ನಾನೂ ಕವನ ಬರೆದೆ

Author : ಅಹಿತಾನಲ (ನಾಗ ಐತಾಳ)

Pages 48

₹ 50.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040

Synopsys

‘ನಾನೂ ಕವನ ಬರೆದೆ’ ಲೇಖಕ ಆಹಿತಾನಲ(ನಾಗ ಐತಾಳ)ರ ಮೊದಲ ಕವನ ಸಂಕಲನ. ಜೀವ ರಾಸಾಯನಿಕ ಶಾಸ್ತ್ರದ ವಿಜ್ಞಾನಿಯಾದ ನಾಗ ಐತಾಳರು, ಕನ್ನಡ ಸಾಹಿತ್ಯ ಲೋಕಕ್ಕೆ ಅಪರಿಚಿತರಲ್ಲ. ಅನೇಕ ಸಂಪಾದಿತ ಕೃತಿಗಳು, ಅನುವಾದಗಳು, ನೆನಪುಗಳ ಮೂಲಕ ದೂರದ ನೆಲದಿಂದಲೇ ಕನ್ನಡವನ್ನು ಶ್ರೀಮಂತಗೊಳಿಸುತ್ತಿರುವ ಸ್ನೇಹಜೀವಿ. ಗದ್ಯದಿಂದ ಬರವಣಿಗೆ ಆರಂಭಿಸಿದ ನಾಗ ಐತಾಳರು ಕವಿತೆಯತ್ತ ಆಕರ್ಷಿತರಾಗಿದ್ದಾರೆ. `ನಾನೂ ಕವನ ಬರೆದೆ' ಎಂಬ ಬೆರಗಿನಂತೆಯೇ ಈ ಸಂಕಲನದ ಕವನಗಳಿವೆ.

About the Author

ಅಹಿತಾನಲ (ನಾಗ ಐತಾಳ)
(05 October 1932 - 29 October 2022)

ಅಹಿತಾನಲ ಎಂಬ ಕಾವ್ಯನಾಮದಿಂದ ಬರೆಯುವ ವಿಜ್ಞಾನಿ ನಾಗ ಐತಾಳ ಅವರು ಜನಿಸಿದ್ದು 1932ರ ಅಕ್ಟೋಬರ್‍ 5ರಂದು. ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಅವರು ಸದ್ಯ ಕ್ಯಾಲಿಫೋರ್ನಿಯಾದ ಅರ್‍ಕಾಡಿಯಾದ ನಿವಾಸಿ ಆಗಿರುವ ಐತಾಳರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿಯೂ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಅವರು ಅಧ್ಯಯನ ಮಾಡಿದ್ದಾರೆ.  ಭಾರತದಲ್ಲಿ ಪಿಎಚ್.ಡಿ. ಪದವಿ ಪಡೆದ ನಂತರ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಕೆನಡಾಕ್ಕೆ ಹೋದರು. ಅದಾದ ಮೇಲೆ ಅಮೆರಿಕೆಗೆ ಹೋದ ಅವರು 1975ರಿಂದ 2001ರ ವರೆಗೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ...

READ MORE

Related Books