ಭೂರಮೆ ವಿಲಾಸ

Author : ಕಗ್ಗೆರೆ ಪ್ರಕಾಶ್

Pages 136

₹ 130.00




Year of Publication: 2021
Published by: ಕಗ್ಗೆರೆ ಪ್ರಕಾಶನ
Address: # ೧15/ 375,ಸ್ನೇಹ ಕಾರಂಜಿ, 1ನೇ ಮೇನ್, 8ನೇ ಅಡ್ಡರಸ್ತೆ, ಕೆಂಪೇಗೌಡನಗರ, ಮಾಗಡಿ ಮುಖ್ಯರಸ್ತೆ, ವಿಶ್ವನೀಡಂ, ಬೆಂಗಳೂರು-560091
Phone: 9663412986

Synopsys

ಭೂರಮೆ ವಿಲಾಸ-ಕವಿ ಕಗ್ಗೆರೆ ಪ್ರಕಾಶ ಅವರ ಕವನ ಸಂಕಲನ. ಒಟ್ಟು 46 ಕವನಗಳಿವೆ. ಕವಿಯೇ ಹೇಳುವಂತೆ ‘ಭೂರಮೆಯು ಪ್ರಾಕೃತಿಕವಾಗಿ ಮನುಷ್ಯನ ಕಣ್ಮನಗಳಿಗೆ ಎಷ್ಟು ಸೊಬಗು ನೀಡುತ್ತಾಳೋ ಅಷ್ಟೇ ಅವರ ಅಟ್ಟಹಾಸವನ್ನು ಮಟ್ಟು ಹಾಕುತ್ತಲೇ ಇರುತ್ತಾಳೆ. ಇಂತಹ ವಿಲಾಸವೇ ಈ ಕಾವ್ಯಕೃತಿಯ ವಸ್ತು ವೈವಿಧ್ಯತೆ. ಈ ಕಾವ್ಯಕೃತಿಯು ಕೌಟುಂಬಿಕ ಸೂಕ್ಷ್ಮ ಒಳನೋಟಗಳನ್ನು ಮತ್ತು ಸಮಾಜದ ಓರೆ-ಕೋರೆಗಳನ್ನು ಪ್ರತಿಬಿಂಬಿಸುವ ಹಾಗೂ ಮನುಷ್ಯನ ಬದುಕು ಹಸನುಗೊಳ್ಳಬೇಕೆಂಬ ಆಶಯ ಹೊತ್ತು ನಿಂತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನಸಾಮಾನ್ಯರ ಬದುಕಿಗೆ ಈ ಕವನಗಳು ಪೂರಕವಾಗಿವೆ ಎಂದು ಸಾಹಿತಿ ಚೆನ್ನಗಿರಿ ಕೇಶವಮೂರ್ತಿ ಹೇಳಿದ್ದರೆ, ಕವಿಯ ಅನುಭವದ ಮೂಲಕ ನಿಗೂಢವಾದದ್ದನ್ನು ಭೇದಿಸುವ ಈ ಕವಿತೆಗಳು ಮನುಷ್ಯನ ಪಾಡು. ಎಲ್ಲವನ್ನೂ ನುಂಗಿಕೊಂಡು ಸುಂದರವಾಗಿ ಬದುಕಬೇಕೆನ್ನುವ ಹಂಬಲದ ಹಾಡು’ ಎಂದು ಪ್ರಶಂಸಿಸಿದ್ದಾರೆ. ಎಂ.ಈ. ರೇಖಾ ಮರಿಯಯ್ಯ ಸ್ವಾಮಿ ಅವರು ‘ಅನುಭವದ ಮೂಸೆಯಿಂದ ಅರಳಿ ಬಂದ ಇಲ್ಲಿನ ಕವನಗಳು ಸಹೃದಯರ ಮನಸ್ಸಿಗೆ ಪರಕಾಯ ಪ್ರವೇಶ ಪಡೆದು ಹೆಚ್ಚು ಆಪ್ತವಾಗುತ್ತವೆ’ ಎಂದಿದ್ದರೆ, ವಿಮರ್ಶಕಿ ಕೆ.ಎಸ್. ನಿಖಿತಾ ಅಡವೀಶಯ್ಯ ಅವರು ‘ ಇಲ್ಲಿಯ ಕವನಗಳು ಭಾವುಕ ಕ್ಷಣಗಳಲ್ಲಿ ಹುಟ್ಟಿದ ನವಿರು ಭಾವನೆಗಳಾಗಿವೆ. ತಂತಾನೆ ಬರೆಸಿಕೊಂಡ ಈ ಕವನಗಳಲ್ಲಿ ಎಲ್ಲಿಯೂ ಒತ್ತಡದ ಛಾಯೆ ಇಲ್ಲ. ಇಲ್ಲಿನ ವಸ್ತುಗಳು ಸಹ ವೈವಿಧ್ಯಮಯವಾಗಿವೆ’ ಎಂದು ಶ್ಲಾಘಿಸಿದ್ದಾರೆ.

About the Author

ಕಗ್ಗೆರೆ ಪ್ರಕಾಶ್
(01 June 1971)

ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ...

READ MORE

Related Books