ಬಯಲ ಧ್ಯಾನ

Author : ಸುಧಾ ಚಿದಾನಂದಗೌಡ

Pages 100

₹ 125.00
Year of Publication: 2014
Published by: ಸುಯೋಧನ ಪ್ರಕಾಶನ
Address: ಹಗರಿಬೊಮ್ಮನಹಳ್ಳಿ- 583212, ಬಳ್ಳಾರಿ ಜಿಲ್ಲೆ
Phone: 8397238628

Synopsys

`ಬಯಲ ಧ್ಯಾನ’ ಕೃತಿಯು ಸುಧಾ ಚಿದಾನಂದಗೌಡ ಅವರ ಕವನಸಂಕಲನವಾಗಿದೆ. ಈ ಸಂಕಲನದ ಕವಿತೆಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಿ ಕೊಡಲಾಗಿದೆ. ನನ್ನೊಳಗಿನ ಗುಲಾಮಳಿಗೆ, 'ದೇಹಭಾಷೆ', 'ಬಯಲಧ್ಯಾನ' ಎಂಬ ಮೂರು ಭಾಗಗಳಲ್ಲಿ ಕವಿತೆಗಳು ಪ್ರಕಟವಾಗಿವೆ. ಈ ವಿಂಗಡಣೆ ಕುತೂಹಲಕರವಾಗಿದೆ. ಜೊತೆಗೆ ಈ ವಿಂಗಡಣೆ ಏನೇ ಇದ್ದರೂ ಇವೆಲ್ಲವೂ ಅಲ್ಲಲ್ಲಿ ಮನಸ್ಸಿನ ಧ್ಯಾನವಾಗಿ ಬಂದಿವೆ. ದೇಟು, ದಳ, ಕೇಸರ, ಬಣ್ಣ ಗಳಷ್ಟೇ ಹೂವಾಗಿ ಬಿಡುವುದಿಲ್ಲ. ಪರಿಮಳ, ಕೋಮಲಾದ್ರ್ರತೆಯ ಮುಗುದೆ/ ಗಡಿಮುಟ್ಟದೆ ಗದ್ಯಂತರವಿಲ್ಲ (ಒಂದು ಹೂವಿನ ಸಾನೆಟ್), ಒಂಟಿ ಹೂವ ಕೆನ್ನೆಪಕಳೆ ಒದ್ದೆ/ ಕಂಬನಿಯ ಹಿಮಬಿಂದುವಿನ ಹೊಳಪು ಅಪಾರ (ಹಿಮಗೆನ್ನೆ)- ಹೀಗೆ ರಮ್ಯವಾಗಿ ತಮ್ಮ ಒಳಗಿನ ಧ್ಯಾನದ ಚಿತ್ರಗಳನ್ನು ಕೊಡುತ್ತ ಹೋಗುತ್ತಾರೆ. ಹೀಗಾಗಿ ಮೊದಲ ಭಾಗದ ರಚನೆಗಳು ಹೆಣ್ಣೂಬ್ಬಳು ತನ್ನ ಅಂತರಂಗದ ಹಾಗೂ ಇಹದ ಸಂಗತಿಗಳಿಗೆ ಧ್ವನಿ ನೀಡಲು ಮಾಡಿದ ಪ್ರಯತ್ನಗಳಾಗಿವೆ. ಈ ಭಾಗದಲ್ಲೇ ಇರುವ 'ವಾಸ್ತವ' ಎಂಬ ಕವಿತೆ ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ಅದರ ವಂಚನೆ, ದ್ವೇಷ, ಅಸಮಾನತೆಯ ಮುಖವನ್ನು ಪ್ರಾಮಾಣಿಕವಾಗಿ ಹಿಡಿಯಲು ಪ್ರಯತ್ನಿಸುತ್ತದೆ. ಇಂಥ ಪುಟ್ಟ ಕವಿತೆಗಳಲ್ಲಿ ಸುಧಾ ಅವರು ತೋರುವ ಕಲೆಗಾರಿಕೆ ಅವರ ದೀರ್ಘ ಕವಿತೆಗಳಲ್ಲಿ ಕಾಣುವುದಿಲ್ಲ ಮತ್ತು ಅವುಗಳ ನೀಳ ಆಕಾರವಷ್ಟೆ ಅವುಗಳ ಮುಖ್ಯ ಲಕ್ಷಣವಾಗಿದೆ.

About the Author

ಸುಧಾ ಚಿದಾನಂದಗೌಡ

ಸುಧಾ ಚಿದಾನಂದಗೌಡ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿಯವರು . ಕಾವ್ಯ, ಕಥಾ ಪ್ರಕಾರಗಳಲ್ಲಿ ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಿರುವ ಅವರು ಅವಧಿ, ಕೆಂಡಸಂಪಿಗೆ ಹಾಗೂ ಪ್ರಜಾವಾಣಿ ಪತ್ರಿಕೆಗಳಿಗೆ ಕವನ ಹಾಗೂ ಕೃತಿಯ ಕುರಿತ ವಿಮರ್ಶೆಗಳನ್ನು ಬರೆಯುತ್ತಾರೆ. ಕೃತಿಗಳು: ಬಯಲ ಧ್ಯಾನ, ಪ್ರಿಯಸಖೀ... ಪಾತರಗಿತ್ತೀ, ಬದುಕು ಪ್ರಿಯವಾಗುವ ಬಗೆ ...

READ MORE

Related Books