ನಿಷಿದ್ಧಾಕ್ಷರಿ

Author : ಗುರುಮೂರ್ತಿ ಪೆಂಡಕೂರು

Pages 102

₹ 150.00




Year of Publication: 2012
Published by: ಯುವಕರ ಸಂಘ
Address: ರಾಮನಗರ, ತಾ: ಹಗರಿಬೊಮ್ಮನಹಳ್ಳಿ-583212, ಜಿಲ್ಲೆ: ಬಳ್ಳಾರಿ
Phone: 9611213584

Synopsys

‘ನಿಷಿದ್ಧಾಕ್ಷರಿ’ ಕೃತಿಯು ಗುರುಮೂರ್ತಿ ಪೆಡಂಕೂರು ಅವರ ಕವನಸಂಕಲನವಾಗಿದೆ. ಹೆಣ್ಣಿನ ನೋವು ನಲಿವುಗಳನ್ನು ಧ್ವನಿಸುವ ಸಾಲುಗಳು ಈ ಕವನ ಸಂಕಲನದುದ್ದಕ್ಕೂ ಹರಿದುಬಂದಿವೆ. ಆಕೆ ತನ್ನ ಅಂತರಂಗದ ಎಲ್ಲ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟು ಸಂಸಾರದ ಕುಟುಂಬದ ಇತರರ ಏಳೆಗಾಗಿ ತ್ಯಾಗ ಮಾಡುತ್ತಾಳೆ. ಕಳೆದ ಸುದೀರ್ಘಕಾಲದ ಸಾಹಿತ್ಯಗಳನ್ನು ನೋಡಿದರೆ ಅಲ್ಲಿ ಹೆಣ್ಣಿನ ದೀನ, ಆರ್ತ, ಅಸಹಾಯ ಧ್ವನಿಗಳೇ ಕೇಳಿಸುತ್ತವೆ. ಆದರೆ ಪರಿಸ್ಥಿತಿಯು ಪಲ್ಲಟವಾಗುತ್ತದೆ. ಇಪ್ಪತ್ತು ಇಪ್ಪತ್ತೊಂದನೆಯ ಶತಮಾನದಲ್ಲಿನ ಮಹಿಳೆ ಸಮಾನತೆಗಾಗಿ ಸ್ವಾತಂತ್ರ್ಯಕ್ಕೆ ಹಂಬಲಿಸಿ ಮನೆಯ ಹೊಸ್ತಿಲನ್ನು ದಾಟಿದ್ದಾಳೆ. ಇಂಥ ಸೂಕ್ಷ್ಮ ಸಂವೇದನೆಗಳನ್ನು ಒಳಗೊಂಡ ಕವಿತೆಗಳು ಈ ಪುಸ್ತಕದಲ್ಲಿ ಸಂಕಲನಗೊಂಡಿವೆ. 

About the Author

ಗುರುಮೂರ್ತಿ ಪೆಂಡಕೂರು
(09 June 1938)

ಬರಹಗಾರ ಗುರುಮೂರ್ತಿ ಪೆಂಡಕೂರು ಅವರು ಜನಿಸಿದ್ದು 1938 ಜೂನ್ 9ರಂದು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಇವರು ಪ್ರವೃತ್ತಿಯಲ್ಲಿ ಬರಹಗಾರರು. ಸಾಹಿತ್ಯ ಪ್ರಿಯರಾಗಿದ್ದ ಇವರ ಹುಟ್ಟೂರು ಬಳ್ಳಾರಿ ಜಿಲ್ಲೆ ದೇವರಕೆರೆ. ತಾಯಿ ರಾಮಕ್ಕ, ತಂದೆ ವಿರೂಪಣ್ಣ. ಬಳ್ಳಾರಿಯಲ್ಲಿ ಪ್ರೌಢಶಾಲೆ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರವಾಸಿ ಪ್ರಿಯರಾಗಿರುವ ಇವರು ವಿಶ್ವದ ಹಲವಾರು ದೇಶಗಳನ್ನು ಸುತ್ತಿದ್ದಾರೆ.  ಗುರುಮೂರ್ತಿ ಅವರ ಪ್ರಮುಖ ಕೃತಿಗಳೆಂದರೆ ಬಹುರೂಪಿ ವಸುಂಧರಾ, ಆಂಧ್ರ ಪ್ರಪಂಚ, ಅಮರನಾಥ ಪ್ರವಾಸ, ಥಾಯ್‌ಲ್ಯಾಂಡ್-ಇಂಡೋನೇಷಿಯಾ ತಿರುಗಾಟ, ಓ ! ಕೆನಡಾ, ಅವಕಾಶಗಳ ...

