇಲ್ಲಿಯ ಕವನಗಳು ಸಾಮಾಜಿಕ ಪ್ರೇರಣೆಯ ಚಿಂತನೆಗಳನ್ನು ಒಳಗೊಂಡಿವೆ. ಶರಣರ ಕಾಯಕ ಹಾಗೂ ಇಷ್ಟಲಿಂಗದೊಡನೆ ಮಾತನಾಡುವ ಪರಿಯೇ ಇಲ್ಲಿ ಕಾವ್ಯವಾಗಿವೆ. ಗದಗಿನ ಶ್ರೀ ಗಾನಯೋಗಿ ಪಂಡಿತ ಕವಿ ಗುರು ಪುಟ್ಟರಾಜರ ಕುರಿತು ಹಾಡುಗಳಿವೆ .ತಂದೆ - ತಾಯಿ, ಅಣ್ಣ ಅಕ್ಕ, ರೈತರ ಬದುಕು,ಮತ್ತೆ ಬಂದಿತು ಯುಗಾದಿ ಸೇರಿದಂತೆ ಸಾಮಾಜಿಕ ವಿದ್ಯಮಾನಗಳು ಕವಿತೆಯ ವಸ್ತುಗಳಾಗಿವೆ’ ಎಂದು ಪ್ರಶಂಸಿಸಿದ್ದಾರೆ. .

About the Author

ಭೀಮಾಂಬಿಕಾ ವಿ. ನೂಲ್ವಿ
(29 November 1999)

ಭೀಮಾಂಬಿಕಾ ವಿ. ನೂಲ್ವಿ ಅವರು ಮೂಲತಃ ಗದಗ ಜಿಲ್ಲೆಯ (ಜನನ: 29-11-1999) ಗಜೇಂದ್ರಗಡದವರು. ತಂದೆ ವಿಜಯಕುಮಾರ ನೂಲ್ವಿ, ತಾಯಿ ಶಶಿಕಲಾ ನೂಲ್ವಿ. ಭೀಮಾಂಬಿಕಾ ಅವರು ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. .ಕಾವ್ಯಕೃಷಿಯೊಂದಿಗೆ ವಚನ ಸಾಹಿತ್ಯದೆಡೆಗೆ ಹೆಚ್ಚಿನ ಒಲವು ಇದೆ. ನಾ ಕಂಡ ಲೋಕ-ಇದು ಅವರ ಮೊದಲ ಕವನ ಸಂಕಲನ. ಚುಟುಕುಗಳು ಸೇರಿದಂತೆ ತಾವು ಕಂಡ ರೀತಿಯಲ್ಲಿಸಾಮಾಜಿಕ ವಿದ್ಯಮಾನಗಳಿಗೆ  ಪ್ರತಿಕ್ರಿಯಿಸಿದ ವಚನಗಳು ಒಳಗೊಂಡಿವೆ. . 2018 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಕನಾ೯ಟಕ ದ್ವಿತಿಯ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ 'ಯುವ ಚೇತನ ಪ್ರಶಸ್ತಿ' ಹಾಗೂ 2020 ರ ಜನೆವರಿಯಲ್ಲಿ ಶಿಕಾರಿಪುರದ ಸದ್ಭಾವನ ವೇದಿಕೆ 'ಕದಂಬ ...

READ MORE

Related Books