ಇಂತೀ ನಿನ್ನ ಮೈನಾ

Author : ಮಹಿಪಾಲರೆಡ್ಡಿ ಮುನ್ನೂರು

Pages 100

₹ 125.00




Year of Publication: 2022
Published by: ರಾಷ್ಟ್ರಕೂಟ ಪುಸ್ತಕ ಮನೆ
Address: ಸೇಡಂ
Phone: 8431424798

Synopsys

ಲೇಖಕ ಮಹಿಪಾಲರೆಡ್ಡಿ ಮುನ್ನೂರು ಅವರ 45 ನೆಯ ಕೃತಿ ಇಂತೀ ನಿನ್ನ ಮೈನಾ. ಕನ್ನಡ ಸಾಹಿತ್ಯ ಲೋಕದಲ್ಲೆ ತಾಂಕಾ ಸಂಕಲನ ಇದೇ ಮೊದಲ ಪ್ರಕಟಣೆ.ತಾಂಕಾ ಇದೊಂದು ಜಪಾನಿ‌ ಮೂಲದ ಕಾವ್ಯವಾಗಿದ್ದು. ಕನ್ನಡದಲ್ಲಿ‌ ಇದೊಂದು ಹೊಸ ಪ್ರಯೋಗ. ಕನ್ನಡ ಪ್ರಸಿದ್ಧ ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಬೆನ್ನುಡಿ ಈ‌ ಕೃತಿಗೆ ಚೆಂಬಳಕು ಸುರಿದಿದೆ. ಮುನ್ನುಡಿಯ ಒಳ ಸುಳಿಯನ್ನು ಉಡುಪಿಯ ಜಯದೇವ ಪ್ರಸಾದ ಮೊಳೆಯಾರ ಅವರು ಕಟ್ಟಿಕೊಟ್ಟಿದ್ದಾರೆ. ಪ್ರಕಾಶನದ ಪರವಾಗಿ ರತ್ನಕಲಾ ಮಹಿಪಾಲರೆಡ್ಡಿ ಅವರು ಪ್ರಕಟಣೆಯ ಮಾತುಗಳನ್ನು ನೀಡಿದ್ದಾರೆ.

About the Author

ಮಹಿಪಾಲರೆಡ್ಡಿ ಮುನ್ನೂರು
(18 November 1971)

ಕವಿ, ಕತೆಗಾರ ಮಹಿಪಾಲರೆಡ್ಡಿ ಮುನ್ನೂರು ಅವರು ಸೇಡಂನಲ್ಲಿ 1971ರ ನವೆಂಬರ್‌ 18 ರಂದು ಜನಿಸಿದರು. ಸಾಹಿತ್ಯ, ನಾಟಕ, ಪತ್ರಿಕೋದ್ಯಮ, ಸಿನಿಮಾ, ಚಿತ್ರಕಲೆ ಅವರ ಆಸಕ್ತಿಯ ಕ್ಷೇತ್ರ. ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಐದು ಅಂಕಣ ಬರಹಗಳ ಸಂಕಲನ, 3 ಮಾಧ್ಯಮ ಸಂಬಂಧಿತ ಕೃತಿಗಳು, ಒಂದು ನಾಟಕ, ಒಂದು ಮಕ್ಕಳ ಕವನ ಸಂಕಲನ, ಎರಡು ಚರಿತ್ರೆ, 6 ಸಂಪಾದನೆ ಸೇರಿದಂತೆ 37 ಪುಸ್ತಕಗಳ ಪ್ರಕಟವಾಗಿವೆ. ‘ಲಕ್ಕಿ ನಂಬರ್, ಸಾಕ್ಷಿಕಲ್ಲು, ಜೋಕುಮಾರಸ್ವಾಮಿ, ಅಳಿಯ ದೇವರು, ಸಾಹೇಬರು ಬರುತ್ತಾರೆ’ ಮುಂತಾದ ನಾಟಕಗಳಲ್ಲಿ, ಮೂರು ಧಾರಾವಾಹಿಗಳಲ್ಲಿ , ಐದು ಸಿನಿಮಾ ಗಳಲ್ಲಿ, ದೂರದರ್ಶನ ನಾಟಕಗಳಲ್ಲಿ ಹಾಗೂ ...

READ MORE

Related Books