ಚಿಗುರು (ಕವನ ಸಂಕಲನ)

Author : ನಾಗಪ್ಪ ಟಿ. ಗೋಗಿ

Pages 96

₹ 100.00
Year of Publication: 2020
Published by: ಅಭಿಷೇಕ ಪ್ರಕಾಶನ
Address: # 180/1A, ಸುಭಾಷ್ ಚೌಕ್, ಎಸ್ ಬಿಆರ್ ರಸ್ತೆ, ಕಲಬುರಗಿ-585103
Phone: 9686153485

Synopsys

ಲೇಖಕ ನಾಗಪ್ಪ ಟಿ. ಗೋಗಿ ಅವರ ಕವನ ಸಂಕಲನ-ಚಿಗುರು. ಒಟ್ಟು 60 ಕವಿತೆಗಳಿವೆ. ದೇಶಪ್ರೇಮ, ಕನ್ನಡ ಪ್ರೀತಿ, ಮಾತೃಭೂಮಿ,ಸಂಬಂಧಗಳು, ಬಡತನ,ರಾಜಕೀಯ, ತಾಯಿ, ಗುರು, ಪ್ರೀತಿ,ಸಾಂದರ್ಭಿಕ ರಚನೆ ಹೀಗೆ ಕವಿತೆಗಳು ವಸ್ತುವೈವಿಧ್ಯತೆಯನ್ನು ಒಳಗೊಂಡಿವೆ. ಭೂಮಿಯ ಮೇಲೆ ಬದುಕುವ ಮನುಷ್ಯರೆಲ್ಲರೂ ಸಮಾನವಾಗಿ ಜೀವಿಸುತ್ತಿಲ್ಲವೇಕೆ ಎಂಬುದು ಕವಿಯ ಪ್ರಶ್ನೆ, ತಂದೆ-ತಾಯಿ ಪ್ರೀತಿಯಿಂದ ವಂಚಿತನಾದ ಕವಿ ಅಣ್ಣನ ಆಸರೆಯಲ್ಲಿ ಬೆಳೆದ ಬಗೆ ಇಂತಹ ಭಾವದ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ.

 

 

About the Author

ನಾಗಪ್ಪ ಟಿ. ಗೋಗಿ
(27 June 1980)

ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಯಂಕಮ್ಮ. ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದ ಇವರು ಅಣ್ಣನ ಆಸರೆಯಲ್ಲಿ ಬೆಳೆದರು. ಸೋದರಮಾವನ ನೆರವಿನಿಂದ ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಗೋಗಿಯಲ್ಲಿ ಪ್ರೌಢಶಿಕ್ಷಣದಿಂದ ಪದವಿ ಶಿಕ್ಷಣ ಪೂರೈಸಿದರು. ಗುಲಬರ್ಗಾ ವಿವಿಯಿಂದ ಎಂ.ಎ. ಶಿಕ್ಷಣ ಪಡೆದರು. ಲಿಂಗಣ್ಣ ಸತ್ಯಂಪೇಟೆ ಜೀವನ ಕುರಿತು ಎಂ.ಫಿಲ್ ಹಾಗೂ ಅಂಬಿಗರ ಚೌಡಯ್ಯ ಜೀವನ ಹಾಗೂ ವಚನ ಸಾಹಿತ್ಯ ಕುರಿತು ಪಿಎಚ್ ಡಿ ಪೂರೈಸಿದರು. ಸುರಪುರ ತಾಲೂಕಿನ ಕೆಂಭಾವಿ ಹಾಗೂ ಬೀದರ ಜಿಲ್ಲೆಯ ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ...

READ MORE

Related Books