ಮೌನ ಮಾತಾದಾಗ

Author : ಶರಣಗೌಡ ಪಾಟೀಲ, ಜೈನಾಪುರ

Pages 88

₹ 80.00
Year of Publication: 2014
Published by: ನಿರಂಜನ ಪ್ರಕಾಶನ
Address: ಜೇವರ್ಗಿ, ಜಿಲ್ಲೆ ಕುಲಬುರಗಿ

Synopsys

ಲೇಖಕ ಶರಣಗೌಡ ಪಾಟೀಲರ ಕವನ ಸಂಕಲನ-ಮೌನ ಮಾತಾದಾಗ. ಇಲ್ಲಿ 50 ಕವಿತೆಗಳಿವೆ. ಕನ್ನಡ ಕಾವ್ಯಲೋಕ ಕಾಲ ಕಾಲಕ್ಕೆ ತನ್ನ ಒಲವು ನಿಲುವುಗಳನ್ನು ಬದಲಾಯಿಸುತ್ತಲೇ ಪ್ರವಹಿಸುತ್ತಾ ಬಂದಿರುವುದನ್ನು ಕಾಣುತ್ತೇವೆ. ಕಾವ್ಯ ಸಮಕಾಲೀನ ಜೀವನದ ಸಂದರ್ಭಗಳನ್ನು ಸಂಗತಿಗಳನ್ನು, ಸೋಗಲಾಡಿತನವನ್ನು ವೇಗವಾಗಿ ಚಿತ್ರಿಸುತ್ತದೆ. ಅಲ್ಲಿಯೇ ಕವಿಯ ಜೀವಂತಿಕೆ ಕಾಣುತ್ತದೆ. ಕವಿಯ ನವಿರಾದ ಭಾವನೆಗಳನ್ನು ಪದಗಳ ಮೂಲಕ ಅಭಿವೃದ್ಧಿಪಡಿಸಿದ್ದಾರೆ. ಉದ್ಯೋಗ ಖಾತ್ರಿ, ನೂರು ಕೋಟಿ,ಒಂದಾಗಿರೋಣ,ನೀವೇ ಹೇಳಿ, ಓ ಗಾಂಧಿ, ಶುಭ ನುಡಿಯೇ ಶಕುನದ ಹಕ್ಕಿ , ಪಯಣ,ಕವಿತೆಗಳು ಓದಿಸಿಕೊಂಡು ಹೋಗುತ್ತವೆ.

ಹಣದ ಚೆಲ್ಲಾಟ, ಬದುಕಿನ ಒಡನಾಟದ ನಡುವೆ ಬೇಕು ಹಣ.ಹಣ ಇದ್ದರೆ ಹೆಣ ಬಾಯಿ ಬಿಡುತ್ತದೆ ಎಂಬ ಮಾತಿನಂತೆ 'ರೊಕ್ಕ ಇದ್ದರೆ ಬರ್ತಾರ ಬಂಧು-ಬಳಗ ಅದು ಇಲ್ಲ ಅಂದರೆ ಹೋಗ್ತಾರೆ ದೂರ ದೂರ' ಎಂದು ಕವಿತೆಯ ಮುನ್ನಡೆಸುತ್ತದೆ. 'ಎಡವಿದ ಬಟ್ಟು, ಮತ್ತೆ ಎಡವುದು ಯಾಕೋ' ಎಂಬ ಕವಿತೆಯಲ್ಲಿ ಆದರ್ಶವನ್ನು ತಲೆಯಲ್ಲಿ ಇಟ್ಟುಕೊಂಡರೂ ಅನುಭವಿಸಲಿಕ್ಕೂ ಆಗದೆ,ಹಂಚಲು ಆಗದೆ ಇರುವ ತಾಕಲಾಟವನ್ನು ವಿವರಿಸುತ್ತಾರೆ. ಸಮಕಾಲೀನ ಸಂದರ್ಭದ ರಾಜಕೀಯ ನಾಯಕರ ಕುತಂತ್ರವನ್ನು ಕಂಡು ನಗಬೇಕೋ ಅಳಬೇಕೋ ಕವಿತೆಯಲ್ಲಿ ಹೇಳುತ್ತಾ ಮೂರ್ಖ ಮಗನ ಪೆದ್ದತನ, ದುಡಿಯದವನ ದಡ್ಡತನ,ಸಂಘ ಸಂಸ್ಥೆ, ಸರ್ಕಾರಗಳ,ಮೋಸತನ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಸಂಕಲನದಲ್ಲಿ 50 ಕವಿತೆಗಳಿದ್ದು ಬಸವಣ್ಣ, ಯುಗಾದಿ,ದಾಂಡೇಲಿ, ನುಡಿನಮನ, ಕನ್ನಡ,ನಮನ, ಮುಂತಾದ ಕವಿತೆಗಳು ವಿವಿಧ ನೆಲೆಯಲ್ಲಿ ನಿಲ್ಲುತ್ತವೆ. ಸಂಕಲನದ ಶೀರ್ಷಿಕೆ ಹೊತ್ತ ಕವಿತೆ" ಮೌನ ಮಾತಾದಾಗ "ನಮ್ಮನ್ನು ಸಂವಹನಕ್ಕೆ ಹಚ್ಚುತ್ತದೆ. ಇವರ ಕವಿತೆಗಳಲ್ಲಿ ಸರಳತನವಿದೆ, ಸಹಜತೆಯಿದೆ, ಕಂಡದ್ದನ್ನು ದಾಖಲಿಸುವ ಕವಿ ಮನಸ್ಸಿದೆ

About the Author

ಶರಣಗೌಡ ಪಾಟೀಲ, ಜೈನಾಪುರ
(01 June 1969)

ಲೇಖಕ ಶರಣಗೌಡ ಪಾಟೀಲರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದವರು. ತಂದೆ ಈಶ್ವರಪ್ಪಗೌಡ, ತಾಯಿ ಕಮಲಮ್ಮ, ಎಂ.ಎ ಹಾಗೂ ಎಂ.ಕಾಂ. ಪದವೀಧರರು. ಜೇವರ್ಗಿಯಲ್ಲಿ ನಿರಂಜನ ಪ್ರಕಾಶನ (2007) ಸ್ಥಾಪಿಸಿದರು. ರಂಗಂಪೇಟೆಯ ಬರಹಗಾರರ ಬಳಗದ ಕಾರ್ಯದರ್ಶಿ, ಸುರಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವಲಯ ಅಧ್ಯಕ್ಷರು, ರಂಗಪೇಟೆಯ ಕನ್ನಡ ಸಾಹಿತ್ಯ ಸಂಘದ ಸದಸ್ಯರು, ಮಕ್ಕಳ ಸಾಹಿತ್ಯ ಪರಿಷತ್ತು(ಜೇವರ್ಗಿ) ಉಪಾಧ್ಯಕ್ಷರು, ಗುಲಬರ್ಗಾ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರಗೊಂಡಿವೆ. ಜೇವರ್ಗಿ ತಾಲೂಕು 5ನೇ ಶರಣ ಸಾಹಿತ್ಯ (2021) ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸದ್ಯ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪದವಿಪೂರ್ವ ...

READ MORE

Related Books