ಮಂದ ಬೆಳಕಿನ ಸಾಂತ್ವನ

Author : ಚನ್ನಪ್ಪ ಅಂಗಡಿ

Pages 74

₹ 50.00
Year of Publication: 2006
Published by: ಮಹಾಮನೆ ಪ್ರಕಾಶನ
Address: ನವೋದಯ ನಗರ, ಧಾರವಾಡ – 3
Phone: 08362446263

Synopsys

‘ಮಂದ ಬೆಳಕಿನ ಸಾಂತ್ವನ’ ಲೇಖಕ ಚನ್ನಪ್ಪ ಅಂಗಡಿ ಅವರ ಮೊದಲ ಕವನ ಸಂಕಲನ, ಕನ್ನಡ ಪುಸ್ತಕ ಪ್ರಾಧಿಕಾರ ಧನಸಹಾಯ ಪುರಸ್ಕೃತ ಕೃತಿ. ಪೇಜಾವರ ಸದಾಶಿವರಾವ್ (ಮುಂಬೈ) ಪ್ರಶಸ್ತಿ, ಪೆರ್ಲ ಕಾವ್ಯ (ಕಾಸರಗೋಡು) ಪ್ರಶಸ್ತಿ ಲಭಿಸಿವೆ. ಈ ಕೃತಿಗೆ ಮೋಹನ ನಾಗಮ್ಮನವರ ಬೆನ್ನುಡಿ ಬರೆದು ‘ಕವಿತೆಯ ಕುರಿತು ಮಾತನಾಡುವುದಕ್ಕಿಂತ ಅಸ್ವಾದಿಸುವುದೇ ಮುಖ್ಯ ಎಂಬ ಮನೋಗತ ನನ್ನದು. ಕವಿ ಎನ್ನಿಸಿಕೊಂಡೇ ತೀರಬೇಕೆಂಬ ಹಠದಿಂದ ಬರೆಯುವವರಲ್ಲಿ ವಿಮರ್ಶೆ ಎದುರಿಸುವ ಸಹನೆ ಇರುವುದಿಲ್ಲ. ಕವಿಗೆ ಕೊಂಚಮಟ್ಟಿಗಿನ ಅಳುಕೂ ಇರಬೇಕು. ಚನ್ನಪ್ಪ ಅಂಗಡಿ ಅವರಲ್ಲಿ ಆ ಅಳುಕಿದೆ’ ಎನ್ನುತ್ತಾರೆ.

ಇಲ್ಲಿಯ ಕವಿತೆಗಳಲ್ಲಿ ಶ್ರದ್ಧೆಯಿಂದ ಸಿದ್ಧಪಡಿಸಿದ ಕಾವ್ಯವಿದೆ. ಕವಿಗೆ ಮತ್ತವನ ಕವಿತೆಗೆ ಕಾವ್ಯಶಕ್ತಿಯೇ ಮುಖ್ಯ. ಅಪ್ಪಟ ಕಾವ್ಯದ ಕಾವ್ಯಲಕ್ಷಣ ಮತ್ತು ಭಾವ ಲಕ್ಷಣಗಳನ್ನು ಸಮರ್ಥವಾಗಿ ತೋರುವ ಚನ್ನಪ್ಪ ಅವರು ಆಧುನಿಕ ಕನ್ನಡ ಕಾವ್ಯದ ಹೊಸ ಭರವಸೆ.

About the Author

ಚನ್ನಪ್ಪ ಅಂಗಡಿ
(15 April 1970)

ಚನ್ನಪ್ಪ ಅಂಗಡಿ ಅವರು  ಎಮ್ ಎಸ್ ಸಿ (ಕೃಷಿ)  ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.   ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ.   ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...

READ MORE

Related Books