ಶಹನಾಯ್

Author : ಆರ್.ಜಿ. ಹಳ್ಳಿ ನಾಗರಾಜ್

Pages 88

₹ 50.00
Year of Publication: 2013
Published by: ಚಾರುಮತಿ ಪ್ರಕಾಶನ
Address: #224, 4ನೇ ಮುಖ್ಯರಸ್ತೆ, 3ನೇ ತಿರುವು, ಚಾಮರಾಜಪೇಟೆ, ಬೆಂಗಳೂರು- 560018
Phone: 080-26615510

Synopsys

ಶಹನಾಯ್ ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಅವರ ಕವನ ಸಂಕಲನ. ಸಂಘಟಕ, ಹೋರಾಟಗಾರ, ಪತ್ರಕರ್ತ, ಸಂಪಾದಕ, ಪ್ರಕಾಶಕ, ಬರಹಗಾರ ಮುಂತಾದ ಹಲವು ಅವತಾರಗಳಲ್ಲಿ ಕಾಣಿಸಿಕೊಂಡರೂ ಕವಿಯಾಗಿ ನೆಲೆ ಕಂಡುಕೊಂಡಿರುವ ಆರ್. ಜಿ. ಹಳ್ಳಿ ನಾಗರಾಜರ ನಾಲ್ಕನೇ ಕವನ ಸಂಕಲನವಿದು. ತನ್ನ ಕಾವ್ಯಪ್ರೀತಿ ಮತ್ತು ಕಾವ್ಯಶಕ್ತಿಯನ್ನು ತೀವ್ರವಾಗಿ ಪ್ರಕಟಪಡಿಸಿರುವ ಇಪ್ಪತ್ತೈದು ಕವಿತೆಗಳ ಕಟ್ಟು ‘ಶಹನಾಯ್’. ನಾಗರಾಜರ ಕವಿತೆಗಳು ಅವಸರದ ಸೃಷ್ಟಿಗಳಲ್ಲ. ಸಹೃದಯರೊಂದಿಗಿನ ಅರ್ಥಪೂರ್ಣ ಸಂವಹನಕ್ಕೆ ಭಾವತರಂಗವೊಂದನ್ನು, ಅನುಭವದ ಅನುರಣನವೊಂದನ್ನು ಅಣಿಗೊಳಿಸುವುದಕ್ಕೆ ಮತ್ತೆಮತ್ತೆ ತಿದ್ದಿ ತೀಡುವ ಶ್ರಮವನ್ನು ಅವರು ತೆಗೆದುಕೊಂಡಿದ್ದಾರೆ.

ಇಲ್ಲಿರುವ ‘ಶಹನಾಯ್’ ಎಂಬ ಕವಿತೆ ಉಸ್ತಾದ್ ಬಿಸ್ಮಿಲ್ಲಾ ಖಾನರ ಶಹನಾಯ್ ವಾದನದ ನಾದದ ರಸಪೂರ್ಣ ವರ್ಣನೆಗೆ ಮತ್ತು ಇಳಿವಯಸ್ಸಿನಲ್ಲೂ ಚಿಮ್ಮುತ್ತಿದ್ದ ಅವರ ಜೀವನಪ್ರೀತಿ, ಉತ್ಸಾಹಗಳ ಬಣ್ಣನೆಗಷ್ಟೆ ಸೀಮಿತವಾಗುವುದಿಲ್ಲ; ಅದು ‘ಮುದುಡಿದೆ ಬಿಸ್ಮಿಲ್ಲಾ ಶಹನಾಯಿ’ಯಲ್ಲಿ ಭಾರತೀಯ ಸಂಸ್ಕೃತಿಯ ಹಿರಿಮೆಯ ಸಂಕೇತವಾಗಿರುವ ತಬಲಾ ಮಾಂತ್ರಿಕ ಝಕೀರ್ ಹುಸೇನ್, ಬಾನ್ಸುರಿ ಮೋಡಿಕಾರ ಪ್ರವೀಣ್ ಗೋಡ್ಖಿಂಡಿಯರ ಸಂಗೀತ ಸಾಧನೆಯನ್ನು ಬಿಸ್ಮಿಲ್ಲಾರ ಶಹನಾಯ್ ಸೃಷ್ಟಿಸಿದ ಬೆರಗಿನೊಂದಿಗೆ ಬೆಸೆಯುತ್ತದೆ.

About the Author

ಆರ್.ಜಿ. ಹಳ್ಳಿ ನಾಗರಾಜ್

ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ರೈತ ಕುಟುಂಬದಲ್ಲಿ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಎಂಬತ್ತರ ದಶಕ ಬಂಡಾಯದ ಕಾಲಘಟ್ಟದ್ದು, ಹೊಸ ಚಿಂತನೆಯ ಬೆಳೆಗೆ, ಸಾಮಾಜಿಕ ಬದಲಾವಣೆಗೆ ನೆಲವೂ ಹದವಾಗಿತ್ತು, ಆರ್ ಜಿ ಹಳ್ಳಿ ನಾಗರಾಜ ಇದರಲ್ಲಿ ಪ್ರಮುಖರಲ್ಲದಿದ್ದರೂ ಬೆಳೆಯುತ್ತಿದ್ದ ಸಸಿ. ವಿದ್ಯಾರ್ಥಿ ದೆಸೆಯ ಆ ದಿನಗಳಲ್ಲಿ ಪ್ರಗತಿಪರ ವಿಚಾರಗಳಿಗೆ ತೆರೆದುಕೊಂಡು ಭಾಷಾ ಚಳವಳಿ, ರೈತಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ವಚನ ಸಾಹಿತ್ಯ, ಸಮಾಜವಾದಿ ಚಿಂತನೆ, ಪೆರಿಯಾರ್, ಕುವೆಂಪು, ಎಚೈನ್ ವೈಚಾರಿಕತೆಯಲ್ಲಿನ ಬೆಳೆಕೊಯ್ಲಿನಲ್ಲಿ ಪ್ರಶ್ನಿಸುವ ಮೂಲಕ ಕಂಡುಕೊಂಡದ್ದು ಸ್ವತಂತ್ರ ದಾರಿ, ಕಾನೂನು, ಪತ್ರಿಕೋದ್ಯಮ ...

READ MORE

Related Books