ದಡ ಬಿಟ್ಟ ದೋಣಿ

Author : ಕೆ.ಪಿ. ಸುರೇಶ್

Pages 108

₹ 45.00
Year of Publication: 2003
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಸಾಗರ, ಕರ್ನಾಟಕ- 577417

Synopsys

‘ದಡ ಬಿಟ್ಟ ದೋಣಿ’ ಕೆ.ಪಿ. ಸುರೇಶ ಅವರ ಕವನಸಂಕಲನ. ಸಾಹಿತಿ ಜಯಂತ ಕಾಯ್ಕಿಣಿ ಅವರು ಬೆನ್ನುಡಿ ಬರೆದಿದ್ದಾರೆ. ಯಾವುದೇ ಬಗೆಯ ಸಿಲೆಬಸ್ ಇಟ್ಟುಕೊಳ್ಳದೇ, ವಿಶಾಲ ಸೋಜಿಗದ ಬಾಳಿನೊಂದಿಗಿನ ನಂಟಿನ ಸೆಳಕುಗಳಂತೆ ಮೂಡಿರುವ ಈ ಕವಿತೆಗಳು, ತಿಳಿಯುವ ನೀರವದಲ್ಲಿ ಎಲ್ಲವನ್ನೂ ಮೈಯೆಲ್ಲಾ ಕಣ್ಣಾಗಿ ನೋಡುತ್ತಿವೆ. ಮನುಜ ಕಣ್ಣಿನಷ್ಟೇ ಸಹಜವಾಗಿ, ಕಾಡಾನೆಯ ಕಣ್ಣಿಂದ, ಪಾನಪಾತ್ರೆಯ ಅಂಚಿಗೆ ಕೂತ ನೊಣದ ಕಣ್ಣಿಂದ, 'ನೀರ ಸೀಳದೆ ಈಸು ನೀರ ಪಳಗಿಸುವ ಕುಶಲಿ-ಮೀನ ಕಣ್ಣಿಂದ-ಇಲ್ಲಿ ಜಗದ ಚೆಲುವೇ ನಮ್ಮೆಡೆ ಮುಖ ಮಾಡಿದೆ ಎನ್ನುತ್ತಾರೆ ಕಾಯ್ಕಿಣಿ. ರೆಕ್ಕೆ ಒಡೆಯುವ ಮುನ್ನದ ಕಂಬಳಿಹುಳುವಿನ ಕಣ್ಣಲ್ಲಿ ನಿರಾಮಯ ಧೈರ್ಯ' ಕಾಣುತ್ತಿದೆ. ಭಗವಿಲ್ಲದ ಅಂಗಾಗಗಳ ಮೇಲೆ ಜೇಡರ ಹುಳು ಚಲಿಸುತ್ತಿದೆ. ತನ್ನ ಕೊಂಬೆಗೆ ನೇಣು ಹಾಕಿಕೊಂಡವನನ್ನು ಮರ ತನ್ನದೇ 'ಹಣ್ಣಿನಂತೆ ನೋಡಿದೆ. ಬತ್ತಿ ಎಂಬುದು ಬೆಳಕಿನ ಬೇರಿನಂತೆ ತೋರಿದೆ. “ಮಾರದೆ ಉಳಿದ ತರಕಾರಿ, ಸುಳಿವ ಜನ, ಇಳಿವ ಮಳೆ, ಈ ಎಲ್ಲವೂ ಮರುಹುಟ್ಟು ಪಡೆಯುತಿದೆ-ಇಲ್ಲಿ ಲೋಕದವಸರದ ಗಾಣದಲ್ಲಿ ಸುತ್ತಿ ಹಣ್ಣಾದ ಕವಿಜೀವ, ವಿಶ್ವದ ತಿಗರಿಯ ಕೇಂದ್ರದಲ್ಲಿ ಕೂತು ತಿರುಗಿ “ನಿತ್ತಲ' ಚಲನೆಯಲ್ಲಿ ರೂಪುಗೊಳ್ಳಲು ತವಕಿಸುತ್ತಿದೆ. ಇಂದಿನ ಬಹುತೇಕ ಕಾವ್ಯ 'ಪತ್ರಿಕೆಯಂತೆ, ವಿವರಗಳ ಜಾಗ ಬದಲಿಸುವುದರಲ್ಲೇ ನಿರತವಾಗಿರುವಾಗ, ಕ್ರಿಯಾಪದಗಳ ಹಂಗಿನಿಂದ ಬಿಡಿಸಿ ಕವಿತೆಗೆ ತಮ್ಮದೇ ಉಸಿರೂಡುತ್ತಿರುವ ಕೆ.ಪಿ ಸುರೇಶ ಅವರ ಈ ಸಂಕಲನ 'ವಿಶಿಷ್ಟದ ದಾಹವನ್ನು ಭಾರವಿಲ್ಲದೆ ಹಂಚಿಕೊಳ್ಳುವ ಅಪರೂಪದ ತಾಜಾ ಕೃತಿಯಾಗಿದೆ ಎಂದು ಜಯಂತ ಕಾಯ್ಕಿಣಿ ಅಭಿಪ್ರಾಯ ಪಟ್ಟಿದ್ದಾರೆ.

About the Author

ಕೆ.ಪಿ. ಸುರೇಶ್

ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.  ಸುಸ್ಥಿರ/ಸಾವಯವ ಕೃಷಿ,  ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ 'ಅನಾಮಿಕ'ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ...

READ MORE

Related Books