ನೂರೊಂದು ನೆನಪು

Author : ನಿಷ್ಠಿ ರುದ್ರಪ್ಪ

Pages 38

₹ 50.00




Year of Publication: 2015
Published by: ಕಲ್ಯಾಣ ಲಿಟರರಿ ಪಬ್ಲಿಷರ್‍ಸ್
Address: # 26, ಕೃಷ್ಣ ಕೃಪೆ, ಶ್ರೀಹರಿ ನಗರ, ಜೇವರ್ಗಿ ರಸ್ತೆ, ಕಲಬುರಗಿ-585102
Phone: 9886045485

Synopsys

ಕವಿ ಹಾಗೂ ಲೇಖಕ ನಿಷ್ಠಿ ರುದ್ರಪ್ಪ ಅವರ ಹನಿಗವನಗಳ ಸಂಕಲನ-ನೂರೊಂದು ನೆನಪು. ಲೇಖಕರು ತಮ್ಮ ಬಾಲ್ಯದಿಂದಲೂ ಬರೆದಿದ್ದ ಅನೇಕ ಹನಿಗವನಗಳನ್ನು ಒಟ್ಟುಗೂಡಿಸಿ ‘ನೂರೊಂದು ನೆನಪು ಎನ್ನುವ ಹನಿಗವನ ಸಂಕಲನವನ್ನು ಹೊರತರಲಾಗಿದೆ. ಹರೆಯದ ಹಂಗಾಮಕಷ್ಟೆ ಪ್ರೇಮ ಕಾಮನೆಗಳಲ್ಲ, ಅದು ಸಾಯುವವರೆಗೂ ಮನುಷ್ಯನ ಜೊತೆಗೆ ಇರಬೇಕಾದ ಪ್ರೀತಿಯ ವಸ್ತುವು ಹೌದು. ಹಲವಾರು ರಸಿಕತೆಯೊಂದೊಡಗೂಡಿದ ಸಾಲುಗಳು ಪ್ರೇಮ-ಕಾಮಕ್ಕೆ ಸೀಮಿತಗೊಂಡಿದ್ದರೂ ಅವುಗಳು ಆಧ್ಯಾತ್ಮಕತೆಯ ಹಸಿವನ್ನು ಅಂತರಂಗದ ಬೇಕು-ಬೇಡಗಳಿಗೆ ಸಂಬಂಧಿಸಿದ್ದಾಗಿವೆ ಎನ್ನುವುದನ್ನು ಈ ಹನಿಗವನಗಳು ಸಾಬೀತುಪಡಿಸುತ್ತವೆ. ಬಾಲ್ಯದ ಯೌವನದ ನೆನಪುಗಳೂ ಸವಿ ಸವಿ ಪೆಪ್ಪರಮೆಂಟಿನ ಹಾಗೆ ಅವುಗಳನ್ನು ಚಪ್ಪರಿಸಿದಂತೆಲ್ಲಾ ಸವಿ ಹೆಚ್ಚು. ಆ ರೀತಿಯ ಹನಿಗವನಗಳು ಇಲ್ಲಿ ಸಂಕಲನಗೊಂಡಿವೆ ಎಂದು ಕವಿಗಳು ಅಭಿಪ್ರಾಯಪಟ್ಟಿದ್ದಾರೆ.

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books