ಉಯ್ಯಾಲೆ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 130

₹ 80.00




Year of Publication: 2008
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಉಯ್ಯಾಲೆ ಬೇಂದ್ರೆಯವರ ಸಾನೆಟ್‌ಗಳ ಸಂಗ್ರಹ. ಇಂಗ್ಲಿಷಿನ ೧೪ ಸಾಲುಗಳ ಪದ್ಯವನ್ನು ಸಾನೆಟ್‌ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಅವುಗಳನ್ನು ’ಸುನೀತ’ ಎಂದು ಕರೆಯಲಾಗುತ್ತದೆ. ಬೇಂದ್ರೆಯವರು ಅವನ್ನು ’ಅಷ್ಟಷಟ್ಪದಿ’ ಎಂದು ಕರೆದಿದ್ದಾರೆ. ಬೇಂದ್ರೆಯವರಿಗಿಂತ ಮೊದಲು ಕನ್ನಡದಲ್ಲಿ ಕವಿಶಿಷ್ಯ, ಗೋವಿಂದ ಪೈ, ಬಿ.ಎಂ.ಶ್ರೀ., ಪು.ತಿ.ನ., ಶ್ರೀನಿವಾಸರು ಸಾನೆಟ್‌ ಬರೆಯುವ ಪ್ರಯತ್ನ ಮಾಡಿದ್ದನ್ನು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ. ಉಯ್ಯಾಲೆಯ ಮೊದಲ ಭಾಗದಲ್ಲಿ ೩೧ ಅಷ್ಟಷಟ್ಪದಿಗಳಿವೆ. ಎರಡನೆಯ ಭಾಗದ ಕವಿತೆಗಳನ್ನು ಬೇಂದ್ರೆಯವರು ಸೀಸ ಪದ್ಯಗಳೆಂದು ಕರೆದಿದ್ದಾರೆ. ಈ ಭಾಗದಲ್ಲಿ ೨೩ ಸೀಸ ಪದ್ಯಗಳಿವೆ. ಇವು ’ಲಕ್ಷಣಬದ್ದವಾದ ಸಾಂಪ್ರದಾಯದ ಸೀಸ ಪದ್ಯಗಳಲ್ಲ’ ಎಂದಿರುವ ಬೇಂದ್ರೆಯವರು ಮೂಲಸೀಸ ಪದ್ಯವು ದ್ರಾವಿಡ ಮಾರ್ಗದ ಗಣವೃತ್ತವಾಗಿ ತೋರಿದರೆ ಬೇಂದ್ರೆಯವರದು ಮಾತೃಗಣಬದ್ಧವಾಗಿದೆ. ಈ ಕವಿತೆಗಳನ್ನೂ ಬೇಂದ್ರೆಯವರು ಸಾನೆಟ್‌ ಎಂದೇ ಕರೆದಿದ್ದಾರೆ. ಮೂರನೇಯ ’ಏರಿಳಿತ’ ಭಾಗದಲ್ಲಿ ೨೧ ಹಾಡುಗಳಿವೆ. ಎಲ್ಲವೂ ಹಾಡುಗಳಲ್ಲ. ಕೆಲವು ಸಾನೆಟ್‌ ಮಾದರಿಯ ಪದ್ಯಗಳೂ ಇವೆ. ನಾಲ್ಕನೆಯ ’ಕರುಳಿನ ವಚನಗಳು” ಭಾಗದಲ್ಲಿ ೨೯ ವಚನಗಳಿವೆ. ಇಂಗ್ಲೀಷಿನ ಫ್ರೀವರ್ಸ್‌ ಮಾದರಿಗೆ ಸರಿಹೊಂದುವಂತೆ ಸ್ವಚ್ಛಂದ ಗೀತಪ್ರಕಾರವನ್ನು ಬೇಂದ್ರೆಯವರು ಹುಟ್ಟುಹಾಕಿದ್ದಾರೆ. ೧೯೨೦-೨೧ರಲ್ಲಿ ’ನೋವಿನ ಬೆಲೆ’, ’ಹಿಗ್ಗಿನ ನೆಲೆ’ ಮೊದಲಾದ ರಚನೆಗಳ ಮೂಲಕ ವಚನಗಳ ಬರವಣಿಗೆಯನ್ನು ಆರಂಭಿಸಿದ ಬೇಂದ್ರೆಯವರು ೧೯೨೪ರಲ್ಲಿ ಕರುಳಿನ ವಚನಗಳನ್ನು ಪೂರ್ಣಗೊಳಿಸಿದ್ದರು. ನಂತರ ಅವು ೧೯೩೪ರಲ್ಲಿ ಜಯಕರ್ನಾಟಕ ಪತ್ರಿಕೆಯಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದವು. ೧೨ನೆಯ ಶತಮಾನದ ವಚನಗಳಿಗಿಂತ ತಮ್ಮ ವಚನಗಳು ಹೇಗೆ ಭಿನ್ನ ಎಂಬುದನ್ನು ಬೇಂದ್ರೆಯವರು ಹೀಗೆ ದಾಖಲಿಸಿದ್ದಾರೆ- “ಪ್ರಾಚೀನರ ವಚನಗಳು ಶುದ್ಧ ಪಾರಮಾರ್ತಿಕ ಸಾಧನೆಯ ಮಾರ್ಗದೊಳಗಿನವು. ಕರುಳಿನ ವಚನಗಳು ಲೌಖಿಕ ಭಾವದ ಪ್ರಕಟಣೆಗೆ ಬಳಸಿಕೊಂಡಂತಾಗಿವೆ’. ಈ ಸಂಕಲನದಲ್ಲಿ ಒಟ್ಟು ೧೦೦ ಕವಿತೆಗಳಿವೆ. ಕೊನೆಯಲ್ಲಿ ಅರ್ಥಕೋಶ ಮತ್ತು ಕವಿತೆಗಳ ಆಕಾರಾದಿ ನೀಡಲಾಗಿದೆ. ಈ ಸಂಕಲನವನ್ನು ತಮ್ಮ ಬಾಲ್ಯದ ಸ್ನೇಹಿತರಾದ ಶ್ರೀಧರ ಖಾನೋಳಕರ ಅವರಿಗೆ ಅರ್ಪಿಸಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books