ಮೌನ ಚರಿತೆ

Author : ಶೋಭಾ ನಾಯಕ

Pages 108

₹ 60.00
Year of Publication: 2011
Published by: ಸಿವಿಜಿ ಇಂಡಿಯಾ
Address: ಕಸ್ತೂರ ಬಾ  ಭವನ, ಗಾಂಧೀ ಭವನ ಕ್ಯಾಂಪಸ್, ಕುಮಾರ ಪಾರ್ಕ್, ಬೆಂಗಳೂರು - 560 001
Phone: 08022340799

Synopsys

ಲೇಖಕಿ ಶೋಭಾ ನಾಯಕ ಅವರ ಕವನ ಸಂಕಲನ ‘ಮೌನ ಚರಿತೆ’. ಕೃತಿಗೆ ಮುನ್ನುಡಿ ಬರೆದ, ಸಾಹಿತಿ ಡಾ. ರಂಗರಾಜ ವನದುರ್ಗ ಅವರು ‘ಪ್ರಸ್ತುತ ಸಂಕಲನದ ಬಹಳಷ್ಟು ಕವಿತೆಗಳು ಮೌನವನ್ನು ಮಾತನಾಡಿಸಲು ಪ್ರಯತ್ನಿಸಿವೆ. ಪ್ರೀತಿಸುವ ಜೋಡಿಗಳ ಪಯಣದಲ್ಲಿ ಹಲವು ಝಲಕುಗಳು ಗುನುಗುನಿಸಿವೆ. ತನ್ನ ಎದೆಯ ಗೂಡಿನಲ್ಲಿ ಅವನ ಚಿಲಿಪಿಲಿ ಹುಡುಕುವ ಕವನದ ನಾಯಕಿಗೆ ಅನೇಕ ಕನಸುಗಳಿವೆ. ಶ್ರಾವಣದ ಮಳೆ ಮತ್ತು ಬಿಸಿಲಿನ ಜುಗುಲ್ ಬಂದಿಯಲ್ಲಿ ಮೂಡಿದ ಕಾಮನಬಿಲ್ಲು ಕಾಣುವುದೇ ಅವಳಿಗೊಂದು ಹಬ್ಬ, ಆದರೆ ಕೆಲವು ಸಲ ಬಾಣಗಳಿಲ್ಲದ ಬಿಲ್ಲು ಎದೆಗೆ ಏರಿಸುವಂತಿಲ್ಲ. ಒಂಟಿ........ ಗ್ಯಾರಂಟಿ ಎಂದುಕೊಳ್ಳುವ ಆಸೆಗಳು ಚೆಲ್ಲಿಕೊಳ್ಳುತ್ತವೆ. ಆದರೂ ಇದನ್ನು ನನಗೂ ನಿನಗೂ ಅವನಿಗೂ..... . ಯಾರಿಗೂ ಹೇಳುವಂತಿಲ್ಲ. ಏಕೆಂದರೆ ಇದು ಮೌನ ಚರಿತೆ.’ ಎಂದು ಪ್ರಶಂಸಿಸಿದ್ದಾರೆ.

 

About the Author

ಶೋಭಾ ನಾಯಕ
(16 June 1979)

ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...

READ MORE

Related Books