ಹುಚ್ಚ-ಹುಚ್ಚಿ

Author : ಜೀವಿ (ಜಿ.ವಿ. ಕುಲಕರ್ಣಿ)

Pages 144

₹ 180.00




Year of Publication: 2014
Published by: ಕಾವ್ಯಧಾರಾ ಪ್ರಕಾಶನ
Address: ಧಾರವಾಡ

Synopsys

ಹುಚ್ಚ-ಹುಚ್ಚಿ ಹಿರಿಯ ಸಾಹಿತಿ ಜೀವಿ ಕುಲಕರ್ಣಿ ಅವರ ಪ್ರಣಯ ಗೀತೆಗಳ ಸಂಕಲನ. ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದ ಈ ಸಂಕಲನ ಜೀವಿ ಅವರಿಗೂ ಸಾಕಷ್ಟು ಹೆಸರು ತಂದು ಕೊಟ್ಟಿದ್ದು, ಈ ಕೃತಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದ ಸದಾಶಿವ ಒಡೆಯರು ಮೈಸೂರು ಮಲ್ಲಿಗೆಯ ನಂತರ ಬಂದ ಅತ್ಯುತ್ತಮ ಪ್ರಣಯಗೀತೆ ಸಂಕಲನವಿದು ಎಂದಿದ್ದರು. ಮನೋಹರ ಗ್ರಂಥಮಾಲೆ ಪ್ರಕಟಿಸಿದ್ದ ಈ ಕೃತಿಯನ್ನು ಮೂರನೇ ಮುದ್ರಣಕ್ಕೆ ಧಾರವಾಡದ ಕಾವ್ಯಧಾರಾ ಪ್ರಕಾಶನ ಪ್ರಕಟಿಸಿದೆ.

About the Author

ಜೀವಿ (ಜಿ.ವಿ. ಕುಲಕರ್ಣಿ)
(10 June 1937)

  ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ...

READ MORE

Related Books