ಕರುಳ ಬಳ್ಳಿ ಮತ್ತು ಜೀವಕಾರುಣ್ಯ

Author : ಶಿವಶಂಕರ ಸೀಗೆಹಟ್ಟಿ

Pages 90

₹ 90.00




Year of Publication: 2020
Published by: ಕಾಜಾಣ ಪುಸ್ತಕ
Address: #216, 5ನೇ ಮುಖ್ಯರಸ್ತೆ, ಕೆನರಾ ಬ್ಯಾಂಕ್ ಲೇಔಟ್, ಕೊಡಿಗೆಹಳ್ಳಿ, ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು- 560097
Phone: 9483793275

Synopsys

‘ಕರುಳ ಬಳ್ಳಿ ಮತ್ತು ಜೀವಕಾರುಣ್ಯ’ ಕವಿ ಶಿವಶಂಕರ ಸೀಗೆಹಟ್ಟಿ ಅವರ ಕವನ ಸಂಕಲನ. ಕವಿತೆಗಳನ್ನು ಬರೆಯುವುದು ಒತ್ತಟ್ಟಿಗಿರಲಿ ಅಕ್ಷರ ರೂಪಗಳು ನನ್ನೆದೆಯಾಳಕ್ಕೆ ದಕ್ಕದೇ ಹೋಗಿದ್ದರೆ ನನ್ನ ಸಂಕಟ,ಸಮಾಧಾನಗಳನ್ನು ಹೇಗೆ ಎದುರುಗೊಳ್ಳಬಹುದಿತ್ತು ಎಂಬ ಪ್ರಶ್ನೆಯನ್ನು ಎದೆಯ ಕೋಲಿಯೊಳಗೆ ಹಾಕಿಕೊಂಡಾಗಲೆಲ್ಲಾ ನನ್ನೊಳಗೆ ಒಮ್ಮೊಮ್ಮೆ ದಿಗಿಲಾಗುತ್ತದೆ.  ಕವಿತೆ ತಮ್ಮೆಲ್ಲಾ ಸಂಕಟ ಸಮಾಧಾನಗಳ ಭಾಷೆ ಎನ್ನುವ ಅವರು ‘ಏಕಾಂತಕ್ಕೆ ಜೊತೆಯಾದ ಪುಸ್ತಕ ಸಾಂಗತ್ಯ ನನ್ನೊಳಗೆ ತಲ್ಲಣಗಳನ್ನು ಸೃಷ್ಟಿ ಮಾಡುತ್ತಲೇ ಬರೆಯಬೇಕೆಂಬ ತುಡಿತವನ್ನು ಹರವಿ ಬರೆಯುವ ಧಾವಂತಕ್ಕಿಳಿಸಿತು’ ಎನ್ನುತ್ತಾರೆ ಕವಿ ಶಿವಶಂಕರ ಸಿಗೇಹಟ್ಟಿ.

ಈ ಸಂಕಲನದಲ್ಲಿ ನಾಳೆಗೂ ಉಳಿವ ಬೆಳಕು, ಅವ್ವ ಪದವಾಗಿದ್ದಾಳೆ, ಗೊಬ್ಬರದ ಕಾಯ, ಗರ್ಭ ಕಟ್ಟಿವೆ ಶಾಂತಿಯ ಪಾರಿವಾಳಗಳು, ವಿಕ್ಷಿಪ್ತ, ಮತ್ತೆ ಹಂಸಗಳು ಮಾತಿಗಿಳಿದಿವೆ, ಬುದ್ಧ ಘಂಟೆಯ ಸದ್ದು, ನಾಭಿಯಾಳದ ನಾದ, ಅನಾದಿಯ ಅನಾತ್ಮ ಕಥನ, ಕರುಳ ಬಳ್ಳಿ ಮತ್ತು ಜೀವ ಕಾರುಣ್ಯ, ಸುಳ್ಳಿನ ಬಲೂನು, ರೈತಗಾಥೆ, ಬೆವರಿನ ಕಾಯ ಮತ್ತು ಜೀವದ್ರವ್ಯ, ಅಲೆಮಾರಿ ಆತ್ಮಗಳ ಅನಾಮಿಕ ಯಾತ್ರೆ, ನನ್ನೊಳಗೊಬ್ಬ ಮಾಂತ್ರಿಕ, ಕಲ್ಯಾಣದ ಪ್ರಣತೆ, ಮರವಾಗುವ ಬಯಕೆ, ನೆಲಗುದಿಯ ಜೀವ ಮೌನ, ಮಂಜಿನೊಳಗಣ ಕೆಂಡ, ಸೂತಕದಾಚೆಯ ತೇವ, ಲೋಕ ಸಂಕಟಕ್ಕೆ ಬೇಲಿಗಳಿಲ್ಲ, ತಥಾಗತನ ತಲ್ಲಣ, ಸಿರಿಯಾ, ಲಾಂಗ್ ಮಾರ್ಚ್, ನೋಡಿ ಬಾಬಾ ಇಲ್ಲಿ ಈಗಲೂ ಹೀಗೆ, ಮಹಾತ್ಮರ ನಾಡಿನಲ್ಲಿ, ನೆನೆಯಬೇಕಾದ ಮುಖಗಳೇಕೊ ನೆಪ್ಪಾಗುತ್ತಿಲ್ಲ, ಬರಿಗಾಲಿನ ಭಾರತ, ಉರಿವ ಬತ್ತಿಯ ಧ್ಯಾನ, ಅರಿವಿನ ದೀಪ, ಜಿಲೇಬಿ ಅಜ್ಜಿ, ನಾನೊಂದು ಮಗು, ಧ್ಯಾನಕ್ಕೆ ಮಾತಿನ ಹಂಗಿಲ್ಲ, ಏಕಾಂತದ ಮಾತು, ಹುಲಿಗಳಿಗೂ ಸಸ್ಯಾಹಾರದ ಗೀಳಿಗೆ ಬೀಳಿಸಲಾಗಿದೆ, ಕಾಲವೇ ಸವೆಸಿದ ಕಾಲುಹಾದಿ, ಗೋಡೆಗಳು ನಾಳೆಗೆ ಇಲ್ಲವಾಗುತ್ತವೆ. ಮನದೊಳಗಣ ವ್ಯಾಧಿ, ಬೆಳಕಿನ ಸಂತ, ದೇವರೇ ನಿನ್ನ ವಕ್ತಾರನೊಬ್ಬನ ಕಳಿಸಿಕೊಡು, ಆಸ್ಥಾನ ಕವಿ ಎಂಬ 41 ಕವಿತೆಗಳು ಸಂಕಲನಗೊಂಡಿವೆ.

About the Author

ಶಿವಶಂಕರ ಸೀಗೆಹಟ್ಟಿ

ಕವಿ ಶಿವಶಂಕರ ಸೀಗೆಹಟ್ಟಿ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೀಗೆಹಟ್ಟಿಯವರು. ತಂದೆ- ರಂಗಸ್ವಾಮಿ, ತಾಯಿ ಗೀತಮ್ಮ. ಕುವೆಂಪು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾಕೋತ್ತರ ಪದವೀಧರರು. ಪ್ರಸ್ತುತ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತೋಳದಕೆರೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು. ‘ಕರುಳ ಬಳ್ಳಿ ಮತ್ತು ಜೀವಕಾರುಣ್ಯ’ಎಂಬುದು ಇವರ ಚೊಚ್ಚಲ ಕವನ ಸಂಕಲನ. ವಿವಿಧ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ... ...

READ MORE

Related Books