ಗಾಜುಗೋಳ

Author : ಎಚ್.ಎಲ್. ಪುಷ್ಪ

Pages 76

₹ 50.00
Year of Publication: 1999
Published by: ಶಕ್ತಿ ಮುದ್ರಣ ಮತ್ತು ಪ್ರಕಾಶನ
Address: #51, 10ನೇ ಅಡ್ಡರಸ್ತೆ, ಕೆ.ಬಿ. ದೇವಸ್ಥಾನ ರಸ್ತೆ, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
Phone: 0803441910

Synopsys

'ಗಾಜುಗೋಳ' ಎಚ್.ಎಲ್. ಪುಷ್ಪ ಅವರ ಎರಡನೇ ಕವನ ಸಂಕಲನ. ಸ್ವಗತ ಮಾದರಿಯ ಕವನಗಳಿವೆ. ತನ್ನೊಳಗಿನ ತಲ್ಲಣವನ್ನು ಅಕ್ಕಮಹಾದೇವಿ ಅಥವಾ ಅಲ್ಲಮನ ತಲ್ಲಣದ ಮಜಲಿನಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಪ್ರಾಮಾಣಿಕವೆನ್ನಿಸಿ, ಓದುಗನನ್ನು ಕವನದೊಳಕ್ಕೆ ಎಳೆದುಕೊಳ್ಳುತ್ತದೆ. ತನ್ನ ಅಭಿವ್ಯಕ್ತಿಗೆ ಬಳಸುವ ಅಂತ್ಯ ಪ್ರಾಸದಂತಹ ಪರಿಕರಗಳಿಂದ ಮೋಹಿತರಾಗದೇ ಅನುಭವದ ಸಾಚಾತನವನ್ನು ಮಾತಲ್ಲಿ ಹಿಡಿಯಬೇಕೆನ್ನುವ ಪುಷ್ಪ,ತಮ್ಮ ಕವನಗಳಲ್ಲಿ ಅಂತಹ ಪ್ರಯತ್ನ ಮಾಡಿದ್ದಾರೆ.

About the Author

ಎಚ್.ಎಲ್. ಪುಷ್ಪ
(18 September 1962)

ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್‌ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.  ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...

READ MORE

Related Books