READ MORE

Reviews

(ಹೊಸತು, ಜುಲೈ 2012, ಪುಸ್ತಕದ ಪರಿಚಯ)

ಹೆಣ್ಣಿನ ನೋವು ನಲಿವುಗಳನ್ನು ಧ್ವನಿಸುವ ಸಾಲುಗಳು ಈ ಕವನ ಸಂಕಲನದುದ್ದಕ್ಕೂ ಹರಿದುಬಂದಿವೆ. ಆಕೆ ತನ್ನ ಅಂತರಂಗದ ಎಲ್ಲ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟು ಸಂಸಾರದ ಕುಟುಂಬದ ಇತರರ ಏಳೆಗಾಗಿ ತ್ಯಾಗ ಮಾಡುತ್ತಾಳೆ. ಕಳೆದ ಸುದೀರ್ಘಕಾಲದ ಸಾಹಿತ್ಯಗಳನ್ನು ನೋಡಿದರೆ ಅಲ್ಲಿ ಹೆಣ್ಣಿನ ದೀನ, ಆರ್ತ, ಅಸಹಾಯ ಧ್ವನಿಗಳೇ ಕೇಳಿಸುತ್ತವೆ. ಆದರೆ ಪರಿಸ್ಥಿತಿಯು ಪಲ್ಲಟವಾಗುತ್ತದೆ. ಇಪ್ಪತ್ತು ಇಪ್ಪತ್ತೊಂದನೆಯ ಶತಮಾನದಲ್ಲಿನ ಮಹಿಳೆ ಸಮಾನತೆಗಾಗಿ ಸ್ವಾತಂತ್ರ್ಯಕ್ಕೆ ಹಂಬಲಿಸಿ ಮನೆಯ ಹೊಸ್ತಿಲನ್ನು ದಾಟಿದ್ದಾಳೆ. ಪ್ರತಿಭಟನೆ ಆಕೆಯ ಅಸ್ತ್ರ. ಉದ್ಯೋಗ ಅರಸಿ ಹೊರಬಂದು ಕಛೇರಿಗಳಲ್ಲೂ ಮನೆಯಲ್ಲೂ ತನ್ನ ದುಡಿಮೆಯ ಕ್ಷೇತ್ರವನ್ನು ದ್ವಿಗುಣಗೊಳಿಸಿಕೊಂಡಿದ್ದಾಳೆ. ಒಂದು ರೀತಿಯಲ್ಲಿ ಬಾಣಲೆಯಿಂದ ಬೆಂಕಿಗೆ ಎಂಬಂತೆ ಅವಳ ಸ್ಥಿತಿ. ಪುರುಷಪ್ರಾಧಾನ್ಯತೆಯ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ ಶೋಷಣೆಗೆ ಪ್ರತಿಯಾಗಿ ದ್ವೇಷದ ಭಾವನೆ ಸಲ್ಲದೆಂದು ಇಲ್ಲಿನ ಇಂಗಿತ. ಕವನಗಳ ಭಾಷೆ ಪ್ರತೀಕಾರಾತ್ಮಕ ಧೋರಣೆಯನ್ನು ಬಿಟ್ಟುಕೊಟ್ಟು ಸೌಹಾರ್ದತೆಯಿಂದ ಬಾಳಬೇಕಾದ ಅಗತ್ಯವನ್ನು ಹೇಳುತ್ತಿವೆ. ಹೆಣ್ಣುಮಕ್ಕಳ ಶೋಷಣೆ ಇಂದಿಗೂ ಕಡಿಮೆಯಾಗದೆ ಬೇರೆ ರೀತಿಗಳಲ್ಲಿ ಅದು ಬದಲಾವಣೆಗೊಂಡು ಆಕೆಯನ್ನು ಕಾಡುತ್ತಿದೆ. ಉದ್ಯೋಗಸ್ಥ ಸ್ತ್ರೀ, ಜಾಹೀರಾತಿನ ಸ್ತ್ರೀ ಮುಂತಾದ ನವಶೋಷಣೆಯ ಮುಖಗಳನ್ನು ಇಲ್ಲಿ ತೆರೆದಿರಿಸಿದ್ದಾರೆ. ತೆಲುಗು ಮೂಲದ ಕವನಗಳನ್ನು ಶ್ರೀ ಗುರುಮೂರ್ತಿ ಪೆಂಡಕೂರು ಅನುವಾದಿಸಿದ್ದಾರೆ.

 

Related Books