ಹೇಳಲೇಬೇಕಾದ್ದು ಇನ್ನೂ ಇದೆ

Author : ಮಲ್ಲಿಕಾರ್ಜುನಗೌಡ ತೂಲಹಳ್ಳಿ

Pages 148

₹ 100.00
Year of Publication: 2020
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ - 577201
Phone: 9480524572

Synopsys

ಪ್ರೀತಿಯ ಅಡಿಪಾಯದಂತಿರುವ ಈ ಕವಿತೆಗಳು ಬದುಕಿನ ನಂಬುಗೆ, ವಿರಹ, ಆಸೆ, ದುಃಖದ ಮೇಲೂ ತೇಲುತ್ತದೆ. ಈ ಪ್ರೀತಿಯ ಕವಿತೆಗಳು ಯುವ ಪ್ರೇಮಕ್ಕೆ ಮಾತ್ರ ಸೀಮಿತವಾಗೇ ದಾಂಪತ್ಯದ ಲಾಲಿತ್ಯ, ಮುನಿಸುಗಳ ಮಿಳಿತವಾಗಿವೆ. ಈ ಪ್ರೇಮವೆಂಬುದು ಕೊನೆಯಿಲ್ಲದ ಹುಚ್ಚು. ಅವಿರತ ಹುಡುಕಾಟ. ಮಗ್ಗ, ನೂಲುಗಳ ಜೊತೆಗೆ ನಿತ್ಯವಿರುವ ನೇಕಾರನ ಇನ್ನೂ ನೇಯಬೇಕಿರುವ ಹೊಸ ಬಟ್ಟೆಯ ಸುಂದರ ಕನಸು. ಇಲ್ಲಿ ಕನಸಿನ ಬೀಜಗಳ ಮೊಳೆಸುವ ಬೆಚ್ಚನೆಯ ಕಾವಿದೆ. ಎಳೆ ಚಿಗುರಿನ ಜೀವನೋತ್ಸಾಹವಿದೆ. ಬರುಬರುತ್ತ ನಂಬಿಕೆ ಗಾಢವಾದಾಗ ಅಪನಂಬಿಕೆಯ ಬಿರುಕು ಮೂಡಿ, ಏಕಾಂತದ ಒದ್ದಾಟಗಳಿವೆ. ಇವೆಲ್ಲಕ್ಕೂ ಕೊಟ್ಟುಕೊಳ್ಳುತ್ತಲೇ ಇವುಗಳನ್ನು ಮೀರುವ ಬದುಕಿನ ಅಧ್ಯಾತ್ಮವಿದೆ. ಇಹ ಮೀರಿದಂತಾದರೂ ಮತ್ತೆ ಇಲ್ಲಿಗೇ ಬಂದು ಆ ಪ್ರೇಮದ ವಿಳಾಸವನ್ನು ಮತ್ತೆ ಮತ್ತೆ ಹುಡುಕುವ ಅಲೆದಾಟವಿದೆ. ಹೇಳುವುದು ಮುಗಿಯುವುದಿಲ್ಲ ಹಾಗಾಗಿ ‘ಹೇಳಲೇಬೇಕಾದದ್ದು ಇನ್ನೂ ಇದೆ’ ಎನ್ನುತ್ತದೆ ಕವಿತಾ ಸಂಕಲನದ ಬಯಕೆ. ಈ ಕೃತಿಯ ಕರ್ತೃ ಮಲ್ಲಿಕಾರ್ಜುನ ಗೌಡ ತೂಲಹಳ್ಳಿ.

About the Author

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  'ಶರೀಫನ ಬೊಗಸೆ' ಮತ್ತು 'ತುಂಗಭದ್ರೆಯ ಪಾತ್ರದಲಿ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಕವಿತೆಗಳು ಕನ್ನಡ ಪ್ರಭ, ಅವಧಿ ಮುಂತಾದ ದಿನ ಪ್ರತಿಕೆಗಳಲ್ಲಿ ಪ್ರಕಟವಾಗಿವೆ. ...

READ MORE

Related Books