ಸೆರಗ ನೂಲಿನ ಕಾವು

Author : ಗೌರಿ ಪಾಟೀಲ

Pages 87

₹ 80.00
Year of Publication: 2018
Published by: ಕಾವ್ಯ ಮಿತ್ರ ಪ್ರಕಾಶನ
Address: 31/482 ಸದಾನಂದ ಕಾಲೋನಿ ಬಸವಕಲ್ಯಾಣ, ಬೀದರ್, ಕರ್ನಾಟಕ- 585327
Phone: 9738482040

Synopsys

‘ಸೆರಗ ನೂಲಿನ ಕಾವು’ ಕವಿ ಗೌರಿ ಪಾಟೀಲ್ ಅವರ ಕವನ ಸಂಕಲನ. ಪಾತ್ರಗಳ ರೂಪಕ್ಕೆ ಕಾವ್ಯದ ಮೂಲಕ ಬಣ್ಣ ಲೇಪಿಸುವ ಕಲೆ ಕರಗತ ಮಾಡಿಕೊಂಡ ಗೌರಿ ಪಾಟೀಲ್, ಅನುಭಾವ ಪರಂಪರೆಯನ್ನುವಂತಾಗಿದೆ ಜೀವ ಪರವಾದ ಕಾವ್ಯ. ಹಾಗಾಗಿ ಅವರೊಳಗಿನ ನೂಲಿನ ಎಳೆಯ ಬಿಸಿಯುಸಿರು ಕಾವ್ಯದ ಮೂಲಕ ಸೆರಗು ಸುತ್ತಿಕೊಂಡು ಬಂದಿದೆ "ಸೆರಗ ನೂಲಿನ ಕಾವು". ಬಹು ರೂಪಿ ಬದುಕಿನ ಅವಮಾನ ಅನುಮಾನದ ಪೆಟ್ಟುಗಳೇ ನೈಜ ಮತ್ತು ನಿಜವಾದ ಪ್ರತಿಭೆ ಹುಟ್ಟಲು ಸಾಧ್ಯ. ಅದೇ ಮುಂದೊಂದು ದಿನ ಕಲೆ ಕಾವ್ಯ ಮಾತು ಹೋರಾಟವಾಗಲು ಕಾರಣವಾಗುತ್ತದೆ ಎಂದು ಹೇಳಲು ತಾಜಾ ಉದಾಹರಣೆ ಗೌರಿ ಪಾಟೀಲ್ ಅವರ ಸೆರಗ ನೂಲಿನ ಕಾವು' ಜೀವಂತ ಸಾಕ್ಷಿ ಎನ್ನುತ್ತಾರೆ ಕವಿ ಅಲ್ಲಗಿರಿರಾಜ್.

ಕವಿಯ ಅರ್ಧ ಶತಮಾನದ ಬದುಕು ಬವಣೆ ನೋವು ನಲಿವು ಆಟ ಪಾಠ ಅಲ್ಲಲ್ಲಿಯ ನೋಟ, ತಾಯಿ ಸೆರಗಿನ ನೂಲಿನ ಕಾವಾಗಿ ಹುಟ್ಟಲು ಮೂಲ ಪ್ರೇರಣೆಯಾಗಿದೆ. ಮಾನವೀಯತೆ ಎಂಬ ದೀಪ ಆರಿ ಹೋಗದಿರಲಿ ಎನ್ನುವ ಅವರ ಆಶಯದೊಳಗಿನ ಕಾಳಜಿ ಮತ್ತು ಸೀರೆಗೊಂದು ಸೆರಗು ಶರೀರದೊಳಗಿನ ಆತ್ಮವಿದ್ದಂತೆ ಎಂದು ಕವಿ ಹೇಳುತ್ತಾರೆ.

ಗೌರಿ ಪಾಟೀಲರ ಈ ನೆಲದ ಹಸಿ ಬಿಸಿ ಕಾವು ಕೂಡ ಜಗದ ಜೀವ ಪ್ರೀತಿ ಇದ್ದಂತೆ. ಹಳ್ಳಿ, ಬಾಲ್ಯ, ನಾಡು ನುಡಿ, ಕಾಡು, ಜೀವನಾಡಿ, ಜಾತ್ರೆ ತೇರು, ಮಳೆ ಮಗು, ನೀತಿ ರೀತಿ, ಮಂದಿರ, ಚಂದಿರ, ಮದುವೆ, ಕುರಿತು ಮನ ಮುಟ್ಟುವ ಕವಿತೆ ಬರೆದಿದ್ದು, ಕವಿಯು ಹೇಳುವಂತೆ 'ಮಾತು ಶೃತಿ ಮೌನ ಕೃತಿ'  ಎನ್ನುವಂತೆ ಮೌನ ದಿವ್ಯ ಕಾವ್ಯವಾಗಿ ಓದುಗರ ಮನ ಮನೆ ಮುಟ್ಟುತ್ತವೆ.

About the Author

ಗೌರಿ ಪಾಟೀಲ

ಕವಯತ್ರಿ ಗೌರಿ ಪಾಟೀಲರು ಕಲಬುರಗಿ ನಿವಾಸಿಗಳು. ಅನುಭಾವ ಪರಂಪರೆಯ ಮೂಲಕ ಜೀವ ಪರವಾದ ಕಾವ್ಯವನ್ನು ರಚಿಸುತ್ತಿರುವ ಗೌರಿ ಪಾಟೀಲರನ್ನು ಕಲಬುರಗಿ ಜಿಲ್ಲೆಯ ಆಳಂದದ ಸಮತಾ ಲೋಕ ಶಿಕ್ಷಣ ಸಮಿತಿ ಯು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.  ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ಮಹಿಳಾ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೃತಿಗಳು: "ಸೆರಗ ನೂಲಿನ ಕಾವು" (ಕವನ ಸಂಕಲನ) ಈ ಕೃತಿಗೆ ಕನ್ನಡನಾಡು ಪ್ರಕಾಶನದ ಕಲ್ಯಾಣ ಕರ್ನಾಟಕ ಪ್ರದೇಶದ ಸಾಹಿತಿಗಳ ಶ್ರೇಷ್ಠ ಸಾಹಿತ್ಯ ಕೃತಿಯೆಂದು, 2018 ಸಾಲಿನ ಪ್ರೊ.ಎಸ್.ಜಿ.ಮೇಳಕುಂದಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ರಾಜ್ಯ ಮಟ್ಟದ ಸಾರ್ವಜನಿಕ ...

READ MORE

Related Books