ಹೊಸ ಬಗೆಯ ಕವಿತೆಗಳು ರಾಗಿ ಕಲ್ಲಿನ ಮೇಲೆ ಚೆಲ್ಲಿದೆ ನಮ್ಮ ಹಾಡು/ಬಲ್ಲಂತಜಾಣರು ಬರಸಿಕೊಳ್ಳಿ/ನಮ್ಮ ಹಾಡ ಬಳ್ಳತಕ್ಕೊಂಡು ಅಳೆದುಕೊಳ್ಳಿ, ಎಂಬುದೊಂದು ಪ್ರಸಿದ್ಧ ಜನಪದ ಗೀತೆ. ಈಗ ರಾಗಿಕಲ್ಲಿನ “ಕಾಲ ಹಿಂದಕ್ಕೆ ಸರಿದು ಮಿಕ್ಕಿ ಡ್ರೈಂಡರ್ ಮೈಕ್ರೋವೇವ್ ಗಳ ಕಾಲದಲ್ಲಿ ಕೂಡ ನಿಟ್ಟುಸಿರುಗಳು ಇವೆ ಎಂಬುದುಇಲ್ಲಿರುವ ಕವಿತೆಗಳ ಮೂಲಕ ಅರ್ಥವಾಗುತ್ತದೆ. ಈವರೆಗೂ ಅನುವಾದಿತ ಕವಿತೆ, ಲಲಿತ ಪ್ರಬಂಧ, ಹರಟೆಯ ಮೂಲಕ ಓದುಗರ ಗಮನ ಸೆಳೆದಿದ್ದ ಕಿಚನ್ ಭಾರತಿ, ಇದೀಗ ಹೊಸ ಬಗೆಯ ಕವಿತೆಗಳು ಪದ್ಯಗಳೊಂದಿಗೆಎದುರನಿಂತಿದ್ದಾರೆ. ಅಡುಗೆಮನೆಯಲ್ಲಿರುವ ಕಾವಲಿ,ಸೌಟು, ಚಮಚೆ, ಲಟ್ಟಣಿಗೆ, ತರಕಾರಿ, ಲೋಟ ತಟ್ಟೆ ಹೀಗೆ ಎಲ್ಲವನ್ನೂ ಎಳೆದು ತಂದು ಪ್ರೀತಿಗೆ ನಿಟ್ಟುಸಿರಿಗೆ ದುರಾಸೆಗೆ, ನಯವಂಚನೆಗೆ, ವಿರಹಕ್ಕೆ, ಧ್ಯಾನಕ್ಕೆ, ಬೇಸರಕ್ಕೆ, ನಂಟು ಮಾಡಿ ಚಿನಕುರುಳಿಯಂಥ ಪದ್ಯಗಳನ್ನು ಬರೆದಿದ್ದಾರೆ. ಒಂದು ಸ್ಯಾಂಪಲ್ ನೋಡಿ; ಹೆಂಗಸರು ಹೊಂದಾಣಿಕೆಯ ಪಾಠ ಚಪಾತಿಯಿಂದಲೂ ಕಲಿಯುತ್ತಾರೆ. ಹಿಟ್ಟು ಕಡಿಮೆ ಆದಾಗ ಕೂಡ ಸುತ್ತಳತೆ ಕಡಿಮೆಯಾಗದಂತೆ ಲಟ್ಟಿಸ ಬಹುದು.
ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್ ಕವಿತೆಗಳು', 'ಜಸ್ಟ್ ಮಾತ್ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ...
READ MORE