ಬಹುರೂಪಿ- ಕಾವ್ಯಾಭಿನಯ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 94

₹ 60.00




Year of Publication: 2003
Published by: ನಿರಂತರ ಪ್ರಕಾಶನ
Address: ಕಾಂತರಾಜ ಅರಸ್ ರಸ್ತೆ, ಸರಸ್ವತಿಪುರಂ, ಮೈಸೂರು-9

Synopsys

‘ಬಹುರೂಪಿ’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಂಪಾದಿಸಿರುವ ಸಾಮಾಜಿಕ ನ್ಯಾಯ ಕುರಿತ ಕಾವ್ಯಾಭಿನಯ ಕೃತಿ. ಈ ಕೃತಿಗೆ ಪ್ರೊ. ಕಾಳೇಗೌಡ ನಾಗವಾರ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕನ್ನಡ ಕಾವ್ಯಪರಂಪರೆಯಲ್ಲಿ ಬಂದ ಸಾಮಾಜಿಕ ಹೊಣೆಗಾರಿಕೆಯ ಅರಿವುಳ್ಳ ಕವಿಗಳೆಲ್ಲರೂ ಬದುಕಿನಲ್ಲಿ ಅತ್ಯುತ್ತಮವಾದುದ್ದಕ್ಕೆ ತಮ್ಮನ್ನು ತೆತ್ತುಕೊಳ್ಳುವುದರ ಮೂಲಕವೇ ಜನ್ಮಸಾಫಲ್ಯ ಸಾಧ್ಯವೆಂದು ನಿರಂತರವಾಗಿ ಹಾರೈಸುತ್ತಾ ನೈತಿಕಧೈರ್ಯ ಮತ್ತು ಕಾವ್ಯರಚನೆಯ ಆನಂದವನ್ನು ಇಮ್ಮಡಿಗೊಳಿಸುತ್ತಲೇ ಸಾಗಿದ್ದಾರೆ, ಈ ಪಯಣದ ಪ್ರಮುಖ ಹೆಜ್ಜೆಗಳನ್ನು ಗಮನಿಸುವುದೆಂದರೆ, ನಮ್ಮ ಮನಸ್ಸಿನ ಸೂಕ್ಷ್ಮಜ್ಞತೆಯನ್ನು ಗಟ್ಟಿಯಾಗಿ ಕಾಯ್ದುಕೊಳ್ಳುವುದೇ ಆಗಿದೆ. ಹೀಗಾಗಿ ನಮ್ಮ ಪ್ರಮುಖ ಕವಿಗಳು ಸದಾ ಈ ಭೂಭಾಗದ ಹಾನಿಕಾರಕ ವಿಕಾರಗಳಾದ ವರ್ಗ, ವರ್ಣ, ಜಾತಿ ಅಸ್ಪೃಶ್ಯತೆ ಮತ್ತು ಲಿಂಗಭೇದನೀತಿಯ ಅಗಾಧ ಕುತಂತ್ರ ಹಾಗೂ ಕ್ರೌರ್ಯಗಳನ್ನು ಪರಿಣಾಮಕಾರಿಯಾಗಿ ನಿರಾಕರಿಸುತ್ತಲೇ ಬಂದಿದ್ದಾರೆ. ಈ ಬಗೆಯ ಸಂವೇದನಾಶೀಲ ಅಭಿವ್ಯಕ್ತಿಯ ಕೆಲವು ಮಾದರಿಗಳನ್ನು ಆಯ್ದು ರಂಗಮಾಧ್ಯಮದ ಮೂಲಕ ಜನತೆಗೆ ತಲುಪಿಸಲು ಅನುಕೂಲವಾಗುವಂತೆ ಕವಿಮಿತ್ರರಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಪಾರ ಶ್ರಮದಿಂದ ಈ ಬಹುರೂಪಿ ಕಾವ್ಯ ಸಂಕಲನವನ್ನು ಸಿದ್ಧಪಡಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ ಪ್ರೊ. ಕಾಳೇಗೌಡ ನಾಗವಾರ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books