ಲಿವಿಂಗ್ ಟುಗೆದರ್

Author : ವೀಣಾ ಬನ್ನಂಜೆ

₹ 150.00
Year of Publication: 2022
Published by: ಯಾಜಿ ಪ್ರಕಾಶನ

Synopsys

ವೀಣಾ ಬನ್ನಂಜೆ ಅವರ ಕವನ ಸಂಕಲನ ಲಿವಿಂಗ್ ಟುಗೆದರ್. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಒಟ್ಟು ಅರವತ್ತೆರಡು ಕಾವ್ಯ ಕುಸುಮಗಳು ಈ ಸಂಕಲನದಲ್ಲಿ ಬಹುತೇಕ ಎಲ್ಲವೂ ಅಭಿಧಾವೃತ್ತಿಯ ಸಂರಚನೆಗಳೇ ಆಗಿದ್ದಾವೆ.ಒಗಟಾಗಿ ಹೇಳುವ ಕ್ಲೇಶಪಂಥವಲ್ಲ ವೀಣಾರದ್ದು. ನೇರ ನೇರ ನುಡಿಗಳಲ್ಲಿ ಭಾವವನ್ನು ಬಿಂಬಿಸುವ ಸಂವಹಿಸುವ ಶಬ್ದಕಲೆ ಇವರಲ್ಲಿ ಸಹಜಸಿದ್ದಿಯಂತೆ ಮೆಯ್ದರಿದಿದೆ. ಹಾಗಾಗಿ ಅಲಂಕಾರಗಳ ಅಹಾರ್ಯಾಕರ್ಷಣೆಯ ಅಸಹಜತೆ ಅಟಕಾಯಿಸುವುದಿಲ್ಲ. ಕೆಲವು ರಚನೆಗಳು ಅಂದಂದಿನ ದಿನಮಾನಗಳ ಘಟನೆಗಳ ಪ್ರತಿಕ್ರಿಯಾತ್ಮಕವಾದ ಸಾಭಿಪ್ರಾಯಮಂಡನೆ ಎಂಬುದಾಗಿ ಹೇಳಿದ್ದಾರೆ.

About the Author

ವೀಣಾ ಬನ್ನಂಜೆ

ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ. ...

READ MORE

Related Books