ರಾಷ್ಟ್ರಕವಿ ಕುವೆಂಪು ಅವರ ಮೊದಲನೆಯ ಕವನ ಸಂಕಲನವಿದು. 1930ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. ನಂತರ ಹಲವು ಮರುಮುದ್ರಣ ಕಂಡಿದೆ. ಕೊಳಲು ಸಂಕಲನದಲ್ಲಿ ಒಟ್ಟು 70 ಕವಿತೆಗಳಿವೆ. ಮೊದಲ ಸಂಕಲನದಲ್ಲಿಯೇ ಮುಂದೆ ಮಹಾನ್ ಕವಿಯಾಗುವ ಲಕ್ಷಣಗಳನ್ನು ಹೊಂದಿರುವ ಕವಿತೆಗಳು ಇದ್ದುದನ್ನು ಗಮನಿಸಬಹುದು. ಕರ್ನಾಟಕದ ನಾಡಗೀತೆ ಆಗಿರುವ ‘ಜಯಹೇ ಕರ್ನಾಟಕ ಮಾತೆ’ ಹಾಗೂ ರಾಜ್ಯದ ರೈತಗೀತೆ ಆಗಿರುವ ‘ನೇಗಿಲಯೋಗಿ’ ಕವಿತೆಗಳು ಕೊಳಲು ಸಂಕಲನದಲ್ಲಿ ಸೇರಿದ್ದವು. ಸೋಮನಾಥಪುರ ದೇವಾಲಯ, ನವಿಲು, ಗೊಲ್ಲನ ಗಾಯತ್ರಿ, ಗೋಮಟೇಶ್ವರ, ಕಬೀರದಾಸರಿಂದ ಮುಂತಾದ ಕವಿತೆಗಳು ಗಮನ ಸೆಳೆಯುತ್ತವೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE