ಕಾಡು ಕಣಿವೆ ಕಡಲು

Author : ದೊಡ್ಡರಂಗೇಗೌಡ

Pages 100

₹ 70.00




Year of Publication: 2012
Published by: ಅನ್ನಪೂರ್ಣ ಪ್ರಕಾಶನ
Address: ಸಿರಿಗೇರಿ, ಸಿರಗುಪ್ಪಾ ತಾಲೂಕು, ಬಳ್ಳಾರಿ ಜಿಲ್ಲೆ- 583120
Phone: 26604835

Synopsys

`ಕಾಡು ಕಣಿವೆ ಕಡಲು’ ಕೃತಿಯು ದೊಡ್ಡರಂಗೇಗೌಡ ಅವರ ಕವನಸಂಕಲನವಾಗಿದೆ. ಇಲ್ಲಿ ಕಾವ್ಯ ಮಾನವೀಯ ಸಂವೇದನೆಗಳನ್ನು ಅಭಿವ್ಯಕ್ತಿಗೊಳಿಸುವ ಶಕ್ತಿಶಾಲಿ ಮಾಧ್ಯಮವಾಗಿ ರೂಪವನ್ನು ಪಡೆದುಕೊಳ್ಳುತ್ತದೆ. ಕಾವ್ಯ, ರೂಪವಿಲ್ಲದ ಭಾವನೆಗಳಿಗೆ ಶಬ್ದಾತ್ಮಕ ರೂಪ ನೀಡುತ್ತದೆ, ಲಯ ನೀಡುತ್ತದೆ, ಗತಿ ನೀಡುತ್ತದೆ. ಕಾವ್ಯ ರಚನಾಕಾರನೊಂದಿಗೆ, ಕೇಳುಗನನ್ನು, ಓದುಗನನ್ನು ಯಾವ ಕಾವ್ಯ ತನ್ನ ಪ್ರಭಾವದೊಂದಿಗೆ ಬಂಧಿಸುತ್ತದೆಯೋ ಹಾಗೂ ಪರಿವರ್ತನೆಗೊಳಿಸುತ್ತದೆಯೋ ಅಂಥ ಕಾವ್ಯ ಮಾತ್ರ ತನ್ನ ಸಾರ್ಥಕತೆಯನ್ನು ಪ್ರಾಮಾಣಿಕಗೊಳಿಸುತ್ತದೆಂದು ನಾನು ಭಾವಿಸಿದ್ದೇನೆ. ಕವಿಮಿತ್ರ ಡಾ. ದೊಡ್ಡರಂಗೇಗೌಡ ಕಾವ್ಯದಲ್ಲಿ ಇಂಥ ಸಾರ್ಥಕತೆಯನ್ನು ಕಂಡಿದ್ದೇನೆ. ಈ ಕವಿತೆಗಳು ನಮ್ಮನ್ನು ನಂದನ ನಿಕುಂಜಗಳಲ್ಲಿ ವಿಹರಿಸುವಂತೆ ಮಾಡುತ್ತವೆ. ಇಲ್ಲಿಯ ಗೀತೆಗಳು ರಮ್ಯ-ಸುರಮ್ಯವಾಗಿವೆ. ಸ್ವಚ್ಚ ಸಲಿಲದಿಂದ ತುಂಬಿದ ಸರೋವರವಿದ್ದ ಹಾಗಿವೆ ಇವು. ಮಾಧುರ್ಯದ ಮಂಗಲ ಸಲಿಲದಲ್ಲಿ ಮೈಯೊಡ್ಡುವಂತೆ ಮಾಡುತ್ತವೆ. ಇವುಗಳ ಓದಿನಿಂದ ಸೌಂದರ್ಯದ ಶಿವಪ್ರಜ್ಞೆ ಜಾಗ್ರತವಾಗುತ್ತದೆ. ಕವಿ ದೊಡ್ಡರಂಗೇಗೌಡರ ಅದ್ಬುತ ಪ್ರತಿಭೆಯ ಸ್ರೋತ ನಮ್ಮನ್ನು ಮುಗ್ದಗೊಳಿಸುತ್ತದೆ. ಸೌಂದರ್ಯದ ಶಿವ ಪ್ರಜ್ಞೆಯ ಸಾಕ್ಷಾತ್ಕಾರ ಮಡಿಸುತ್ತದೆ. ಶಿವಮನದವನಿಗೆ, ಶಿವದೃಷ್ಟಿಯಿದ್ದವನಿಗೆ, ಸತ್ಯವೂ ಶಿವ, ಶಿವವೂ ಶಿವ, ಸುಂದರವೂ ಶಿವ ಎಂಬ ಪ್ರಜ್ಞೆ ಇದ್ದವನಿಗೆ ಇಲ್ಲಿಯ ಚೆಲುವಿನ, ಮಧುರ ಆಸ್ವಾದನೆಯಿಂದ ಆಂತರಿಕ ಬದುಕು ಸುಮಧುರವಾಗುತ್ತದೆ ಎಂಬವುವುದನ್ನು ನಾವಿಲ್ಲಿ ಅರಿಯಬಹುದು.

About the Author

ದೊಡ್ಡರಂಗೇಗೌಡ
(07 February 1946)

ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ.  ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...

READ MORE

Reviews

(ಹೊಸತು, ಫೆಬ್ರವರಿ 2012, ಪುಸ್ತಕದ ಪರಿಚಯ)

ದೊಡ್ಡರಂಗೇಗೌಡರು ಹಲವಾರು ಗೀತೆಗಳನ್ನು ಬರೆದು ಪ್ರಸಿದ್ದರು. ಇವರ ಕವಿತೆಗಳನ್ನು ಸಂಗೀತಪ್ರೇಮಿಗಳುಚಲನಚಿತ್ರ, ಆಕಾಶವಾಣಿ, ಕವಿಗೋಷ್ಠಿಗಳಲ್ಲಿ ಆಗಾಗ ಕೇಳಿ ಆನಂದಿಸಿದ್ದಾರೆ. ಸರಳವಾಗಿ ಅರ್ಥವಾಗುವ ಮನಕಲಕುವ ಭಾವನೆಗಳನ್ನುಂಟುಮಾಡುವ ಇವರ ಗೀತೆಗಳು ಚಲನಚಿತ್ರಗಳಲ್ಲಿ ಯಾವುದೋ ಒಂದು ದೃಶ್ಯಕ್ಕೆ - ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತವೆ. ಕವಿಯ ಮನಸ್ಸು ವಿವಿಧ ಭಾವಲಹರಿಗಳಿಗೆ ಮಿಡಿಯುತ್ತಲೇ ತಾನು ನೋಡಿದ, ಅನುಭವಿಸಿದ ಪ್ರತಿಯೊಂದಕ್ಕೂ ಸ್ಪಂದಿಸುತ್ತದೆ. ಕವಿಯ ಉತ್ತಮ ಕವಿತೆಗಳನ್ನು ಗಾಯಕ ಹುಡುಕುತ್ತಲೇ ಇರುತ್ತಾನೆ. ಗೀತ ರಚನೆ - ಗೀತ ಗಾಯನ ಪರಸ್ಪರ ಬೇರ್ಪಡಿಸಲಾರದ ಸಂಬಂಧ, ವಿವಿಧ ವಿಷಯಗಳಿಗೆ ಸಂಬಂಧಿ ಸಿದಂತೆ. ಹಲವಾರು ಕವನಗಳು ಇಲ್ಲಿವೆ. ಚಲನಚಿತ್ರಗಳಿಗಾಗಿಯೇ ಗೀತೆ, ಸಂಭಾಷಣೆಗಳನ್ನು ಬರೆದ ದೊಡ್ಡರಂಗೇಗೌಡರು ಅತ್ಯುತ್ತಮ ಗೀತ ರಚನಕಾರರೆಂದು ನಾಲ್ಕು ಬಾರಿ ಪ್ರಶಸ್ತಿ ಗಳಿಸಿದ್ದಾರೆ.ಹೊಸ ಗಾಯಕರಿಗೆ, ಗೀತೆಗಳನ್ನು ಆಯ್ದು ಸಂಗ್ರಹಿಸುವವರಿಗೆ ಇಲ್ಲಿ ಹಲವಾರು ಗೀತೆಗಳು ಲಭ್ಯವಿವೆ. ಪುಟ್ಟ ಪುಟ್ಟ ಚುಟುಕಗಳೂ ಮನಸೆಳೆಯುತ್ತವೆ. ಆದರೆ – ಈ ಸಂಕಲನದಲ್ಲಿನ ಗೀತೆಗಳನ್ನು ಆಯ್ಕೆ ಮಾಡುವ ಭರದಲ್ಲಿ ಒಂದಲ್ಲ, ಎರಡಲ್ಲ, ಒಂಬತ್ತು ಕವಿತೆಗಳು ಎರಡೆರಡು ಬಾರಿ ಬೇರೆ ಬೇರೆ ಪುಟಗಳಲ್ಲಿ ನುಸುಳಿರುವುದನ್ನು ಕವಿಯಾಗಲೀ ಪ್ರಕಾಶಕರಾಗಲೀ ಗಮನಿಸದೆ ಇರುವುದು ಮಾತ್ರ ವಿಷಾದವೆನಿಸುತ್ತದೆ.

Related Books